ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಆಪ್ತರ ಹೆಸರು ಉಲ್ಲೇಖವಾಗಿದ್ದರೂ, ಪೊಲೀಸರು ಅವರನ್ನು ಬಂಧಿಸದಿರುವ ಬಗ್ಗೆ ಸಚಿನ್ ಸಹೋದರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೆತ್ ನೋಟ್‌ನಲ್ಲಿರುವ 8 ಆರೋಪಿಗಳ ಬಗ್ಗೆ ತನಿಖೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ತನಿಖೆ ಸರಿಯಾಗಿ ಆಗದಿದ್ದರೆ ಸಿಬಿಐ ಮೊರೆ ಹೋಗುವುದಾಗಿ ಅವರು ಎಚ್ಚರಿಸಿದ್ದಾರೆ.
ಬೀದರ್ (ಜ.3): ಪೊಲೀಸರು ಬರೀ ನಮ್ಮ ತಮ್ಮನ ಬಗ್ಗೆ ಅಷ್ಟೇ ತನಿಖೆ ಮಾಡುತ್ತಿದ್ದಾರೆ ಅನಿಸುತ್ತೆ. ನನ್ನ ತಮ್ಮ ಡೆತ್‌ನೋಟ್‌ನಲ್ಲಿ ಬರೆದಿಟ್ಟಿರುವ 8 ಆರೋಪಿಗಳ ಹೆಸರು ಬರುತ್ತಿಲ್ಲ, ಪೊಲೀಸರು ಅವರನ್ನು ಯಾಕೆ ಬಂಧಿಸಿಲ್ಲ ಎಂದು ತನಿಖಾಧಿಕಾರಿಗಳ ವಿರುದ್ಧ ಮೃತ ಗುತ್ತಿಗೆದಾರ ಸಚಿನ್ ಸಹೋದರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಹೋದರಿ, ನನ್ನ ತಮ್ಮ ಆತ್ಮಹತ್ಯೆಗೆ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಸೇರಿ ಅವನ ಜೊತೆಗಿದ್ದ ಸಹಚರರ ಹೆಸರು ಪ್ರಸ್ತಾಪವೇ ಇಲ್ಲ. ಸಿಐಡಿ ತನಿಖೆ ಆಗ್ತಿದೆ ಅಂತಾರೆ. ಆದರೆ ಡೆತ್ ನೋಟ್ ನಲ್ಲಿ ಬರೆದಿಟ್ಟ ಆರೋಪಿಗಳ ಬಂಧನ ಆಗಿಲ್ಲ. ಅವರ ವಿರುದ್ಧ ಪೊಲೀಸರು ಏನು ತನಿಖೆ ಮಾಡಿದ್ದಾರೆ ಅನ್ನೋದು ತಿಳಿಸಲಿ ಎಂದರು.
ಖರ್ಗೆ ಸುಪುತ್ರ ಪ್ರಿಯಾಂಕ್ ಯಾವ ಮಟ್ಟಕ್ಕೂ ಇಳಿಯಬಲ್ಲರು..! ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ
ನನ್ನ ತಮ್ಮ ಆತ್ಮಹತ್ಯೆಗೆ ಪ್ರಿಯಾಂಕ್ ಖರ್ಗೆ ಅವರ ಆಪ್ತ ಸಹಾಯಕ ಎಂದು ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾನೆ ಹೀಗಿದ್ದು ಪೊಲೀಸರು ಆರೋಪಿಗಳನ್ನು ಯಾಕೆ ಬಂಧಿಸಿಲ್ಲ? ಆರೋಪಿಗಳು ಸಚಿವರ ಆಪ್ತರೆನ್ನುವ ಕಾರಣಕ್ಕೆ ಬಂಧಿಸಿಲ್ಲವೇ? ನನ್ನ ತಮ್ಮನನ್ನೇ ಅಪರಾಧಿಯನ್ನಾಗಿ ಮಾಡುವ ಯತ್ನ ನಡೆಯುತ್ತಿದೆ. ಅಪರಾಧಿಯಾಗಿ ಸೂಸೈಡ್ ಮಾಡಿಕೊಂಡಿದ್ದಾನೆ ಎನ್ನುವಂತೆ ಟ್ವಿಟ್ ಮಾಡುತ್ತಿದ್ದಾರೆ. ಸಿಐಡಿ ಮನೆಗೆ ಬರುತ್ತಾರೆಂದು ಹೇಳಿದ್ರು, ಆದರೆ ಇದುವರೆಗೆ ಯಾರೂ ಬಂಧಿಲ್ಲ. ಬೆಳಗ್ಗೆ ಬರೋದಾಗಿ ಎಸ್‌ಪಿ ಅವರು ಫೋನ್ ಮಾಡಿ ತಿಳಿಸಿದರಂತೆ ಆದರೆ ಯಾರೂ ಬಂದಿಲ್ಲ ಎಂದು ಸಹೋದರಿ ತನಿಖೆಕುರಿತು ಅಸಮಾಧಾ ವ್ಯಕ್ತಪಡಿಸಿದರು.
