ದೇಶದಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ಪ್ರಯೋಗಕ್ಕೆ ಧಾರವಾಡ ಜಿಲ್ಲೆ ಆಯ್ಕೆ

By Sathish Kumar KH  |  First Published May 30, 2023, 10:36 PM IST

ದೇಶದಲ್ಲಿ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ಆಳವಾಗಿಸಲು, ಆರ್‌ಬಿಐ ಪ್ರಾಯೋಗಿಕ ಕಾರ್ಯಕ್ರಮದಡಿಯಲ್ಲಿ ಧಾರವಾಡ ಜಿಲ್ಲೆಯನ್ನು ಆಯ್ಕೆ ಮಾಡಿದೆ.


ಧಾರವಾಡ (ಮೇ 30): ದೇಶದಲ್ಲಿ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ಆಳವಾಗಿಸಲು, ಆರ್‌ಬಿಐ ಪ್ರಾಯೋಗಿಕ ಕಾರ್ಯಕ್ರಮದಡಿಯಲ್ಲಿ ಧಾರವಾಡ ಜಿಲ್ಲೆಯನ್ನು ಆಯ್ಕೆ ಮಾಡಿದ್ದು, ಜಿಲ್ಲೆಯಲ್ಲಿ ಬ್ಯಾಂಕಿನ ವ್ಯವಹಾರಗಳು ಶೇ.100 ಡಿಜಿಟಲೀಕರಣ ಗೊಳಿಸಲು 30ನೇ ಸೆಪ್ಟೆಂಬರ್ ವರೆಗೆ ಗಡವು ಕೊಡಲಾಗಿದೆ ಇದಕ್ಕೆ ಬ್ಯಾಂಕ್‌ಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. 

ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಲಹಾ ಹಾಗೂ ಪ್ರಗತಿ ಸಮಿತಿ ಹಾಗೂ ಜಿಲ್ಲಾಮಟ್ಟದ ಬ್ಯಾಂಕರುಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ದೇಶದಲ್ಲಿ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ಆಳವಾಗಿಸಲು, ಆರ್‌ಬಿಐ ಪ್ರಾಯೋಗಿಕ ಕಾರ್ಯಕ್ರಮದಡಿಯಲ್ಲಿ ಧಾರವಾಡ ಜಿಲ್ಲೆಯನ್ನು ಆಯ್ಕೆ ಮಾಡಿದ್ದು, ಜಿಲ್ಲೆಯಲ್ಲಿ ಬ್ಯಾಂಕಿನ ವ್ಯವಹಾರಗಳು ಶೇ.100 ಡಿಜಿಟಲೀಕರಣ ಗೊಳಿಸಲು 30ನೇ ಸೆಪ್ಟೆಂಬರ್ ವರೆಗೆ ಗಡವು ಕೊಡಲಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕರಗಳನ್ನು ನಿಗದಿತ ಅವಧಿಯೊಳಗಾಗಿ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳನ್ನು ಡಿಜಿಟಲೀಕರಿಸುವ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು.

