ಮಹಾರಾಷ್ಟ್ರದಲ್ಲಿ ಮೀಸಲು ಹೋರಾಟ; ಕರ್ನಾಟಕದ ಬಸ್‌ಗೆ ಬೆಂಕಿ!

By Kannadaprabha NewsFirst Published Oct 31, 2023, 5:51 AM IST
Highlights

ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠ ಮೀಸಲು ಹೋರಾಟ ಹಿಂಸಾರೂಪ ಪಡೆದಿದ್ದು, ಸೋಮವಾರ ತಡರಾತ್ರಿ ಮಹಾರಾಷ್ಟ್ರದ ಉಮರ್ಗಾ ಬಳಿಯ ತುರೂರಿನಲ್ಲಿ ಕರ್ನಾಟಕದ ಬಸ್ಸೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ಬೀದರ್‌ (ಅ.31) :  ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠ ಮೀಸಲು ಹೋರಾಟ ಹಿಂಸಾರೂಪ ಪಡೆದಿದ್ದು, ಸೋಮವಾರ ತಡರಾತ್ರಿ ಮಹಾರಾಷ್ಟ್ರದ ಉಮರ್ಗಾ ಬಳಿಯ ತುರೂರಿನಲ್ಲಿ ಕರ್ನಾಟಕದ ಬಸ್ಸೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ಸುಮಾರು 200ಕ್ಕೂ ಹೆಚ್ಚು ಮಂದಿಯಿದ್ದ ಪ್ರತಿಭಟನಾಕಾರರು, ಬೀದರ್ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಬಸ್ಸನ್ನು ತಡೆದು, ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿ, ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ, ಸ್ಥಳೀಯ ಪೊಲೀಸರ ಸಹಕಾರದಿಂದ ಬಸ್ ನಲ್ಲಿದ್ದ 39 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದ್ದು, ಸುರಕ್ಷಿತವಾಗಿ ಅವರು ತಲುಪಬೇಕಾದ ಸ್ಥಳಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುವ ಬಸ್ಸುಗಳ ಸಂಚಾರವನ್ನು ಕೆಕೆಆರ್ ಟಿಸಿ ಸ್ಥಗಿತಗೊಳಿಸಿದೆ.

ಬೆಳಗಾವಿ ಗಡಿ ಪ್ರವೇಶಿಸದಂತೆ 3 ಮಹಾ ಸಚಿವರು, ಒಬ್ಬ ಸಂಸದರಿಗೆ ನಿರ್ಬಂಧ

click me!