
ಬೆಂಗಳೂರು (ನ.21): ಇಂಗ್ಲೆಂಡಿನ ಪ್ರಮುಖ ಸಂಸ್ಥೆಗಳಿಂದ ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ಇದೇ ನ.24ರಿಂದ 26ರವರೆಗೆ ಲಂಡನ್‌ಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಭೇಟಿ ನೀಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಗುರುವಾರ ತಮ್ಮನ್ನು ಭೇಟಿಯಾದ ಯುನೈಟೆಡ್ ಕಿಂಗ್‌ಡಂನ ಕಾಮನ್‌ವೆಲ್ತ್ ವ್ಯವಹಾರಗಳು ಮತ್ತು ಅಭಿವೃದ್ಧಿ ಸಚಿವೆ ಸೀಮಾ ಮಲ್ಹೋತ್ರ ಮತ್ತು ಭಾರತದ ಬ್ರಿಟಿಷ್ ಹೈಕಮಿಷನರ್ ಲಿಂಡಾ ಕೆಮರಾನ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಎಂ.ಬಿ.ಪಾಟೀಲ್, ಲಂಡನ್ ಭೇಟಿ ವೇಳೆ ಅಲ್ಲಿನ ದೈತ್ಯ ಉದ್ದಿಮೆಗಳಾದ ಎಲಿಮೆಂಟ್ 6, ಎಆರ್‌ಎಂ ಲಿಂಡೆ, ಮಾರ್ಟಿನ್ ಬೇಕರ್, ಫಿಡೋ ಎಐ, ಆಕ್ಸ್‌ಫರ್ಡ್ ಸ್ಪೇಸ್ ಸಿಸ್ಟಂ ಸೇರಿದಂತೆ ಹಲವು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.
ಇದನ್ನೂ ಓದಿ: Sugarcane Price Issue: ಕೇಂದ್ರದ ಎಫ್‌ಆರ್‌ಪಿಗಿಂತ ₹ 700 ಕೊಡ್ಸಿದ್ದೇವೆ -ಎಂಬಿ ಪಾಟೀಲ್
ಬ್ರಿಟನ್‌ನ ಪ್ರಮುಖ ಕಂಪನಿಗಳಿಂದ ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ಲಂಡನ್‌ಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಭೇಟಿ ನೀಡಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