ರಕ್ಷಣಾ ಸಚಿವಾಲಯದ ಅಡಿಗೆ ಬಂದ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ !

Published : Mar 26, 2022, 05:11 PM IST
ರಕ್ಷಣಾ ಸಚಿವಾಲಯದ ಅಡಿಗೆ ಬಂದ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ !

ಸಾರಾಂಶ

100 ಸೈನಿಕ ಶಾಲೆ ತೆರೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕ್ರಮ 21 ಶಾಲೆಗಳನ್ನು ತೆರೆಯಲು ಅನುಮೋದನೆ ನೀಡಿದ ರಕ್ಷಣಾ ಸಚಿವಾಲಯ ರಾಜ್ಯ ಸರ್ಕಾರದಿಂದ ವತಿಯಿಂದ ನಿರ್ಮಾಣವಾಗಿದ್ದ ಬೆಳಗಾವಿಯ ಶಾಲೆ ಈಗ ರಕ್ಷಣಾ ಸಚಿವಾಲಯದ ಅಡಿಯಲ್ಲಿ

ನವದೆಹಲಿ (ಮಾ.26): ಸ್ವಾತಂತ್ರ್ಯವೀರ ಸಂಗೊಳ್ಳಿ ರಾಯಣ್ಣ (Sangolli Rayanna ) ಹೆಸರಿನಲ್ಲಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರಿ ನಿರ್ಮಾಣ ಮಾಡಿದ್ದ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ (Sangolli Rayanna Sainik School)ಇನ್ನು ಮುಂದೆ ರಕ್ಷಣಾ ಸಚಿವಾಲಯದ (Defense Ministry) ಅಡಿಯಲ್ಲಿ ಬರುವ ಸೈನಿಕ ಶಾಲೆ ಎನಿಸಿಕೊಳ್ಳಲಿದೆ. ದೇಶದಲ್ಲಿ 100 ಹೊಸ ಸೈನಿಕ ಶಾಲೆಯನ್ನು ತೆರೆಯುವ ಕೇಂದ್ರ ಸರ್ಕಾರದ (Central Government) ಮಹತ್ವಾಕಾಂಕ್ಷೆಯ ಘೋಷಣೆಯ ಮೊದಲ ಹಂತವಾಗಿ ಶನಿವಾರ ರಕ್ಷಣಾ ಸಚಿವಾಲಯ 21 ಶಾಲೆಗಳಿಗೆ ಅನುಮತಿ ನೀಡಿದೆ. ಈ 21 ಶಾಲೆಗಳಲ್ಲಿ ರಾಜ್ಯ ಸರ್ಕಾರದ ಶಿಫಾರಸನ್ನು ಒಪ್ಪಿಕೊಂಡಿರುವ ರಕ್ಷಣಾ ಸಚಿವಾಲಯದ ಬೆಳಗಾವಿಯ ಶಾಲೆಯನ್ನು ತನ್ನ ಪರಿಧಿಗೆ ಸೇರಿಸಿಕೊಳ್ಳಲು ನಿರ್ಧರಿಸಿದೆ.

ಎನ್‌ಜಿಒಗಳು, ಖಾಸಗಿ ಶಾಲೆಗಳು ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 21 ಹೊಸ ಸೈನಿಕ ಶಾಲೆಗಳ ಸ್ಥಾಪನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಪಾಲುದಾರಿಕೆಯ ಕ್ರಮದಲ್ಲಿ ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಸರ್ಕಾರದ ಉಪಕ್ರಮದ ಆರಂಭಿಕ ಹಂತದಲ್ಲಿ ಈ ಶಾಲೆಗಳನ್ನು ಸ್ಥಾಪಿಸಲಾಗುವುದು. ಅವು ಈಗಿರುವ ಸೈನಿಕ ಶಾಲೆಗಳಿಗಿಂತ ಭಿನ್ನವಾಗಿರುತ್ತವೆ.

ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯ ಹಿಂದಿನ ಉದ್ದೇಶವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಇದು ಸಶಸ್ತ್ರ ಪಡೆಗಳಿಗೆ ಸೇರುವುದು ಸೇರಿದಂತೆ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಅವಕಾಶಗಳನ್ನು ನೀಡುತ್ತದೆ. ಇಂದಿನ ಯುವಕರನ್ನು ನಾಳಿನ ಜವಾಬ್ದಾರಿಯುತ ನಾಗರಿಕರನ್ನಾಗಿಸಲು ಖಾಸಗಿ ವಲಯಕ್ಕೆ ಇದು ಅವಕಾಶ ನೀಡುತ್ತದೆ. ಇದರಿಂದ ಖಾಸಗಿ ವಲಯಕ್ಕೆ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಲು ಅವಕಾಶ ದೊರೆಯಲಿದೆ.

