ನನ್ನ ತಮ್ಮ 'ಚಿನ್ನಯ್ಯ' ಚಿನ್ನದಂಥಾ ವ್ಯಕ್ತಿ! ಯಾರೋ ಷಡ್ಯಂತ್ರ ಮಾಡಿದ್ದಾರೆಂದ ಅಣ್ಣ ಆರ್ಮುಗಂ

Published : Aug 25, 2025, 06:51 PM IST
Dharmasthala Mask man Chinnayya Brother Armugam

ಸಾರಾಂಶ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ ಆರೋಪದಲ್ಲಿ ಬಂಧಿತನಾಗಿರುವ 'ಮಾಸ್ಕ್‌ಮ್ಯಾನ್' ಚಿನ್ನಯ್ಯನ ಸಹೋದರ ಆರ್ಮುಗಂ, ಚಿನ್ನಯ್ಯನ ಕೃತ್ಯದ ಹಿಂದೆ ಬೇರೆಯವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಚಿನ್ನಯ್ಯ ಒಳ್ಳೆಯ ಹುಡುಗ, ಇಂತಹ ಕೆಲಸ ಮಾಡುವವನಲ್ಲ ಎಂದು ಹೇಳಿದ್ದಾರೆ.

ಚಾಮರಾಜನಗರ (ಆ.25): ಧರ್ಮಸ್ಥಳದಲ್ಲಿ ನಡೆದಿದ್ದ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪ ಮಾಡಿದ ಹಾಗೂ ಬುರುಡೆಗಳನ್ನು ತೆಗೆದುಕೊಂಡು ಬಂದ ಪ್ರಕರಣದ ಆರೋಪಿ, 'ಮಾಸ್ಕ್‌ಮ್ಯಾನ್' ಎಂದೇ ಕುಖ್ಯಾತಿ ಪಡೆದಿದ್ದ ಚಿನ್ನಯ್ಯನ ಬಂಧನದ ಬೆನ್ನಲ್ಲೇ, ಆತನ ಸಹೋದರ ಆರ್ಮುಗಂ ಹಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ತಮ್ಮ ಚಿನ್ನಯ್ಯ ಬಹಳ ಒಳ್ಳೆಯ ಹುಡುಗ. ಇಂತಹ ಕೆಲಸ ಮಾಡುವವನಲ್ಲ. ಅವನೇಕೆ ಈ ರೀತಿ ಮಾಡಿದ ಎಂದು ನಮಗೆ ಅರ್ಥವಾಗುತ್ತಿಲ್ಲ. ಚಿನ್ನಯ್ಯನ ಈ ಕೃತ್ಯದ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಎಂದು ಚಿನ್ನಯ್ಯನ ಅಣ್ಣ ಆರ್ಮುಗಂ ಗಂಭೀರ ಆರೋಪ ಮಾಡಿದ್ದಾರೆ.

ತಮಿಳುನಾಡಿನ ಸತ್ಯಮಂಗಲಂ ತಾಲ್ಲೂಕಿನ ಚಿಕ್ಕರಸಂಪಾಳ್ಯ ಗ್ರಾಮದಲ್ಲಿ ನೆಲೆಸಿರುವ ಆರ್ಮುಗಂ, ತಮ್ಮನ ಬಗ್ಗೆ ಮಾತನಾಡುತ್ತ, 'ಚಿನ್ನಯ್ಯ ಸುಮಾರು 7 ವರ್ಷಗಳ ಹಿಂದೆ ಧರ್ಮಸ್ಥಳದಿಂದ ತಮ್ಮ ಊರಿಗೆ ವಾಪಸ್ ಬಂದಿದ್ದನು. ನನಗೆ ಧರ್ಮಸ್ಥಳದಲ್ಲಿ ಇರಲು ಇಷ್ಟವಿಲ್ಲ, ಹಾಗಾಗಿ ಬಂದೆ' ಎಂದು ಚಿನ್ನಯ್ಯ ಹೇಳಿದ್ದನು. ಅಲ್ಲಿಂದ ಬಂದ ನಂತರ ಚಿಕ್ಕರಸಂಪಾಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಆದರೆ, ಕಳೆದ 2 ತಿಂಗಳಿನಿಂದ ಚಿನ್ನಯ್ಯ ಕೆಲಸಕ್ಕೆ ಹೋದವನು ಮತ್ತೆ ವಾಪಸ್ ಬಂದಿಲ್ಲ ಎಂದು ಆರ್ಮುಗಂ ಹೇಳಿದ್ದಾರೆ.