Latest Videos

undefined

ಸರ್ಕಾರಿ ನೌಕರರು ಆಯ್ತು, ರೈತರಿಗೆ ಗುಡ್‌ ನ್ಯೂಸ್‌ ಕೊಟ್ಟ ಕಾಂಗ್ರೆಸ್‌ ಸರ್ಕಾರ

ಧಾರವಾಡದಲ್ಲಿ 15,258 ಕೋಟಿ ರೂ. ಸಾಲ ವಿತರಣೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ವಿವಿಧ ಜನಕಲ್ಯಾಣ ಯೋಜನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಆಧ್ಯತೆ ಮೇರೆಗೆ ಸ್ಪಂದಿಸಬೇಕು. 2022-23ನೇ ಸಾಲಿನ ಜಿಲ್ಲಾ ಬ್ಯಾಂಕುಗಳ ನಾಲ್ಕನೇ ತ್ರೈಮಾಸಿಕ ಅಂತ್ಯಕ್ಕೆ ಒಟ್ಟು 15258.75 ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿದ್ದು, ಶೇ.98 ಗುರಿ ಸಾಧಿಸಲಾಗಿದೆ. 1819.39 ಕೋಟಿ ಬೆಳೆಸಾಲ, 1844.76 ಕೋರಿ ಕೃಷಿ ಅವಧಿ ಸಾಲ, 3664-15 ಕೃಷಿ ಸಾಲ, 4161 ಕೋಟಿ ಸೂಕ್ಷ್ಮ ಸಣ್ಣ ಮಧ್ಯಮ ಉದ್ಯಮಗಳ ಸಾಲ, 8452 ವಿವಿಧ ಆದ್ಯತಾ ವಲಯದ ಸಾಲ, 6806 ಆದ್ಯತಾ ರಹಿತ ಸಾಲವನ್ನು ವಿತರಣೆ ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಸಾಲಕ್ಕಾಗಿ ಸಲ್ಲಿಕೆಯಾದ ಅರ್ಜಿ ವಿಲೇವಾರಿ ಮಾಡಿ: ವಿವಿಧ ಬ್ಯಾಂಕ್‍ಗಳಲ್ಲಿ ಬಾಕಿಯಿರುವ ವಿವಿಧ ಇಲಾಖೆಗಳ ಹಾಗೂ ಅಭಿವೃದ್ಧಿ ನಿಗಮಗಳ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಯಿತು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಪ್ರಭುದೇವ ಅವರು ಈ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ರೂಟ್‍ಸೆಟ್) ಯ ವಾರ್ಷಿಕ ಗುರಿಯನ್ನು 800 ರಿಂದ 1000 ಫಲಾನುಭವಿಗಳಿಗೆ ವಿಸ್ತರಿಸಲು ಹಾಗೂ ಹೊಸದಾದ ಕಾರ್ಯಕ್ರಮಣ್ಣು ಹಮ್ಮಿಕೊಳ್ಳಲು ಸೂಚಿಸಿದರು. ಹಾಗೂರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಎಲ್ಲ ಫಲಾನುಭವಿಗಳ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿ ಫಲಾನುಭವಿಗಳಿಗೆ  ಪ್ರೋತ್ಸಾಹ ಧನವನ್ನು ಪಡಿಯಲು ಸಹಕರಿಸಬೇಕೆಂದು ಬ್ಯಾಂಕರಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಹಿಳೆಯರಿಗೆ 3,789 ಕೋಟಿ ಸಾಲ ವಿತರಣೆ: ಜಿಲ್ಲಾ ಅಗ್ರಣೀಯ ಬ್ಯಾಂಕಿನ ಎಲ್‍ಡಿಎಮ್ ಪ್ರಭುದೇವ್ ಎನ್.ಜಿ.  ಅವರು ಮಾತನಾಡಿ, ವಾಣಿಜ್ಯ ಬ್ಯಾಂಕ್‍ಗಳು ಶೇ.96ರಷ್ಟು, ಕೆ.ವಿ.ಜಿ ಬ್ಯಾಂಕ್ ಶೇ. 86ರಷ್ಟು, ಕೆ.ಸಿ.ಸಿ ಬ್ಯಾಂಕ್  ಶೇ.159ರಷ್ಟು, ಕೆ.ಎಸ್,ಕಾರ್ಡ ಶೇ. 23ರಷ್ಟು ಮತ್ತು ಕೆ.ಎಸ್.ಎಫ್.ಸಿ ಶೇ. 7ರಷ್ಟು ಸಾಧನೆ ಮಾಡಿರುತ್ತವೆ ಎಂದು ಹೇಳಿದರು. ತಾಲ್ಲೂಕುವಾರು ಸಾಧನೆಯಲ್ಲಿ ಧಾರವಾಡ ಪ್ರಥಮ ಸ್ಥಾನದಲ್ಲಿದ್ದರೆ, ಹುಬ್ಬಳ್ಳಿ ನಗರ  ದ್ವಿತೀಯ ಸ್ಥಾನದಲ್ಲಿದೆ. ಹಾಗೆ ಇನ್ನುಳಿದ ತಾಲ್ಲೂಕುಗಳು ಕಲಘಟಗಿ, ಹುಬ್ಬಳ್ಳಿ ಗ್ರಾಮಾಂತರ, ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳ ನಂತರದ ಸ್ಥಾನಗಳಲ್ಲಿರುತ್ತವೆ ಎಂದರು ಜಿಲ್ಲೆಯಲ್ಲಿ ಮಾರ್ಚ್ 2023 ರ ಅಂತ್ಯಕ್ಕೆ ದುರ್ಬಲ ವರ್ಗದವರಿಗೆ ಒಟ್ಟು ರೂ. 4305.67ಕೋಟಿ ಸಾಲ ವಿತರಣೆ ಆಗಿರುತ್ತದೆ. ಮತ್ತು ಮಹಿಳೆಯರಿಗೆ ರೂ.3789.62ಕೋಟಿ ಸಾಲವನ್ನು ವಿತರಿಸಲಾಗಿದೆ. ಹಾಗೂ ಅಲ್ಪ ಸಂಖ್ಯಾತರಿಗೆರೂ. 1483.06ಕೋಟಿ ಸಾಲ ವಿತರಣೆ ಆಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು. 