ಬೈಲಹೊಂಗ ತಾಲೂಕಿನ ಸಂಗೊಳ್ಳಿಯಲ್ಲಿ 70 ಎಕರೆ ಜಾಗದಲ್ಲಿ ₹230 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದು ಈಗ ರಕ್ಷಣಾ ಸಚಿವಾಲಯದ ಅಡಿಯಲ್ಲಿರುತ್ತದೆ. ಉತ್ತಮ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ರಾಜ್ಯ ಸರ್ಕಾರವು ಬೆಳಗಾವಿಯ ಸ್ಥಳೀಯ ಶಾಸಕರು ಮತ್ತು ಸಂಸದರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಹಲವಾರು ಬಾರಿ ವಿನಂತಿ ಮಾಡಿತ್ತು. ಎನ್‌ಜಿಒಗಳು/ಟ್ರಸ್ಟ್‌ಗಳು/ಸೊಸೈಟಿಗಳು 12 ಅನುಮೋದಿತ ಹೊಸ ಶಾಲೆಗಳ ಪಾಲನ್ನು ಹೊಂದಿದ್ದರೆ, 6 ಖಾಸಗಿ ಶಾಲೆಗಳು ಮತ್ತು 3 ರಾಜ್ಯ ಸರ್ಕಾರಿ ಸ್ವಾಮ್ಯದ ಶಾಲೆಗಳು ಅಂತಹ ಅನುಮೋದಿತ ಹೊಸ ಸೈನಿಕ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅಸ್ತಿತ್ವದಲ್ಲಿರುವ ಸೈನಿಕ ಶಾಲೆಗಳಿಗಿಂತ ಭಿನ್ನವಾಗಿ, 7 ಹೊಸ ಸೈನಿಕ ಶಾಲೆಗಳು ಡೇ ಸ್ಕೂಲ್ ಮತ್ತು 14 ಹೊಸ ಅನುಮೋದಿತ ಶಾಲೆಗಳು ವಸತಿ ವ್ಯವಸ್ಥೆಗಳನ್ನು ಹೊಂದಿವೆ.

ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗೆ ತುಟಿ ಪಿಟಿಕ್ ಎನ್ನದ ಕಾಂಗ್ರೆಸ್

ಈ ಶಾಲೆಗಳು 6 ನೇ ತರಗತಿಯಿಂದ ಪ್ರಾರಂಭವಾಗುತ್ತವೆ. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್, ಕೇಂದ್ರ ಸರ್ಕಾರವು ಅರ್ಹತೆಯ ಆಧಾರದ ಮೇಲೆ ಶೇಕಡಾ 50 ರಷ್ಟು ಶುಲ್ಕವನ್ನು (40,000 ರೂ.ಗಳ ಮೇಲಿನ ಮಿತಿ) ವಾರ್ಷಿಕ ಸಹಾಯವನ್ನು ನೀಡುತ್ತದೆ ಎಂದು ಹೇಳಿದೆ. ಅನುಮೋದಿತ ಶಾಲೆಗೆ ವರ್ಗ ಸಾಮರ್ಥ್ಯದ 50 ಪ್ರತಿಶತದವರೆಗೆ (ಪ್ರತಿ ತರಗತಿಗೆ 50 ವಿದ್ಯಾರ್ಥಿಗಳ ಮೇಲಿನ ಮಿತಿ) ಸಹಾಯವನ್ನು ನೀಡಲಾಗುತ್ತದೆ.

ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಆಕ್ರೋಶ, ಅಂತರ ಕಾಯ್ದುಕೊಂಡ ಕಾಂಗ್ರೆಸ್

ಈ ಹೊಸ ಸೈನಿಕ ಶಾಲೆಗಳು, ಸಂಬಂಧಿತ ಶಿಕ್ಷಣ ಮಂಡಳಿಗಳಿಗೆ ತಮ್ಮ ಸಂಬಂಧವನ್ನು ಹೊರತುಪಡಿಸಿ, ಸೈನಿಕ್ ಸ್ಕೂಲ್ಸ್ ಸೊಸೈಟಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಸೊಸೈಟಿ ಸೂಚಿಸಿದ ಪಾಲುದಾರಿಕೆ ಕ್ರಮದಲ್ಲಿ ಹೊಸ ಸೈನಿಕ ಶಾಲೆಗಳಿಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!