ಬೆಂಗ್ಳೂರಿನಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಿಸಲು ದಕ್ಷಿಣ ಕೊರಿಯಾ ನೆರವು

By Suvarna NewsFirst Published May 21, 2021, 4:14 PM IST
Highlights

* ಬೆಂಗ್ಳೂರಿನಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಿಸಲು ದಕ್ಷಿಣ ಕೊರಿಯಾ ನೆರವು
* ದಕ್ಷಿಣ ಕೊರಿಯಾದ ಸಿಯೋಲ್‌ ಸೆಮಿಕಂಡಕ್ಟರ್‌ನಿಂದ ಕೋವಿಡ್‌ ಸರಂಜಾಮು 
* ಕಂಪನಿಯ ನೆರವು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಡಿಸಿಎಂ  

ಬೆಂಗಳೂರು, (ಮೇ.21): ದಕ್ಷಿಣ ಕೊರಿಯಾ ಮೂಲದ ಸಿಯೋಲ್‌ ಸೆಮಿಕಂಡಕ್ಟರ್‌ ಕಂಪನಿ ಬೆಂಗಳೂರಿನಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ನಿರ್ವಹಿಸಲು ಅಗತ್ಯವಾದ ವೈದ್ಯಕೀಯ ಸರಂಜಾಮುಗಳನ್ನು ಉಚಿತವಾಗಿ ನೀಡಿದೆ. 

ಬೆಂಗಳೂರಿನಲ್ಲಿ ಶುಕ್ರವಾರ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಕಂಪನಿಯ ಅಧಿಕಾರಿಗಳು ಸಾಂಕೇತಿಕವಾಗಿ ಕೆಲ ಸರಂಜಾಮುಗಳನ್ನು ಹಸ್ತಾಂತರಿಸಿದರು. 

ದುಬೈಯಿಂದ ಮಂಗಳೂರಿಗೆ 31 ಡ್ಯೂರೂ ಆಕ್ಸಿಜನ್‌ ಸಿಲಿಂಡರ್‌

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, "ಕೋವಿಡ್‌ ಸೋಂಕು ನಿವಾರಣೆಗೆ ನಡೆಯತ್ತಿರುವ ಈ ಹೋರಾಟದಲ್ಲಿ ಖಾಸಗಿ ಕಂಪನಿಗಳು ಕೈಜೋಡಿಸುತ್ತಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಸಿಯೋಲ್‌ ಸೆಮಿಕಂಡಕ್ಟರ್‌ ಕಂಪನಿ 30,000 ಕೆ-94 ಮಾಸ್ಕ್‌, 20,000 ಮೆಡಿಕಲ್‌ ಗ್ಲೌಸ್‌, 2,500 ವಾಯು ಸಂಸ್ಕರಣಾ ಸಲಕರಣೆ, 100 ಪಿಪಿಇ ಕಿಟ್‌ಗಳನ್ನು ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ಬಳಸುವಂತೆ ನೀಡಿದೆ" ಎಂದರು. 

ಈ ಸಂದರ್ಭದಲ್ಲಿ ನಡೆದ ವರ್ಚುಯಲ್‌ ಸಭೆಯಲ್ಲಿ ಕಂಪನಿಯ ಸಿಇಒ ಚುಂಗ್‌ ಹೂನ್ ಲೀ ಮುಂತಾದವರು ಭಾಗಿಯಾಗಿದ್ದರು. ಕಂಪನಿಯ ಭಾರತೀಯ ಉಪಾಧ್ಯಕ್ಷ ಅರ್ಷಿ ಕೃಷ್ಣಾಚಾರ್‌  ಇದ್ದರು. ಬೆಂಗಳೂರಿನ ಹೊಂಗಿರಣ ಟ್ರಸ್ಟ್‌ ಮೂಲಕ ಈ ಕಂಪನಿಯ ನೆರವು ಸಿಕ್ಕಿದೆ. ಈ ಕಾರಣಕ್ಕಾಗಿ ಡಿಸಿಎಂ ಅವರು ಈ ವೇಳೆ ಹಾಜರಿದ್ದ ಟ್ರಸ್ಟ್‌ನ ಅಧ್ಯಕ್ಷ ಡಾ.ರವಿಶಂಕರ್‌, ಡಾ.ಪಿ.ಎನ್.‌  ಗೋವಿಂದ ರಾಜುಲು ಅವರಿಗೆ ಕೃತಜ್ಞತೆ ಸಲ್ಲಿಸಿದರು. 

ಕಂಪನಿಯವರೇ ಹೇಳುವ ಹಾಗೆ ಈ ಉತ್ಪನ್ನಗಳ ವೆಚ್ಚ ಸುಮಾರು ಏಳು ಕೋಟಿ ಆಗಲಿದೆ.

click me!