ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಣ KUWJ ದತ್ತಿಗೆ; ಡಾ.ರಾಜಾ ರಾಮಣ್ಣ ಪ್ರಶಸ್ತಿ ಸ್ಥಾಪನೆಗೆ ನಿರ್ಧರಿಸಿದ ಗಿರೀಶ್ ಲಿಂಗಣ್ಣ

By Ravi Janekal  |  First Published Jan 3, 2025, 8:15 PM IST

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ವಿಜೇತ ಗಿರೀಶ್ ಲಿಂಗಣ್ಣ ಅವರು ಪ್ರಶಸ್ತಿ ಮೊತ್ತವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೀಡಿದ್ದಾರೆ. ಈ ಮೊತ್ತದಿಂದ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ವಿಜ್ಞಾನ ಬರಹಗಾರರಿಗೆ ಪ್ರಶಸ್ತಿ ನೀಡಲಾಗುವುದು.


ಬೆಂಗಳೂರು (ಜ.3): ವಾರ್ತಾ ಇಲಾಖೆ ಕೊಡ ಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಗಳನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದ್ತತಿನಿಧಿ ಪ್ರಶಸ್ತಿಗೆ ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಸಂಘಕ್ಕೆ ಅಧಿಕೃತವಾಗಿ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸ್ವಾಗತಿಸಿದ್ದಾರೆ.

Tap to resize

Latest Videos

ಕರ್ನಾಟಕದಲ್ಲಿ ವಿಜ್ಞಾನ ಬರಹಗಾರರಿಗೆ, ವಿಜ್ಞಾನ ಸಂವಾಹಕರಿಗೆ ಹೆಚ್ಚಿನ ಉತ್ತೇಜನ, ಬೆಂಬಲ ನೀಡುವ ನಿಟ್ಟಿನಲ್ಲಿ, ನಾನು ಈ ಪ್ರಶಸ್ತಿಯೊಡನೆ ನೀಡಲಾಗುವ ಒಂದು ಲಕ್ಷ ರೂ ಮೊತ್ತವನ್ನು ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ (KUWJ) ಹಸ್ತಾಂತರಿಸುತ್ತೇನೆ. ಈ ಮೊತ್ತದಿಂದ ನಮ್ಮ ರಾಜ್ಯದ ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಗಿರೀಶ್ ಲಿಂಗಣ್ಣ ಮನವಿ ಮಾಡಿದ್ದಾರೆ.

ಅಂಕಣಕಾರ ಗಿರೀಶ್ ಲಿಂಗಣ್ಣ ಅವರ ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜ್ಞಾನ, ರಕ್ಷಣೆ, ಬಾಹ್ಯಾಕಾಶದಂತಹ ಸಂಕೀರ್ಣ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ (ಕನ್ನಡ ಅಥವಾ ಇಂಗ್ಲೀಷ್)ಪತ್ರಕರ್ತರು, ಅಂಕಣಕಾರರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು. ಹೆಚ್ಚು ಬರಹಗಾರರು ಇಂತಹ ಪ್ರಮುಖ ವಿಚಾರಗಳ ಕುರಿತು ಬರೆಯುವಂತೆ ಮಾಡುವುದು ಮತ್ತು ಯುವ ಮನಸ್ಸುಗಳನ್ನು ಆಸಕ್ತಿಕರ ವೈಜ್ಞಾನಿಕ ಬರಹಗಳಿಂದ ಸೆಳೆಯುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೆಯುಡಬ್ಲೂಜೆ ಅಭಿನಂದನೆ:

ಅಂಕಣಕಾರ ಗಿರೀಶ್ ಲಿಂಗಣ್ಣ ಅವರ ಆಶಯದಂತೆಯೇ ಕೆಯುಡಬ್ಲೂಜೆ ಡಾ.ರಾಜರಾಮಣ್ಣ ಹೆಸರಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಸುವರ್ಣನ್ಯೂಸ್​​ನ ವಿನೋದ್​ಕುಮಾರ್, ಕನ್ನಡ ಪ್ರಭದ ಗಿರೀಶ್‌ ಸೇರಿ ರಾಜ್ಯದ 14 ಪತ್ರಕರ್ತರಿಗೆ ಪ್ರಶಸ್ತಿ ಘೋಷಣೆ

ಕರ್ನಾಟಕದ ಹೆಮ್ಮೆಯ ಪುತ್ರರಾದ ಡಾ. ರಾಜಾ ರಾಮಣ್ಣ ಜಗತ್ತು ಕಂಡ ಶ್ರೇಷ್ಠ ಪರಮಾಣು ವಿಜ್ಞಾನಿಗಳಲ್ಲಿ ಒಬ್ಬರು. ಭಾರತದ ವೈಜ್ಞಾನಿಕ ಪ್ರಗತಿಯ ಹಿಂದೆ ಡಾ. ರಾಜಾ ರಾಮಣ್ಣನವರ ಕೊಡುಗೆ ಅಪಾರವಾಗಿದೆ. ಈ ಬಹುಮಾನವನ್ನು ವಿಜ್ಞಾನ ವಿಚಾರಗಳು ಎಲ್ಲರಿಗೂ ತಲುಪುವಂತೆ ಮಾಡುವ ಪತ್ರಕರ್ತರಿಗೆ ಪ್ರತಿ ವರ್ಷವೂ ನೀಡಲಾಗುವುದು ಎಂದು ತಿಳಿಸಿರುವ ತಗಡೂರು ಅವರು, ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.

click me!