ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ನೀಡುವ ಪ್ರತಿಷ್ಠಿತ 'ಅಭಿವೃದ್ಧಿ ಪತ್ರಿಕೋದ್ಯಮ' ಪ್ರಶಸ್ತಿಗೆ ಹಿರಿಯ ಅಂಕಣಕಾರರಾದ ಗಿರೀಶ್ ಲಿಂಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು (ಜ.05): ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ನೀಡುವ ಪ್ರತಿಷ್ಠಿತ 'ಅಭಿವೃದ್ಧಿ ಪತ್ರಿಕೋದ್ಯಮ' ಪ್ರಶಸ್ತಿಗೆ ಹಿರಿಯ ಅಂಕಣಕಾರರಾದ ಗಿರೀಶ್ ಲಿಂಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಬಾಹ್ಯಾಕಾಶ, ರಕ್ಷಣೆ, ಮತ್ತು ವಿದೇಶಾಂಗ ನೀತಿಯ ವಿಚಾರಗಳಲ್ಲಿ ಮಾಹಿತಿ ಪೂರ್ಣ ಲೇಖನಗಳನ್ನು ಬರೆಯುತ್ತಿರುವ ಗಿರೀಶ್ ಲಿಂಗಣ್ಣ ಅವರ ಕೊಡುಗೆಯನ್ನು ಗುರುತಿಸಿ, ಈ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿಯ ಜೊತೆಗೆ, ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಗುತ್ತದೆ. ಆದರೆ, ಗಿರೀಶ್ ಲಿಂಗಣ್ಣ ಅವರು ಈ ಬಹುಮಾನದ ಮೊತ್ತವನ್ನು ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘಕ್ಕೆ ಹಸ್ತಾಂತರಿಸಿ, ಅದರಿಂದ ಹಿರಿಯ ಪರಮಾಣು ವಿಜ್ಞಾನಿ, ಕರ್ನಾಟಕದವರೇ ಆದ ಡಾ. ರಾಜಾ ರಾಮಣ್ಣ ಅವರ ಹೆಸರಿನಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಿ, ಅದರಿಂದ ಬರುವ ಮೊತ್ತವನ್ನು ಪ್ರತಿ ವರ್ಷವೂ ವಿಜ್ಞಾನದ ಕುರಿತು ಮಾಹಿತಿಪೂರ್ಣ ಲೇಖನಗಳನ್ನು ಪ್ರಕಟಿಸುವ ಪತ್ರಕರ್ತ ಅಥವಾ ಅಂಕಣಕಾರರಿಗೆ ನೀಡಬೇಕೆಂದು ಕೆಯುಡಬ್ಲ್ಯುಜೆಗೆ ಮನವಿ ಮಾಡಿಕೊಂಡಿದ್ದರು.
|| Jai Sri Gurudev ||
Heartiest congratulations to Shri. Girish Linganna on receiving the prestigious Development Journalism Award by the Department of Information and Public Relations, Government of Karnataka! 🏆📖
Your significant contributions in space, defense, and global… pic.twitter.com/PfWpoAaDo1
ಅವರ ಮನವಿಯನ್ನು ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಒಪ್ಪಿಕೊಂಡು, ಪ್ರಶಂಸೆ ವ್ಯಕ್ತಪಡಿಸಿ, ದತ್ತಿ ನಿಧಿಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ, ಸ್ವತಃ ಪ್ರತಿಷ್ಠಿತ ಐಐಟಿ ಪದವೀಧರರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಗಿರೀಶ್ ಲಿಂಗಣ್ಣ ಅವರಿಗೆ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿ, ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.
ಇಸ್ರೋ ಬಾಹ್ಯಾಕಾಶ ನಿಲ್ದಾಣಗಳ ಡಾಕಿಂಗ್ ಪ್ರಯೋಗ: ಇದರ ಯಶಸ್ಸಿನಲ್ಲಿದೆ ಭಾರತದ ಶ್ರೇಯಸ್ಸು
'ಹೊಸ ಪೀಳಿಗೆಗೆ ಸ್ಫೂರ್ತಿ ನೀಡುವಲ್ಲಿ, ಸುಶಿಕ್ಷಿತರನ್ನಾಗಿಸುವಲ್ಲಿ ಬಾಹ್ಯಾಕಾಶ, ರಕ್ಷಣಾ ವ್ಯವಸ್ಥೆ ಹಾಗು ವಿದೇಶಾಂಗ ವ್ಯವಹಾರಗಳ ಕ್ಷೇತ್ರಗಳಲ್ಲಿ ಸಮರ್ಥವಾಗಿ ಬರವಣಿಗೆ ಮಾಡಬಲ್ಲ ಪ್ರತಿಭಾವಂತ ಲೇಖಕರ ಪಾತ್ರ ಬಹು ನಿರ್ಣಾಯಕವಾದುದು. ಅಂತಹ ಪ್ರತಿಭಾಶಾಲೀ ಲೇಖಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೃಷ್ಟಿಯಾಗಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಹೆಮ್ಮೆಗೆ ಕಾರಣಕರ್ತರಾದ ಗಿರೀಶ್ ಲಿಂಗಣ್ಣನವರ ಸಾಧನೆ ಶ್ಲಾಘನೀಯವಾದುದು' ಎಂದು ಸ್ವಾಮೀಜಿ ಹೇಳಿದ್ದಾರೆ.