ಗದಗ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

Published : Feb 26, 2025, 07:56 PM ISTUpdated : Feb 26, 2025, 08:10 PM IST
ಗದಗ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

ಸಾರಾಂಶ

ಗದಗದಲ್ಲಿ ನಿರ್ಮಾಣ ಹಂತದಲ್ಲಿರುವ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. ಹಣ ಬಿಡುಗಡೆಯಾಗದಿದ್ದಲ್ಲಿ ಭಕ್ತರಿಂದ ಹಣ ಸಂಗ್ರಹಿಸುವುದಾಗಿ ಅವರು ಹೇಳಿದ್ದಾರೆ. ಸ್ಮಾರಕ ಭವನದ ಕಾಮಗಾರಿ 9 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಕಾಯಲಾಗುತ್ತಿದೆ.

ಗದಗ (ಫೆ.26): ಗದಗ ನಗರದ ವಿರೇಶ್ವರ ಪುಣ್ಯಾಶ್ರಮದ ಅಂಗಳದಲ್ಲಿ ನಿರ್ಮಾಣ ಹಂತದ ಸ್ಮಾರಕಭವನಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು ಆಗ್ರಹಿಸಿದ್ದಾರೆ.

ಏಷ್ಯನೆಟ್ ಸುವರ್ಣ ನ್ಯೂಸ್ ಜೊತೆ ಮಾತ್ನಾಡಿದ ಕಲ್ಲಯ್ಯಜ್ಜ ಅವರು, ಬಜೆಟ್‌ನಲ್ಲಿ ಹಣ ಮೀಸಲಿಡದಿದ್ದಲ್ಲಿ ಭಕ್ತರಿಂದ ಹಣ ಸಂಗ್ರಹಿಸೋದಾಗಿ ಹೇಳಿದರು.. ರಾಜ್ಯ ಸರ್ಕಾರದ ವಿಳಂಬಧೋರಣೆಗೆ ಆಕ್ರೋಶ ವ್ಯಕ್ತ ಪಡಿಸಿದ ಅವರು, ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಎರಡು ವರ್ಷದ ಹಿಂದೆ ಸ್ಮಾರಕಭವನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಹಣದ ಬಿಡುಗಡೆಗೆ ಕ್ರಮ ಕೈಗೊಳ್ಳೋದಾಗಿ ಹೇಳಿದ್ದರು. ಆದರೆ ಅವರ ಮಾತಿಗೆ ಸರ್ಕಾರ ಕಿಮ್ಮತ್ತು ಕೊಟ್ಟಿಲ್ಲ ಎನ್ನುಸುತ್ತಿದೆ ಎಂದರು.

ಇನ್ನು ಈ ಬಗ್ಗೆ ಹೋರಾಟ ನಡೆಸುತ್ತಾ ಬಂದಿರೋ ಜೆಡಿಎಸ್ ನಾಯಕ ವೆಂಕನಗೌಡ ಗೋವಿಂದಗೌಡರ್, ಹಣ ಬಿಡುಗಡೆ ಮಾಡಿದಿದ್ದಕ್ಕೆ ಪೂಜ್ಯರೊಂದಿಗೆ ಭಕ್ತರ ಬಳಿ ತೆರಳಿ ಹಣ ಸಂಗ್ರಹಿಸೋದಾಗಿ ಹೇಳಿದ್ದಾರೆ. ಹಣದ ಕೊರತೆಯಿಂದಾಗಿ ಸ್ಮಾರಕಭವನ ಕಾಮಗಾರಿ 9 ವರ್ಷದಿಂದ ಕುಂಟುತ್ತ ಸಾಗಿದೆ. ಗದಗನ ಪುಟ್ಟರಾಜ ಕವಿ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನದ ಕೊರತೆ ಎದುರಾಗಿದೆ. ನಗರದ ವಿರೇಶ್ವರ ಪುಣ್ಯಾಶ್ರಮ ಅಂಗಳದಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಮಾರಕಭವನಕ್ಕೆ ಹೆಚ್ಚುವರಿ 6.25 ಕೋಟಿ ರೂಪಾಯಿ ಬೇಕಿದೆ. 2016ರಲ್ಲೇ ಆರಂಭವಾಗಿದ್ದ ಕಾಮಗಾರಿ 9 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಣದ ಬಿಡುಗಡೆಗೆ ಕಾದು ಕೂತಿದೆ.