ಕರ್ನಾಟಕ ಸರ್ಕಾರಿ ನೌಕರರಿಗೆ ಶೇ.4 ತುಟ್ಟಿಭತ್ಯೆ ಹೆಚ್ಚಳ: ಜನವರಿಯಿಂದ ಪೂರ್ವಾನ್ವಯ

ಬ್ಯಾಂಕ್‌ಗಳಿಂದ ಎಫ್‍ಎಲ್‍ಸಿಯುಗಳ ನೇಮಕಾತಿ ಮಾಡಿ: ಜನಸುರಕ್ಷಾ ಸಾಚೂರೇಶನ ಕ್ಯಾಂಪೇನ್‌ 1ನೇ ಏಪ್ರಿಲ್ 2023 ರಿಂದ 30ನೇ ಜೂನ್ 2023 ವರೆಗೆ ಜಾರಿಯಲ್ಲಿದ್ದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರ್ಕಾರಿ ಇಲಾಖೆಯವರು ಹಾಗೂ ಬ್ಯಾಂಕರ್‍ಗಳ ಸಮನ್ವಯದಲ್ಲಿ ಶಿಬಿರಗಳು ನಡೆಯುತ್ತಾ ಇದ್ದು ಅರ್ಹ ಫಲಾನುಭವಿಗಳು ಪ್ರಧಾನಮಂತ್ರಿ ವಿಮಾ ಯೋಜನೆಗಳಾದ ಪಿಎಂಎಸ್‍ಬಿವೈ ಮತ್ತು ಪಿಎಂಜೆಜೆಬಿವೈ ಗಳಲ್ಲಿ ದಾಖಲಸಿಕೊಳ್ಳಬೇಕೆಂದು ಹೇಳಿದರು ಆರ್.ಬಿ.ಐ ಅಧಿಕಾರಿ ಮಲಯ ಬಿಸ್ವಾಸ್ ಮಾತನಾಡಿ, ಆರ್ಥಿಕ ಸಾಕ್ಷರತಾ ಕೌನ್ಸಿಲರ್ (ಎಫ್‍ಎಲ್‍ಸಿ) ಇರದಂತಹ ತಾಲುಕೂಗಳಲ್ಲಿ ಸಂಭಂಧಪಟ್ಟ ಬ್ಯಾಂಕಗಳು ಬೇಗನೆ ಎಫ್‍ಎಲ್‍ಸಿಯುಗಳ ನೇಮಕಾತಿ ಮಾಡಬೇಕೆಂದು ಸೂಚಿಸಿದರು. ಪಿಎಂಎಂವೈ (ಪಿಎಂ ಮುದ್ರಾ ಯೋಜನೆ) ಯೋಜನೆಯಡಿ, ಹೆಚ್ಚಿನ ಫಲಾನುಭವಿಗಳನ್ನು ಸಾಲ ನೀಡಲು ಗುರುತಿಸಬೇಕೆಂದು ಬ್ಯಾಂಕುಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರೇಖಾ ಡೊಳ್ಳಿನ, ನಬಾರ್ಡ್ ಅಧಿಕಾರಿ ಮಯೂರ ಕಾಂಬಳೆ, ಬ್ಯಾಂಕ್ ಆಪ್ ಬರೋಡಾ ಪ್ರಾದೇಶಿಕ ಮುಖ್ಯಸ್ಥ ಬಸವರಾಜ ಬೆಲ್ಲದ ಹಾಗೂ ಜಿಲ್ಲಾಮಟ್ಟದ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರು ಸಭೆಯಲ್ಲಿ ಉಪಸ್ಥಿತರಿದ್ದರು.

click me!