ನನ್ನ ತಮ್ಮನ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಹೇಗೆ ತನಿಖೆ ನಡೆಸುತ್ತದೆ ಎಂದು ನೋಡುತ್ತೇವೆ ತನಿಖೆ ಸರಿಯಾಗಿ ಆಗದಿದ್ದರೆ ಸಿಬಐ ಮೊರೆ ಹೋಗುತ್ತೇವೆ. ನನ್ನ ತಮ್ಮನ ವಿಚಾರದಲ್ಲಿ ನ್ಯಾಯ ಸಿಗೋವರೆಗೆ ನಾವು ಬಿಡೋದಿಲ್ಲ. ಸಿಬಿಐ ಮುಂದೆ ಹೋಗುತ್ತೇವೆ ಎಂದರು.
ಇನ್ನು ನಾಳೆ ಕಲಬುರಗಿಯಲ್ಲಿ ಬಿಜೆಪಿ ಹೋರಾಟ ಮಾಡುತ್ತಿರುವ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಹೋದರಿ, ನನಗೆ ಅದರ ಬಗ್ಗೆ ಗೊತ್ತಿಲ್ಲ. ನಮಗೋಸ್ಕರ ಹೋರಾಟ ಮಾಡುತ್ತಿರುವುದಕ್ಕೆ ಧನ್ಯವಾದಗಳ. ಇವತ್ತಿಗೆ ನನ್ನ ತಮ್ಮನ ಒಂಭತ್ತನೇ ದಿನದ ಕಾರ್ಯ ಮಾಡಿದ್ದೇವೆ. ಆದರೆ ಇಲ್ಲಿಯತನಕ ಆರೋಪಿಗಳು ಎಲ್ಲಿದ್ದಾರೆ, ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ. ಪೊಲೀಸರು ಆರೋಪಿಗಳನ್ನ ಪತ್ತೆಹಚ್ಚಲು ಆಗುತ್ತಿಲ್ಲವೋ, ಪ್ರಭಾವಿಗಳ ಪರಿಣಾಮ ಗೊತ್ತಿದ್ದು ಸುಮ್ಮನಿದ್ದಾರೋ ತಿಳಿಯುತ್ತಿಲ್ಲ. ಆದರೆ ನನ್ನ ತಮ್ಮನ ಬಗ್ಗೆ ಡಿಟೇಲ್ ತೆಗೆಯುತ್ತಿದ್ದಾರೆ ಹೊರತು ಅರೋಪಿಗಳ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದೆಲ್ಲ ನೋಡಿದರೆ ಪೊಲೀಸರು ತನಿಖೆ ಮೇಲೆಯೇ ನಮಗೆ ಸಂಶಯ ಮೂಡುತ್ತಿದೆ. ಆದರೆ ನಾವು ಇಲ್ಲಿಗೆ ಬಿಡೋದಿಲ್ಲ, ನ್ಯಾಯ ಸಿಗೋವರೆಗೆ ಹೋರಾಡುತ್ತೇವೆ ಎಂದರು.
ಸಚಿನ್ ಪಂಚಾಳ ಗುತ್ತಿಗೆದಾರನೇ ಅಲ್ಲ?: ಸಹೋದರಿ ಸುರೇಖಾ ಹೇಳಿದ್ದೇನು?
ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂಭತ್ತು ದಿನ ಹಿನ್ನೆಲೆ ಬೀದರ್ ಜಿಲ್ಲೆಯ ಭಾಲ್ಕಿ ಕಟ್ಟಿತೂಗಾಂವ್ ಗ್ರಾಮದಲ್ಲಿರುವ ಸಚಿನ್ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಸಚಿನ್ ಭಾವಚಿತ್ರದ ಮುಂದೆ ಕುಳಿತು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.