ಇದನ್ನೂ ಓದಿ: ಶೃಂಗೇರಿ ರಸ್ತೆ ಬದಿಯಲ್ಲಿ ಪುರಾತನ ವಸ್ತುಗಳ ಮಾರಾಟ!

ಸ್ಮಾರಕ ಭವನ ಅನುದಾನ ಬಿಡಗಡೆ ವಿಷ್ಯವಾಗಿ ಈ ಹಿಂದೆ ಸುವರ್ಣ ನ್ಯೂಸ್‌ನ  ಹಲೋ ಮಿಸಿಸ್ಟರ್ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರವಾಗಿತ್ತು. ಕಾರ್ಯಕ್ರಮದಲ್ಲಿ ಆಗಿನ ಸಚಿವ ಸುನಿಲ್ ಕುಮಾರ್, ಹಣ ಬಿಡುಗಡೆ ಕುರಿತು ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಮಾತು ಭರವಸೆಯಾಗಿಯೇ ಉಳಿದಿದೆ. ಇದೀಗ ರಾಜ್ಯ ಬಜೆಟ್ ಮೇಲೆ ನಿರೀಕ್ಷೆ ಇಟ್ಟಿರುವ ಕಲ್ಲಯ್ಯಜ್ಜನವರು, ಅನುದಾನ ಬಿಡುಗಡೆಗೆ ಆಗ್ರಹಿಸಿದ್ದಾರೆ. ರಾಜ್ಯದಾದ್ಯಂತ ಶಿಷ್ಯ ಬಳಗಹೊಂದಿರುವ ಪಂಡಿತ ಪುಟ್ಟರಾಜ ಗವಾಯಿಗಳು, 2010ರಲ್ಲಿ ಸಂಗೀತ ಲೋಕದಲ್ಲಿ ಲೀನರಾಗಿದ್ದರು. ಅವರ ಹೆಸರಿನಲ್ಲಿ ಸ್ಮಾರಕಭವನ ನಿರ್ಮಾಣಕ್ಕೆ ಭಕ್ತರು ಒತ್ತಾಸೆ ಮೇರೆಗೆ ಸರ್ಕಾರದಿಂದ 5 ಕೋಟಿ ರೂ. ಘೋಷಣೆ ಮಾಡಲಾಗಿತ್ತು. 2011ರಲ್ಲಿ ಸ್ಮಾರಕಭವನ ನಿರ್ಮಾಣಕ್ಕೆ ಅಂದಿನ ಯಡಿಯೂರಪ್ಪ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

2016ರಲ್ಲಿ ಸಚಿವ ಎಚ್.ಕೆ. ಪಾಟೀಲರು ಮುತುವರ್ಜಿ ವಹಿಸಿ 5 ಕೋಟಿ ರೂ. ತಂದು ಕಾಮಗಾರಿ ಆರಂಭಿಸಿದ್ದರು. ಲೋಕೋಪಯೋಗಿ ಇಲಾಖೆ ಮೂಲಕ ಮಹರಾಷ್ಟ್ರದ ಶಿರ್ಕೆ ಕಂಪನಿಗೆ ಗುತ್ತಿಗೆ ನೀಡಿ ಕಾಮಗಾರಿಯೂ ಆರಂಭವಾಗಿತ್ತು. ಕೆಲ ಬದಲಾವಣೆಯೊಂದಿಗೆ ಒಟ್ಟು 6.25 ಕೋಟಿ ರೂ. ವ್ಯಯಮಾಡಿ ಕಾಮಗಾರಿ ಮಾಡಲಾಯಿತು. ಆದರೆ, ಬದಲಾವಣೆಯಿಂದಾದ ಹೆಚ್ಚುವರಿ ಹಣ ಬಿಡುಗಡೆಯಾಗದ ಹಿನ್ನೆಲೆ ಕಾಮಗಾರಿ ಸ್ಥಗಿತವಾಗಿದೆ. ಇದೀಗ ಹೆಚ್ಚುವರಿ 5 ಕೋಟಿ‌ರೂಪಾಯಿಗೆ ಮನವಿಸಲ್ಲಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಣ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು