ಡಿಕೆ ಶಿವಕುಮಾರ್ ಕಾಲೇಜು ದಿನದ ಯೆಝಡಿ ಬೈಕ್‌ಗೆ ಕನ್ನಡದಲ್ಲೇ ಆನಂದ್ ಮಹೀಂದ್ರ ಕಮೆಂಟ್!

By Chethan Kumar  |  First Published Sep 4, 2024, 9:09 PM IST

ಡಿಸಿಎಂ ಡಿಕೆ ಶಿವಕುಮಾರ್ ಕಾಲೇಜು ದಿನದಲ್ಲಿ ಓಡಿಸಿದ ಯೆಝಡಿ ಬೈಕ್ ಮತ್ತೆ ಕೈಸೇರಿದೆ. ಧೂಳು ಹಿಡಿದ್ದ ಬೈಕ್ ರಿಸ್ಟೋರ್ ಮಾಡಲಾಗಿದೆ.ಡಿಕೆ ಶಿವಕುಮಾರ್ ಯೆಝಡಿ ಬೈಕ್ ಕುರಿತು ಉದ್ಯಮಿ ಆನಂದ್ ಮಹೀಂದ್ರ ಕನ್ನಡದಲ್ಲೇ ಕಮೆಂಟ್ ಮಾಡಿದ್ದಾರೆ.
 


ಬೆಂಗಳೂರು(ಸೆ.04) ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾಲೇಜು ದಿನದಲ್ಲಿ ಸವಾರಿ ಮಾಡಿದ್ದ ಯೆಝಡಿ ಬೈಕ್ ಮತ್ತೆ ಕೈಸೇರಿದೆ. ಧೂಳು ಹಿಡಿದು ಹಾಳಾಗಿದ್ದ ಈ ಬೈಕ್‌ನ್ನು ಯುವಕ ಸುಪ್ರೀತ್ ಸಂಪೂರ್ಣ ರಿಸ್ಟೋರ್ ಮಾಡಿ, ಡಿಕೆ ಶಿವಕುಮಾರ್‌ಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಡಿಕೆ ಶಿವಕುಮಾರ್ ಸೋಶಿಯಲ್ ಮೀಡಿಯಾ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಉದ್ಯಮಿ ಆನಂದ್ ಮಹೀಂದ್ರ ಡಿಕೆ ಶಿವಕುಮಾರ್ ಪೋಸ್ಟ್‌ಗೆ ಕನ್ನಡದಲ್ಲೇ ಕಮೆಂಟ್ ಮಾಡಿದ್ದಾರೆ. ನೆನಪಿನ ಶಕ್ತಿ ಎಂದು ಆನಂದ್ ಮಹೀಂದ್ರ ರಿಟ್ವೀಟ್ ಮಾಡಿ ಕೋಟ್ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಕಾಲೇಜು ದಿನಗಳ ಹಲವು ರೋಚಕ ಘಟನೆಗಳು ಹಲವು ವೇದಿಕೆಗಳಲ್ಲಿ ಖದ್ದು ಬಹಿರಂಗ ಮಾಡಿದ್ದಾರೆ. ಈ ಪೈಕಿ ಬೈಕ್ ಕ್ರೇಜ್ ಕೂಡ ಒಂದು. ಡಿಕೆ ಶಿವಕುಮಾರ್ ಕಾಲೇಜಿಗೆ ಯೆಝಡಿ ಬೈಕ್ ಮೂಲಕ ತೆರಳುತ್ತಿದ್ದರು. ಯೆಝಡಿ ಸವಾರಿ ಅತೀವ ನೆಚ್ಚಿಕೊಂಡಿದ್ದ ಡಿಕೆ ಶಿವಕುಮಾರ್ ಬಳಿಕ ಉದ್ಯಮಿಯಾಗಿ, ರಾಜಕೀಯ ಮುಖಂಡನಾಗಿ, ಸಚಿವರಾಗಿ, ಇದೀಗ ಉಪಮುಖ್ಯಂತ್ರಿಯಾಗಿದ್ದಾರೆ. ಇದರ ನಡುವೆ ಹಲವು ವಾಹನಗಳನ್ನು ಡಿಕೆ ಶಿವಕುಮಾರ್ ಖರೀದಿಸಿದ್ದಾರೆ. ಆದರೇ ಕಾಲೇಜು ದಿನದ ಬೈಕ್ ಮಾತ್ರ ವಿಶೇಷ. ಆದರೆ ಈ ಬೈಕ್ ಡಿಕೆ ಶಿವಕುಮಾರ್ ಮನೆಯಲ್ಲೇ ಹಾಳಾಗಿ ಧೂಳು ಹಿಡಿದಿತ್ತು.

Tap to resize

Latest Videos

undefined

ಜನರಿಗೆ ಏನೇ ಮಾಡಿದ್ರೂ ಉಪಕಾರ ಇಲ್ಲ: ಡಿ.ಕೆ. ಶಿವಕುಮಾರ್

ಈ ಬೈಕನ್ನು ಸುಪ್ರೀತ್ ಅನ್ನೋ ಬೈಕ್ ಪ್ರೇಮಿ ಯುವಕ ರಿಸ್ಟೋರ್ ಮಾಡಿದ್ದಾರೆ. ಹಳೆತನಕ್ಕೆ ಧಕ್ಕೆ ಭಾರದ ರೀತಿಯಲ್ಲಿ ಬೈಕ್ ನವೀಕರಣ ಮಾಡಿದ್ದಾರೆ. ಬಳಿಕ ಡಿಕೆ ಶಿವಕುಮಾರ್‌ಗೆ ನೀಡಿದ್ದಾರೆ. ಈ ಕುರಿತು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.  ಕಾಲೇಜ್ ಡೇಸ್ ನಲ್ಲಿ ಬೈಕ್ ಕ್ರೇಜ್ ಸಾಮಾನ್ಯ, ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು, ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

 

ನೆನಪಿನ ಶಕ್ತಿ … https://t.co/JZx1eejcvt

— anand mahindra (@anandmahindra)

 

ಆನಂದ್ ಮಹೀಂದ್ರ ರೋಲ್ ಮಾಡೆಲ್ ಈ ಪುಟಾಣಿ ಕಂದ, ಕಾರಣ ಬಿಚ್ಚಿಟ್ಟ ಉದ್ಯಮಿ!

ಈ ಟ್ವೀಟ್ ಮಾಡಿದ ಬೆನ್ನಲ್ಲೇ ಆನಂದ್ ಮಹೀಂದ್ರ ಕನ್ನದಲ್ಲಿ ನೆನಪಿನ ಶಕ್ತಿ ಎಂದು ರೀಟ್ವಿಟ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಕಾಲೇಜು ದಿನದ ನೆನಪು ಹಾಗೂ ಆನಂದ್ ಮಹೀಂದ್ರ ಕನ್ನಡದ ಮೆಸೇಜ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆನಂದ್ ಮಹೀಂದ್ರ ತಕ್ಷಣ ರಿಟ್ವೀಟ್ ಮಾಡಲು ಕಾರಣವಿದೆ. ಭಾರತದಲ್ಲಿ ಯೆಝೆಡಿ ಹಾಗೂ ಜಾವಾ ಆಟೋಮೊಬೈಲ್ ಮಹೀಂದ್ರ ಗ್ರೂಪ್ ಮಾಲೀಕತ್ವ ಹೊಂದಿದೆ. ಈಗಾಗಲೇ ಜಾವಾ ಹಾಗೂ ಯೆಝಡಿ ಬೈಕ್ ಹೊಸ ರೂಪಾಂತರದಲ್ಲಿ ಬಿಡುಗಡೆ ಮಾಡಿರುವ ಮಹೀಂದ್ರ ಭಾರಿ ಯಶಸ್ಸು ಕಂಡಿದೆ. ಇದೀಗ ಡಿಕೆ ಶಿವಕುಮಾರ್ ಹಳೆ ಯೆಝಡಿ ಕುರಿತಿ ಹಳೆ ನೆನಪು ಹಾಗೂ ನವೀಕರಣ ಬೈಕ್ ಪೋಸ್ಟ್ ಮಾಹಿತಿ ನೀಡುತ್ತಿದ್ದಂತೆ ಆನಂದ್ ಮಹೀಂದ್ರ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.
 

click me!