ಡಿನ್ನರ್ ಮೀಟಿಂಗ್: ಅದು ಮುದ್ದೆ ಸಭೆಯೇ ಹೊರತು, ಹುದ್ದೆ ಸಭೆ ಅಲ್ಲ: ಪ್ರಿಯಾಂಕ್ ಖರ್ಗೆ

Published : Oct 31, 2023, 06:01 AM IST
ಡಿನ್ನರ್ ಮೀಟಿಂಗ್: ಅದು ಮುದ್ದೆ ಸಭೆಯೇ ಹೊರತು, ಹುದ್ದೆ ಸಭೆ ಅಲ್ಲ: ಪ್ರಿಯಾಂಕ್ ಖರ್ಗೆ

ಸಾರಾಂಶ

, ನನ್ನನ್ನೂ ಸೇರಿ ನಮ್ಮ ನಾಯಕರನ್ನು ಪರಮೇಶ್ವರ್‌ ಅವರು ಊಟಕ್ಕೆ ಕರೆದಿದ್ದರು. ಅದು ಯಾವುದೇ ಹುದ್ದೆ ಬಗೆಗಿನ ಸಭೆಯಲ್ಲ ಕೇವಲ ಮುದ್ದೆ ಬಗೆಗಿನ ಸಭೆ. ಹೀಗಿದ್ದರೂ ಅಲ್ಲಿ ನಡೆದಿದ್ದ ಚರ್ಚೆ ಬಗ್ಗೆ ಮಾಧ್ಯಮದವರಿಗೇ ಹೆಚ್ಚಿಗೆ ಗೊತ್ತಿದ್ದಂತೆ ಏನೇನೋ ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು sಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು (ಅ.31) :  ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲ ಸಚಿವರು, ಶಾಸಕರು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನಿವಾಸದಲ್ಲಿ ನಡೆಸಿರುವ ಡಿನ್ನರ್ ಸಭೆಗೆ ವಿಶೇಷ ಅರ್ಥ ಕಲ್ಪಿಸುವುದು ಬೇಕಾಗಿಲ್ಲ. ಮುಖ್ಯಮಂತ್ರಿಗಳು ಬೇರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದನ್ನೇ ತಪ್ಪಾಗಿ ಬಿಂಬಿಸಬಾರದು. ಅದು ಮುದ್ದೆ ಸಭೆಯೇ ಹೊರತು ಹುದ್ದೆ ಸಭೆಯಲ್ಲ’ ಎಂದು ಪ್ರಿಯಾಂಕ್‌ ಖರ್ಗೆ, ಜಮೀರ್ ಅಹಮದ್‌ ಸೇರಿ ಹಲವು ಸಚಿವರು ಡಿನ್ನರ್ ಸಭೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚೆಗೆ ಡಿ.ಕೆ. ಶಿವಕುಮಾರ್‌ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಹಲವರು ಶಾಸಕರು, ಸಚಿವರೊಂದಿಗೆ ದಿಢೀರನೆ ಪರಮೇಶ್ವರ್‌ ನಿವಾಸದಲ್ಲಿ ರಾತ್ರಿ ಭೂಜನದ ನೆಪದಲ್ಲಿ ಸಭೆ ನಡೆಸಿದ್ದರು. ಇದು ರಾಜಕೀಯ ವಲದಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಮೀಟಿಂಗ್, ಕಾಂಗ್ರೆಸ್ ನಾಯಕರಿಗೆ ಡಿಕೆಶಿ ವಾರ್ನಿಂಗ್!

ಈ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ, ಜಮೀರ್ ಅಹಮದ್ ಖಾನ್‌, ಎಂ.ಬಿ. ಪಾಟೀಲ್‌, ದಿನೇಶ್ ಗುಂಡೂರಾವ್‌ ಸೇರಿದಂತೆ ಹಲವು ಸಚಿವರು ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.

ಸಭೆ ಹುದ್ದೆ ಬಗ್ಗೆ ಅಲ್ಲ, ಮುದ್ದೆ ಬಗ್ಗೆ: ಪ್ರಿಯಾಂಕ್:

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ಖರ್ಗೆ, ನನ್ನನ್ನೂ ಸೇರಿ ನಮ್ಮ ನಾಯಕರನ್ನು ಪರಮೇಶ್ವರ್‌ ಅವರು ಊಟಕ್ಕೆ ಕರೆದಿದ್ದರು. ಅದು ಯಾವುದೇ ಹುದ್ದೆ ಬಗೆಗಿನ ಸಭೆಯಲ್ಲ ಕೇವಲ ಮುದ್ದೆ ಬಗೆಗಿನ ಸಭೆ. ಹೀಗಿದ್ದರೂ ಅಲ್ಲಿ ನಡೆದಿದ್ದ ಚರ್ಚೆ ಬಗ್ಗೆ ಮಾಧ್ಯಮದವರಿಗೇ ಹೆಚ್ಚಿಗೆ ಗೊತ್ತಿದ್ದಂತೆ ಏನೇನೋ ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಯಾಕೆ ಇರಲಿಲ್ಲ ಎಂಬ ಪ್ರಶ್ನೆಗೆ, ಮತ್ತೊಂದು ದಿನ ಡಿ.ಕೆ. ಶಿವಕುಮಾರ್‌ ಅವರನ್ನೂ ಊಟಕ್ಕೆ ಕರೆಯುತ್ತಾರೆ. ಉಪಮುಖ್ಯಮಂತ್ರಿಗಳು ಬರದೇ ಇರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಸಚಿವ ಜಮೀರ್‌ ಅಹಮದ್ ಖಾನ್ ಮಾತನಾಡಿ, ‘ಡಿನ್ನರ್ ಮೀಟಿಂಗ್‌ ಮಾಡೋದು ತಪ್ಪಾ? ಮುಖ್ಯಮಂತ್ರಿಗಳು ಬೇರೆಯವರ ಮನೆಯಲ್ಲಿ ಊಟ ಮಾಡಬಾರದಾ? ನನ್ನ ಮನೆಯಲ್ಲೂ ಊಟಕ್ಕೆ ಕರೆಯುತ್ತೇನೆ? ಊಟಕ್ಕೆ ಸೇರುವುದೂ ತಪ್ಪಾ?’ ಎಂದು ಪ್ರಶ್ನಿಸಿದರು.

