
ಧರ್ಮಸ್ಥಳ (ಸೆ.12) ಧರ್ಮಸ್ಥಳ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡು ಇದೀಗ ಆರೋಪ ಮಾಡಿದು ಬುರುಡೆ ಗ್ಯಾಂಗ್ ತನಿಖೆ ಎದುರಿಸುವಂತಾಗಿದೆ. ಬರುಡೆ ಹಿಡಿದು ಬಂದ ಮಾಸ್ಕ್ ಮ್ಯಾನ್ ಚಿನ್ನಯ್ಯ ನ್ಯಾಯಾಂಗ ಬಂಧನದಲ್ಲಿದ್ದರೆ, ಇತ್ತ ಗಂಭೀರ ಆರೋಪ ಮಾಡಿದ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಸೇರಿದಂತೆ ಕೆಲವರು ವಿಚಾರಣೆ ಎದುರಿಸುತ್ತಿದ್ದಾರೆ. ಇದರ ನಡುವೆ ಸೌಜನ್ಯ ಮಾವ ವಿಠಲ ಗೌಡ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಬಂಗ್ಲಗುಡ್ಡೆ ರಹಸ್ಯ ಭೇಧಿಸಲು ಮುಂದಾಗಿದ್ದಾರೆ. ವಿಠಲ ಗೌಡ ಸೇರಿದಂತೆ ಕೆಲ ಹೋರಾಟಗಾರರು ಬಂಗ್ಲಗುಡ್ಡ ಕುರಿತು ಹಲವು ಬಾರಿ ಉಲ್ಲೇಖ ಮಾಡಿದ್ದಾರೆ. ಇದೀಗ ಈ ರಹಸ್ಯ ಶೋಧಿಸಲು ಎಸ್ಐಟಿ ಅಧಿಕಾರಿಗಳ ತಂಡ ರಹಸ್ಯವಾಗಿ ಬಂಗ್ಲಗುಡ್ಡಗೆ ತೆರಳಿ ಶೋಧ ಕಾರ್ಯ ನಡೆಸಿದೆ.
ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರಗಳು ಇವೆ ಅನ್ನೋ ಆರೋಪಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಎಸ್‌ಐಟಿ ಎಸ್ಪಿ ಸೈಮನ್ ನೇತೃತ್ವದ ತಂಡ ರಹಸ್ಯವಾಗಿ ಬಂಗ್ಲಗುಡ್ಡೆಗೆ ತೆರಳಿ ಶೋಧ ಕಾರ್ಯ ನಡೆಸಿದೆ. ಕೇವಲ ಅಧಿಕಾರಿಗಳು ಮಾತ್ರ ತೆರಳಿ ಶೋಧ ಕಾರ್ಯ ನಡೆಸುತ್ತಿದೆ. ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರಗಳು ಇದೆಯಾ ಅನ್ನೋ ಮಾಹಿತಿ ಸಂಗ್ರಹಿಸುತ್ತಿದೆ. ಶೋಧ ಕಾರ್ಯಾಚರಣೆಯಲ್ಲಿ ಹಲವು ಮಾಹಿತಿ ಸಂಗ್ರಹಿಸಿದೆ.
ಬಂಗ್ಲಗುಡ್ಡ ಕಾಡಿನಲ್ಲಿ ಸುತ್ತಾಡಿ ಕೇವಲ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳ ತಂಡ ದಾಖಲೆ ಮಾಡಿದೆ. ಇತ್ತ ವಿಠಲ ಗೌಡ ಸೇರಿದಂತೆ ಇತರ ಹೋರಾಟಗಾರರ ವಿಚಾರಣೆ ಮುಂದುವರಿದೆ. ಇತ್ತ ಎಫ್ಎಸಎಲ್‌ಗೆ ಕಳುಹಿಸಿದ ಬುರುಡೆ ವರದಿ ಕೆಲವೇ ದಿನಗಳಲ್ಲಿ ಬರಲಿದೆ. ಹೀಗಾಗಿ ತನಿಖೆಗೆ ಈ ವರದಿ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.
ಧರ್ಮಸ್ಥಳ ಬುರುಡೆ ಕೇಸ್: ಸುಳ್ಳು ಹೇಳೋದ್ರಲ್ಲಿ ಸುಜಾತಾ ಭಟ್ ಮೀರಿಸಿದ ಯೂಟೂಬರ್ ಸುಮಂತ್!
ಮಾಸ್ಕ್ ಮ್ಯಾನ್ ಚಿನ್ನಯ್ಯ ತಂದ ಬುರುಡೆ ಎಲ್ಲಿದ್ದು ಅನ್ನೋ ಕುರಿತು ಎಸ್ಐಟಿ ಅದಿಕಾರಿಗಲು ತನಿಖೆ ತೀವ್ರಗೊಳಿಸಿದ್ದಾರೆ. ಈ ಸಂಬಂಧ ವಿಠಲ ಗೌಡ ಹಾಗೂ ಜಯಂತ್ ಟಿ ವಿಚಾರಣೆ ನಡೆಸುತ್ತಿದೆ. ಈಗಾಗಲೇ ವಿಠಲ ಗೌಡನ ಕರೆದುಕೊಂಡು ಬಂಗ್ಲಗುಡ್ಡಗೆ ತೆರಳಿ ಸ್ಥಳ ಮಹಜರು ನಡೆಸಲಾಗಿದೆ. ಬುರುಡೆ ತಂದ ಸ್ಥಳದ ಪರಿಶೀಲನೆ ನಡೆಸಲಾಗಿದೆ. ಒಂದು ಕಡೆಯಿಂದ ಬುರುಡೆ ತಂದು, ಮತ್ತೊಂದು ಕಡೆ ಇಟ್ಟಿದ್ದ ವಿಠಲ ಗೌಡ. ಹೀಗಾಗಿ ಎಸ್ಐಟಿ ಅಧಿಕಾರಿಗಳು ವಿಠಲ ಗೌಡನ ವಿಚಾರಣೆ ತೀವ್ರಗೊಳಿಸಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಬುರುಡೆಯನ್ನು ತಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ವಿಠಲ ಗೌಡನಿಂದ ಮಾಹಿತಿ ಪಡೆದು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬರುಡೆ ತರುವಾಗ ವಿಠಲ ಗೌಡನಿಗೆ ಪ್ರದೀಪ್ ಗೌಡ ಸಾಥ್ ನೀಡಿದ್ದ. ಹೀಗಾಗಿ ಪ್ರದೀಪ್ ಗೌಡ ವಿಚಾರಣೆ ನಡೆಯಲಿದೆ.
ಸೌಜನ್ಯ ಮಾವನ ಮಹಾಮಸಲತ್ತು; ಸ್ನೇಹಮಯಿ ಕೃಷ್ಣ ಸಿಡಿಸಿದ ಹೊಸ ನ್ಯೂಸ್ ಬಾಂಬ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