ನನ್ನ ತಮ್ಮ ಬಹಳ ಒಳ್ಳೆಯ ಹುಡುಗ

ಆರ್ಮುಗಂ ತಮ್ಮನ ಬಗ್ಗೆ ಭಾವುಕರಾಗಿ ಮಾತನಾಡುತ್ತ, 'ನನ್ನ ತಮ್ಮ ಚಿನ್ನಯ್ಯ ಬಹಳ ಒಳ್ಳೆಯ ಹುಡುಗ. ಇಂತಹ ಕೆಲಸ ಮಾಡುವವನಲ್ಲ. ಅವನೇಕೆ ಈ ರೀತಿ ಮಾಡಿದ ಎಂದು ನಮಗೆ ಅರ್ಥವಾಗುತ್ತಿಲ್ಲ. ಚಿನ್ನಯ್ಯನ ಈ ಕೃತ್ಯದ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. "ಯಾರಿದ್ದಾರೆ ಅನ್ನೋದು ಗೊತ್ತಿಲ್ಲ. ಅವನ ಹಿಂದೆ ಯಾರೋ ಇದ್ದಾರೆ ಅನಿಸುತ್ತೆ. ಯಾರು ಅವನನ್ನು ಈ ಕೆಲಸಕ್ಕೆ ಪ್ರೇರೇಪಿಸಿದ್ದಾರೆ ಅನ್ನೋದು ಚಿನ್ನಯ್ಯನೇ ಹೇಳಬೇಕು" ಎಂದು ಆರ್ಮುಗಂ ಒತ್ತಾಯಿಸಿದ್ದಾರೆ.

ಮತಾಂತರದ ಆರೋಪಕ್ಕೆ ಸ್ಪಷ್ಟನೆ:

ಚಿನ್ನಯ್ಯ ಮತಾಂತರವಾಗಿದ್ದಾನೆ ಎಂಬ ವದಂತಿಗಳ ಬಗ್ಗೆಯೂ ಆರ್ಮುಗಂ ಸ್ಪಷ್ಟನೆ ನೀಡಿದ್ದಾರೆ. 'ನಮ್ಮ ಕುಟುಂಬದವರು ಹಿಂದೂ ದೇವರನ್ನೇ ನಂಬಿಕೊಂಡಿದ್ದೇವೆ. ನನ್ನ ತಮ್ಮ ಕೂಡ ಮತಾಂತರವಾಗಿಲ್ಲ. ಆತ ಇಂತಹ ಕೆಲಸದಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ' ಎಂದು ಆರ್ಮುಗಂ ಹೇಳಿದ್ದಾರೆ.

ಚಿನ್ನಯ್ಯ ವಾಪಸ್ ಬರಬೇಕೆಂದು ಬಯಸಿರುವ ಆರ್ಮುಗಂ, 'ಒಂದು ವೇಳೆ ನನ್ನ ತಮ್ಮ ಮತ್ತೆ ವಾಪಸ್ ಬಂದರೆ, ದೇವರಿಗೆ ಕೈಮುಗಿದು ಬರುತ್ತೇನೆ' ಎಂದು ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡುವಾಗ ಆರ್ಮುಗಂ ಈ ಎಲ್ಲಾ ಹೇಳಿಕೆಗಳನ್ನು ನೀಡಿದ್ದು, ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಚಿನ್ನಯ್ಯನ ಬಂಧನದ ನಂತರ ಮತ್ತಷ್ಟು ತನಿಖೆಗಳು ನಡೆಯಬೇಕಿದ್ದು, ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ಬೆಳಕಿಗೆ ಬರಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!