ಸಚಿವ ದಿನೇಶ್‌ ಗುಂಡೂರಾವ್ ಮಾತನಾಡಿ, ‘ಮುಖ್ಯಮಂತ್ರಿ ಯಾರ ಮನೆಗೂ ಊಟಕ್ಕೆ ಹೋಗಬಾರದಾ? ಹೋದ ಕೂಡಲೇ ವಿಶೇಷ ಅರ್ಥ ಕಲ್ಪಿಸಲು ಹೇಗೆ ಸಾಧ್ಯ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ‘ನಾನೂ ಕೂಡ ಎಷ್ಟೋ ಬಾರಿ ಪರಮೇಶ್ವರ್ ಮನೆಗೆ ಊಟಕ್ಕೆ ಹೋಗಿದ್ದೇನೆ. ಈಗ ಮುಖ್ಯಮಂತ್ರಿಗಳು ಹೋಗಿದ್ದಾರೆ. ನಾನು ಕರೆದಾಗಲೂ ಮುಖ್ಯಮಂತ್ರಿಗಳು ಊಟಕ್ಕೆ ಬಂದಿದ್ದರು. ಊಟಕ್ಕೆ ಕುಳಿತಾಗ ರಾಜಕೀಯ ಚರ್ಚೆ ಆಗಿರುತ್ತದೆ. ಆದರೆ ಊಟಕ್ಕೆ ಕರೆದಿರುವುದನ್ನೇ ವಿಶೇಷವಾಗಿ ಅರ್ಥೈಸುವುದು ಬೇಡ’ ಎಂದರು.

ಆಪರೇಶನ್‌ ಕಮಲ ವಿರುದ್ಧ ಆಕ್ರೋಶ:

\Bಇನ್ನು ಬಿಜೆಪಿಯವರು ಆಪರೇಷನ್‌ ಕಮಲಕ್ಕೆ ಯತ್ನಿಸುತ್ತಿದ್ದಾರೆ ಎಂದೂ ಸಚಿವರು ಕಿಡಿ ಕಾರಿದ್ದು, \Bಹೈಕಮಾಂಡ್ ಎದುರು ಅಸ್ತಿತ್ವ ಉಳಿಸಿಕೊಳ್ಳಲು ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ರಾಜ್ಯ ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಹೀಗಾಗಿ ಆಪರೇಷನ್‌ ಕಮಲ ಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ದೂರಿದರು.

 

ನಮ್ಮದು ಬಡವರ ಪರವಾದ ಸರ್ಕಾರ: ಗೃಹ ಸಚಿವ ಪರಮೇಶ್ವರ್‌

ಜಮೀರ್ ಮಾತನಾಡಿ, ಬಿಜೆಪಿಯವರು ಆಪರೇಷನ್‌ ಮಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. 50 ಕೋಟಿ ರು. ನೀಡುತ್ತೇವೆ. ಸಚಿವ ಸ್ಥಾನ ನೀಡುತ್ತೇವೆ ಎಂದೆಲ್ಲಾ ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿಯವರು ಏನೇ ಮಾಡಿದರೂ ನಮ್ಮ 140 ಶಾಸಕರಲ್ಲಿ (137 ಕಾಂಗ್ರೆಸ್, 3 ಪಕ್ಷೇತರ) ಒಬ್ಬ ಶಾಸಕನೂ ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ದಿನೇಶ್ ಗುಂಡೂರಾವ್‌ ಮಾತನಾಡಿ, ಹೀನಾಯವಾಗಿ ಸೋತರೂ ಬಿಜೆಪಿಗೆ ಬುದ್ದಿ ಬಂದಿಲ್ಲ. ಬಿಜೆಪಿಯವರ ಬಳಿ ಸಾವಿರಾರು ಕೋಟಿ ರು. ಹಣ ಇರಬಹುದು. ದುಡ್ಡಿನ ಅಹಂಕಾರ ಎಲ್ಲೆ ಮೀರಿರಬಹುದು. ಇದಕ್ಕೆಲ್ಲಾ ಜನರೇ ಪಾಠ ಕಲಿಸುತ್ತಾರೆ ಎಂದರು.

ನಾನು ಎಂದೆಂದೂ ಸಿದ್ದರಾಮಯ್ಯ ಪರ: ಜಮೀರ್

ಅಧಿಕಾರ ಹಂಚಿಕೆ ಹೈಕಮಾಂಡ್ ಗೆ ಬಿಟ್ಟದ್ದು. ಆದರೆ ನಾನು ಯಾವತ್ತೂ ಸಿದ್ದರಾಮಯ್ಯ ಅವರ ಪರ ಎಂದು ಸಚಿವ ಜಮೀರ್‌ ಅಹಮದ್ ಖಾನ್‌ ಹೇಳಿದರು.

ನಾನು ಹಿಂದೆ, ಇಂದು ಹಾಗೂ ಯಾವಾಗಲೂ ಸಿದ್ದರಾಮಯ್ಯ ಪರ. ನಾವು ಅಭಿಪ್ರಾಯ ಹೇಳಬಹುದಷ್ಟೇ ನಿರ್ಧಾರ ಮಾಡಲಾಗಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು