Digi Yatra: ಬೆಂಗಳೂರು ಏರ್‌ಪೋರ್ಟಲ್ಲಿನ್ನು ಮುಖ ತೋರಿಸಿ, ವಿಮಾನ ಹತ್ತಿ!

By Govindaraj SFirst Published Dec 2, 2022, 3:40 AM IST
Highlights

ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಸುಂದರ ಟರ್ಮಿನಲ್‌ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರದಿಂದ ಫೇಷಿಯಲ್‌ ರೆಕಗ್ನಿಷನ್‌ ಸೌಲಭ್ಯವೂ ಆರಂಭಗೊಂಡಿದೆ.

ನವದೆಹಲಿ (ಡಿ.02): ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಸುಂದರ ಟರ್ಮಿನಲ್‌ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರದಿಂದ ಫೇಷಿಯಲ್‌ ರೆಕಗ್ನಿಷನ್‌ ಸೌಲಭ್ಯವೂ ಆರಂಭಗೊಂಡಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಾಖಲೆ ಪರಿಶೀಲನೆ ಪ್ರಕ್ರಿಯೆ ಮತ್ತಷ್ಟು ಸರಳ ಮತ್ತು ವೇಗವಾಗಿ ನಡೆಯಲಿದ್ದು, ಗ್ರಾಹಕರಿಗೆ ಸಮಯ ಉಳಿಸಲು ನೆರವಾಗಲಿದೆ.

ಫೇಷಿಯಲ್‌ ರೆಗ್ನಿಕಷನ್‌ (ಮುಖ ಗುರುತಿಸುವಿಕೆ) ಮೂಲಕ ದಾಖಲೆಗಳ ಪರಿಶೀಲನೆ ನಡೆಸುವ ‘ಡಿಜಿಯಾತ್ರಾ’ ಹೆಸರಿನ ಈ ಸೇವೆಯನ್ನು ಕೇಂದ್ರ ಸರ್ಕಾರ ಗುರುವಾರದಿಂದ ಬೆಂಗಳೂರು, ನವದೆಹಲಿ ಮತ್ತು ವಾರಾಣಸಿಯಲ್ಲಿ ಆರಂಭಿಸಿದೆ. ಮುಂದಿನ ಹಂತದಲ್ಲಿ ಇದನ್ನು ಹೈದ್ರಾಬಾದ್‌, ಪುಣೆ, ವಿಜಯವಾಡ ಮತ್ತು ಕೋಲ್ಕತಾಕ್ಕೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಧಿಕಾರ ಇದ್ದಾಗ ಕಾಂಗ್ರೆಸ್‌ ಭೂಮಿಹಕ್ಕು ಏಕೆ ಕೊಡಲಿಲ್ಲ?: ಸಂಸದ ರಾಘವೇಂದ್ರ

ಈ ನಡುವೆ ಈ ತಂತ್ರಜ್ಞಾನ ಬಳಕೆಯಿಂದ ಪ್ರಯಾಣಿಕರ ಮಾಹಿತಿ ಸೋರಿಕೆಯಾಗುವ ಭೀತಿ ಕುರಿತು ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಡಿಜಿಯಾತ್ರಾ ಪ್ರಯಾಣಿಕರು ಹಂಚಿಕೊಂಡಿರುವ ಮಾಹಿತಿಯನ್ನು ಎನ್‌ಕ್ರಿಪ್ಟೆಡ್‌ ಸ್ವರೂಪದಲ್ಲಿ ವಿಕೇಂದ್ರೀಕೃತವಾಗಿ ಸಂಗ್ರಹಿಸಲಾಗುತ್ತದೆ. ಪ್ರಯಾಣದ 24 ಗಂಟೆಗಳ ಬಳಿಕ ವಿಮಾನ ನಿಲ್ದಾಣದ ಸರ್ವರ್‌ನಿಂದ ಈ ಮಾಹಿತಿ ತನ್ನಿಂದ ತಾನೇ ಅಳಿಸಿಹೋಗುತ್ತದೆ’ ಎಂದು ಭರವಸೆ ನೀಡಿದ್ದಾರೆ.

ಡಿಜಿಯಾತ್ರಾ ಬಳಕೆ ಹೇಗೆ?: ಡಿಜಿಯಾತ್ರಾ ಸೌಲಭ್ಯವನ್ನು ಅಂತಾರಾಷ್ಟ್ರೀಯ ಪ್ರಯಾಣಿಕರು ಮಾತ್ರವಲ್ಲ, ದೇಶೀಯ ಪ್ರಯಾಣಿಕರೂ ಬಳಸಿಕೊಳ್ಳಬಹುದಾಗಿದೆ. ಡಿಜಿಯಾತ್ರಾ ಆ್ಯಪ್‌ ಆ್ಯಂಡ್ರಾಯ್ಡ್‌ ಹಾಗೂ ಐಒಎಸ್‌ ಫೋನುಗಳಲ್ಲಿ ಲಭ್ಯವಿದೆ. ಈ ಸೌಲಭ್ಯಕ್ಕಾಗಿ ಪ್ರಯಾಣಿಕರು ಡಿಜಿಯಾತ್ರಾ ಆ್ಯಪ್‌ನಲ್ಲಿ ಆಧಾರ್‌ ಕಾರ್ಡ್‌ ಹಾಗೂ ತಮ್ಮ ಭಾವಚಿತ್ರದೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ನಂತರ ಆನ್‌ಲೈನ್‌ ಮೂಲಕವೇ ಬೋರ್ಡಿಂಗ್‌ ಪಾಸ್‌ ಪಡೆದುಕೊಂಡು ಅದನ್ನು ವಿಮಾನ ನಿಲ್ದಾಣದ ಇ-ಗೇಟ್‌ನಲ್ಲಿ ಸ್ಕ್ಯಾನ್‌ ಮಾಡಿಸಬೇಕು. ಬಳಿಕ ಇ-ಗೇಟ್‌ ವಿಭಾಗಕ್ಕೆ ತೆರಳಿದರೆ ಅಲ್ಲಿ ಫೇಶಿಯಲ್‌ ರೆಕಗ್ನಿಶನ್‌ ವ್ಯವಸ್ಥೆ ಪ್ರಯಾಣಿಕರನ್ನು ಮುಖದಿಂದ ಗುರುತು ಹಿಡಿಯುತ್ತದೆ ಹಾಗೂ ಅವರ ಪ್ರಯಾಣದ ದಾಖಲೆಯನ್ನು ಮೌಲ್ಯೀಕರಿಸಿ ಪ್ರವೇಶಕ್ಕೆ ಅನುಮತಿಸುತ್ತದೆ. ಇದರಿಂದ ಪ್ರಯಾಣಿಕರು ಬೋರ್ಡಿಂಗ್‌ ಪಾಸ್‌ ಪಡೆಯಲು, ದಾಖಲೆ ಪರಿಶೀಲನೆಗಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವುದು ತಪ್ಪುತ್ತದೆ.

ಜೆಡಿಎಸ್‌ ಸ್ವತಂತ್ರ ಸರ್ಕಾರಕ್ಕೆ ಅವಕಾಶ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಏನಿದು ಹೊಸ ಸೌಲಭ್ಯ?
- ಡಿಜಿಯಾತ್ರಾ ಆ್ಯಪ್‌ ಡೌನ್ಲೋಡ್‌ ಮಾಡಿಕೊಂಡರೆ ವಿಮಾನಯಾನ ಸುಲಭ
- ಆ್ಯಪ್‌ನಲ್ಲಿ ಆಧಾರ್‌ ನೋಂದಣಿ ಮಾಡಿದರೆ ಫೇಷಿಯಲ್‌ ರೆಕಗ್ನಿಷನ್‌ ಸಾಧ್ಯ
- ಏರ್‌ಪೋರ್‌್ಟನ ಇ-ಗೇಟ್‌ನಲ್ಲಿ ಬೋರ್ಡಿಂಗ್‌ ಪಾಸ್‌ ಸ್ಕಾ್ಯನ್‌ ಮಾಡಬೇಕು
- ನಂತರ ಸೆನ್ಸರ್‌ಗಳು ಮುಖ ಗುರುತಿಸಿ ಗೇಟ್‌ ತೆರೆದು ಒಳಗೆ ಬಿಡುತ್ತವೆ
- ಪ್ರಯಾಣದ ದಾಖಲೆ ಫಟಾಫಟ್‌ ಪರಿಶೀಲನೆ, ಕ್ಯೂ ನಿಲ್ಲುವ ಅಗತ್ಯವಿಲ್ಲ

click me!