HSRP ನಂಬರ್ ಪ್ಲೇಟ್ ಅಳವಡಿಕೆ ಫೆಬ್ರವರಿ 17ಕ್ಕೆ ಅಂತ್ಯ, ಬಳಿಕ ಬೀಳುತ್ತೆ ದಂಡ

By Gowthami K  |  First Published Jan 29, 2024, 1:15 PM IST

ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು  ವಿಸ್ತರಿಸಿದ್ದು, ಇದೀಗ ಫೆಬ್ರವರಿ 17 ಅಂತ್ಯವಾಗಲಿದೆ.


ಬೆಂಗಳೂರು (ಜ.11): ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು  ವಿಸ್ತರಿಸಿದ್ದು, ಇದೀಗ ಫೆಬ್ರವರಿ 17 ಅಂತ್ಯವಾಗಲಿದೆ. ಬಳಿಕ ದುಬಾರಿ ದಂಡ ಪಾವತಿ ತಲೆನೋವು ಶುರುವಾಗಲಿದೆ. ನಕಲಿ ನಂಬರ್ ಪ್ಲೇಟ್, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರಾಕ್ ಮಾಡಲು ಸೇರಿದಂತೆ ಹಲವು ಕಾರಣಗಳಿಂದ  ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಗತ್ಯವಾಗಿದೆ. ಈ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮದ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ HSRP ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಫೆ.17 ಲಾಸ್ಟ್ ಡೇಟ್, ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?

Tap to resize

Latest Videos

undefined

2019ರ ಎಪ್ರಿಲ್ 1ಕ್ಕಿಂತ ಮೊದಲು ರಿಜಿಸ್ಟರ್‌ ಆಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಲೇಬೇಕಿದೆ. ಹೀಗಾಗಿ https://transport.karnataka.gov.in/  ಅಥವಾ www.siam.in  ಈ ಅಧಿಕೃತ ವೆಬ್‌ತಾಣದ ಮೂಲಕ ನೋಂದಾವಣೆ ಮಾಡಿ ಶುಲ್ಕ ಪಾವತಿ ಮಾಡಿದ ನಂತರ ಬಳಿಕ ವಾಹನ ಡೀಲರ್‌ ಬಳಿ ಹೋಗಿ ನಂಬರ್‌ ಪ್ಲೇಟ್ ಬದಲಾಯಿಸಬಹುದು.

HSRP ನಂಬರ್ ಪಾವತಿ ವಿವರ
ದ್ವಿಚಕ್ರ ವಾಹನ: 400 ರೂಪಾಯಿ + 100 (ಕಲರ್ ಕೋಡ್ ಸ್ಟಿಕ್ಕರ್)
ಕಾರು ಸೇರಿದಂತೆ ನಾಲ್ಕು  ಚಕ್ರದ ವಾಹನ: 1,100 ರೂಪಾಯಿ (ಕಾರು ಇತರ ವಾಹನಗಳಿಗೆ ತಕ್ಕಂತೆ ಬದಲಾಗಲಿದೆ) + 100 (ಕಲರ್ ಕೋಡ್ ಸ್ಟಿಕ್ಕರ್)

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಿಸಿದ ಸರ್ಕಾರ, ಏನಿದು ಹೊಸ ಫಲಕ?

ನೀವು ಆನ್‌ಲೈನ್ ಮೂಲಕಕ HSRP ನಂಬರ್ ಪ್ಲೇಟ್ ಬುಕ್ ಮಾಡಿದ ಬಳಿಕ ಮೂರರಿಂದ ಒಂದು ವಾರದೊಳಗೆ ಹೊಸ ನಂಬರ್ ಪ್ಲೇಟ್ ನೀವು ಆಯ್ಕೆ ಮಾಡಿದ ಡೀಲರ್ ಬಳಿ ತಲುಪಲಿದೆ. ಬಳಿಕ ನಿಗದಿಮಾಡಿದ ದಿನಾಂಕದಂದೂ ಡೀಲರ್ ಬಳಿ ತೆರಳಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ. 

ಎಚ್ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯಮಿನಿಯಂನಿಂದ ತಯಾರಿಸಲಾಗುತ್ತದೆ. ಅದರಲ್ಲಿ ಲೇಸರ್ ಕೋಡ್ ಇದ್ದು, ಸ್ಕ್ಯಾನ್ ಮಾಡಿದಾಗ ವಾಹನದ ಸಂಪೂರ್ಣ ಮಾಹಿತಿ ಹಾಗೂ ಅಶೋಕ ಚಕ್ರದ ಚಿತ್ರವನ್ನು ಒಳಗೊಂಡಿರುತ್ತದೆ. ನಕಲಿ ನಂಬರ್ ಪ್ಲೇಟ್‌ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

click me!