ಡಿಕೆಶಿ ತಾಯಿ ಮನವಿಗೆ ಕೋರ್ಟ್ ಓಕೆ: ರಾಮನಗರ SPಗೆ ಮಹತ್ವದ ಸೂಚನೆ

By Suvarna News  |  First Published Dec 18, 2019, 3:46 PM IST

ಮಾಜಿ ಸಚಿವ ಡಿಕೆ ಶಿವಕುಮಾರ್ ಅಕ್ರಮ ಹಣ ಪ್ರಕರಣದಲ್ಲಿ ಗೌರಮ್ಮ ಮನವಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಡಿಕೆಶಿ ತಾಯಿ ಮನವಿಗೆ ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ಏನದು ಮನವಿ..? ಕೋರ್ಟ್ ಹೇಳಿದ್ದೇನು..?


ನವದೆಹಲಿ/ಬೆಂಗಳೂರು, (ಡಿ.18): ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಸಿಕ್ಕ ಎನ್ನಲಾದ ಅಕ್ರಮ ಹಣ ಪ್ರಕರಣದಲ್ಲಿ ಮನೆಯಲ್ಲಿ ಗೌರಮ್ಮನ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ತಿಳಿಸಿದೆ.

"

Tap to resize

Latest Videos

undefined

85 ವಯಸ್ಸು ಆಗಿರುವುದರಿಂದ ಮನೆಯಲ್ಲಿಯೇ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಗೌರಮ್ಮ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಡಿಕೆಶಿ ಕುಟುಂಬ ಚಾಪೆ ಕೆಳಗೆ ತೂರಿದ್ರೆ, ರಂಗೋಲಿ ಕೆಳಗೆ ತೂರಿದ ಇಡಿ..!

ಇಂದು (ಬುಧವಾರ) ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಗೌರಮ್ಮ ಮನವಿ ಪುರಸ್ಕರಿಸಿದ ಹೈಕೋರ್ಟ್, ಕನಕಪುರದ  ಮನೆಯಲ್ಲಿಯೇ ವಿಚರಣೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ.

 ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್‌ ಅವರ ತಾಯಿ ಗೌರಮ್ಮ ಅವರ ವಿಚಾರಣೆಯನ್ನು ಕನಕಪುರದಲ್ಲಿರುವ ಅವರ ನಿವಾಸದಲ್ಲಿಯೇ ವಿಚಾರಣೆ ನಡೆಸಿ ಎಂದು ಇಡಿ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.

ಅಷ್ಟೇ ಅಲ್ಲದೇ ಕನ್ನಡದಲ್ಲಿಯೇ ವಿಚಾರಣೆ ನಡೆಸಬೇಕು. ಜತೆಗೆ ವಿಚಾರಣೆಯ ಆಡಿಯೋ ರೇಕಾರ್ಡ್ ಮಾಡಬೇಕೆಂದು ಇಡಿ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಇನ್ನು ಇಡಿ ಅಧಿಕಾರಿಗಳ ವಿಚಾರಣೆಗೆ ಯಾವುದೇ ಅಡ್ಡಿಪಡಿಸುವಂತಿಲ್ಲ. ಯಾವುದೇ ಪ್ರತಿಭಟನೆ ಮಾಡುವಂತಿಲ್ಲ . ಹೀಗಾಗಿ ಇಡಿ ಅಧಿಕಾರಿಗಳಿಗೆ ಭದ್ರತೆ ನೀಡುವಂತೆ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿಗೆ (SP)ಕೋರ್ಟ್ ಸೂಚನೆ ನೀಡಿದೆ.

ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!