ಸರ್ಕಾರದ ಬಳಿ 1000 ಅನಾಥ ಶವಗಳ ಅಸ್ಥಿ: ಸಚಿವ ಅಶೋಕ್

By Suvarna News  |  First Published May 21, 2021, 2:50 PM IST

* 1ಸಾವಿರ ಅನಾಥ ಶವಗಳ ಅಸ್ಥಿ ಇದೆ.
* ಅಸಹಾಯಕ ಜನರ ಅಸ್ಥಿ ಸರ್ಕಾರದ ಬಳಿ ಇದೆ...
* ಯಾವುದೋ ಕಷ್ಟದಿಂದ ಅಸ್ಥಿ ಪಡೆದಿಲ್ಲ...
* ಕಂದಾಯ ಸಚಿವ ಆರ್.ಅಶೋಕ್‌ ಹೇಳಿಕೆ..


ಬೆಂಗಳೂರು, (ಮೇ.21): ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟ ಸುಮಾರು 1 ಸಾವಿರ ಅನಾಥ ಶವಗಳ ಅಸ್ಥಿ ಸರಕಾರದ ಬಳಿ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಹಾಯಕ ಜನರ ಅಸ್ಥಿ ಸರ್ಕಾರದ ಬಳಿ ಇದೆ. ಅನಿವಾರ್ಯ ಅಥವಾ ಕಷ್ಟದಿಂದಲೋ ಕುಟುಂಬದವರು ಸಂಗ್ರಹಿಸದ ಅಸ್ಥಿ ಸರಕಾರದ ಬಳಿ ಇದೆ ಎಂದು ಸ್ಪಷ್ಟಪಡಿಸಿದರು.

Latest Videos

undefined

ಅನಾಥ ಮಕ್ಕಳ ಪಾಲಿಗೆ ತಾಯಿಯಾದ ಶಶಿಕಲಾ ಜೊಲ್ಲೆ

ಮೃತರ ಸಂಬಂಧಿಕರು ಮೊಬೈಲ್ ಸ್ವಿಚ್ ಆಫ್ ಇದೆ. ನಾವು ಅಸ್ಥಿ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ. ಆದರೆ ಅವರವರ ಕಷ್ಟದಿಂದ ಅಸ್ಥಿ ಪಡೆಯುತ್ತಿಲ್ಲ. ಅಂತಹ ಅಸ್ಥಿಗಳನ್ನು ಸರ್ಕಾರವೇ ಸಂಸ್ಕಾರ ಮಾಡಲು ತೀರ್ಮಾನಿಸಿದೆ ಎಂದು ಅಶೋಕ್ ಹೇಳಿದರು.

ಬಡವ ಬಲ್ಲಿದ ಎಂದು ಭೇದ ಭಾವ ಮಾಡದೇ ಅಸ್ಥಿಗಳನ್ನು ಪಂಚಭೂತಗಳಲ್ಲಿ ಲೀನವಾಗುವಂತೆ ವ್ಯವಸ್ಥೆ. ನೀರಿನಲ್ಲಿ ಸಂಪ್ರದಾಯಬದ್ಧವಾಗಿ ಕಂದಾಯ ಇಲಾಖೆ ವತಿಯಿಂದ ಗೌರವಯುತವಾಗಿ ಸಂಸ್ಕಾರ ಮಾಡಲಿದ್ದೇವೆ ಎಂದು ತಿಳಿಸಿದರು.

click me!