ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆ
ಮಗು ಕಳೆದು ಎರಡು ದಿನಗಳಾದರೂ ಇನ್ನೂ ಪತ್ತೆಯಾಗದ ಖದೀಮರು
ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಯಲ್ಲಿರುವ ಪೊಲೀಸರು
- ವರದರಾಜ್
ದಾವಣಗೆರೆ (ಮಾ.18): ಇಲ್ಲಿ ಚಾಮರಾಜಪೇಟೆಯಲ್ಲಿರುವ (Chamarajapete) ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶು (New Born Baby) ನಾಪತ್ತೆಯಾಗಿ ಎರಡು ದಿನ ಕಳೆಯಿತು. ಆದ್ರು ಇನ್ನು ಆ ಮಗು ಎಲ್ಲಿಗೆ ಕದ್ದೊಯ್ದ ಕಳ್ಳರು ಯಾರು ಎಂಬ ಬಗ್ಗೆ ಪೊಲೀಸರಿಗೆ (Police) ಮಾಹಿತಿ ಸಿಕ್ಕಿಲ್ಲ. ಇತ್ತ ಆ ಮಗುವನ್ನು ಕಳೆದುಕೊಂಡ ತಂದೆತಾಯಿಗಳು ಆ ಮಗು ಯಾವ ಸ್ಥಿತಿಯಲ್ಲಿದಿಯೋ.. ಹೇಗಿದಿಯೋ ಎಂದು ಆತಂಕದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.
ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಕ್ಕಳ ಹಾಗೂ ಮಹಿಳಾ ಆಸ್ಪತ್ರೆಯಲ್ಲಿ ಪ್ರತಿದಿನ ನೂರಾರು ಹೆರಿಗೆಗಳು ಆಗುತ್ತವೆ. ಇದೊಂದು ಬಡವರ ಪಾಲಿನ ದೇವಸ್ಥಾನ ವಿದ್ದಂತೆ. ಇಂತಹ ಆಸ್ಪತ್ರೆಯಲ್ಲಿ ಉಮೇ ಸಲ್ಮಾ ಹಾಗು ಇಸ್ಮಾಯಿಲ್ ಜಬೀವುಲ್ಲಾ ರಿಗೆ ಜನಿಸಿದ ಗಂಡು ಮಗು ಕಳೆದು ಎರಡು ದಿನ ಆಯಿತು. ಸಿಸಿ ಟಿವಿಯಲ್ಲಿ(CCTV) ಮಗು ಕಳ್ಳತನ ಮಾಡಿರುವ ದೃಶ್ಯ ಸೆರೆಯಾಗಿದ್ದು ಆ ಅಪರಿಚಿತ ಮಹಿಳೆ (Unkown Women) ಯಾರು ಎಲ್ಲಿಯವಳು ಎಂಬ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ..
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿ ಇಸ್ಮಾಯಿಲ್ ಜಬಿವುಲ್ಲಾ ಅವರ ಪತ್ನಿ ಉಮಾಸಲ್ಮಾಗೆ ಮಾರ್ಚ್ 16 ರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಹರಪನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೋಗಲಾಗಿ ಹೆರಿಗೆ ಸ್ವಲ್ಪ ಕಷ್ಟವಿದೆ ಎಂದಾಗ ತಕ್ಷಣಕ್ಕೆ ದಾವಣಗೆರೆಗೆ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಬಂದು ಮಧ್ಯಾಹ್ನ 2.30ಕ್ಕೆ ಈ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರೀಕ್ಷೆ ಸಹ ಮಾಡಿ ಸಂಜೆ 6.30 ಕ್ಕೆ ಸಿಜರಿಯನ್ ಮಾಡಿ ಮಗು ವನ್ನು ಹೆರಿಗೆ ಮಾಡಿಸಿದರು. ಗಂಡು ಮಗುವಿನ ತೂಕ ಸ್ವಲ್ಪ ಕಡಿಮೆ ಇದೆಯೆಂದು ಐಸಿಯುನಲ್ಲಿ ಇಟ್ಟಿದ್ದರು. ನಂತರ 8.45 ರ ಸುಮಾರಿಗೆ ಮಗುವಿಗೆ ಎದೆ ಹಾಲು ಉಣಿಸಲು ಪೋಷಕರು ಕೇಳಿದಾಗ ಮಗುವಿಗೆ ಹೊಸ ಬಟ್ಟೆ ತನ್ನಿ ಅಂದ್ರು. ಮಗು ಹುಟ್ಟಿದ ಖುಷಿಯಲ್ಲಿ ಸಂಭ್ರಮದಲ್ಲಿ ಇದ್ದ ತಂದೆ ಹೊಸ ಬಟ್ಟೆ ತೆಗೆದುಕೊಂಡು ಬರುವಷ್ಟರಲ್ಲಿ ಮಗು ನಾಪತ್ತೆಯಾಗಿದೆ.
ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ, ಮಲೆನಾಡಿನ ಕೆಲವು ಭಾಗಗಳಲ್ಲಿ ವರ್ಷದ ಮಳೆ
ಕೆಂಪು ಚೂಡಿ ಹಾಕಿಕೊಂಡು ತಲೆಗೊಂದು ಬಿಳಿ ಸ್ಕಾರ್ಫ್ ಕಟ್ಟಿಕೊಂಡ ಮಹಿಳೆ ಹೆರಿಗೆ ವಾರ್ಡ್ ಸುತ್ತ ಸುತ್ತಾಡುತ್ತಿದ್ದಾಳೆ. ಮಗುವಿನ ತಂದೆ ತನ್ನ ಮಗುವಿಗೆ ಹೊಸ ಬಟ್ಟೆ ತರಲು ಹೋಗಿದ್ದನ್ನ ಕೂಡ ಗಮನಿಸಿದ್ದಾಳೆ. ತಾಯಿ ಉಮಾಸಲ್ಮಾ ಕಡೆಯವರು ಯಾರು ಎಂದಾಗ ನಾನೇ ಎಂದು ಹೇಳಿ ಮಗುವನ್ನ ಎತ್ತಿಕೊಂಡು ಕ್ಷಣದಲ್ಲಿ ನಾಪತ್ತೆ ಆಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ ಮೂವರು ಡಿ ಗ್ರೂಪ್ ನರ್ಸ್ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿದ್ದು ಇದುವರೆಗೂ ಕಳುವಾಗಿರುವ ಮಗುವಿನ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಡೀ ಪ್ರಕರಣದಲ್ಲಿ ಮಗು ಮಾರಾಟ ಜಾಲ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಿಡಿದು ತನಿಖೆ ಚುರುಕುಗೊಳಿಸಿದ್ದಾರೆ.
Rashmika Mandanna Trolled: ಅಂಜನಿಪುತ್ರನಿಗೆ ವಿಶ್ ಮಾಡದ ರಶ್ಮಿಕಾ ಪುಲ್ ಟ್ರೋಲ್!
ಕೆಲ ವರ್ಷಗಳ ಹಿಂದೆ ಕಂಪ್ಲಿಯಲ್ಲಿ ನಡೆದ ಘಟನೆಯೊಂದರಲ್ಲಿ ತಾಯಿ ತವರು ಮನೆಗೆ ಹೆರಿಗೆಗೆ ಹೋದ ಸಂದರ್ಭದಲ್ಲಿ ತಾಯಿಯ ಜೊತೆಯೇ ತೆರಳಿದ್ದ 2 ವರ್ಷದ ಮಗು ದಿಢೀರನೆ ನಾಪತ್ತೆಯಾಗಿದ್ದ ಮಗು ಮೂರು ವರ್ಷದ ಬಳಿಕ ಪತ್ತೆಯಾಗಿತ್ತು. ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ಬಲಕುಂದೆಪ್ಪ ತಾತನ ದೇವಸ್ಥಾನ ಬಳಿ ಮಗು ವಾಪಸ್ ಸಿಕ್ಕಿತ್ತು. ದೇವಲಾಪುರ ಗ್ರಾಮದ ಗುಬಾಜಿ ಯಲ್ಲಪ್ಪನ ಪತ್ನಿ ಮಲ್ಲಮ್ಮ 3 ವರ್ಷಗಳ ಹಿಂದೆ ತನ್ನ 2ನೇ ಮಗುವಿನ ಹೆರಿಗೆಗೆಂದು ತವರು ಮನೆ ದೇವಸಮುದ್ರ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ 2 ವರ್ಷ, 2 ತಿಂಗಳ ಚೊಚ್ಚಲ ಹೆಣ್ಣು ಮಗು ಉಮಾದೇವಿ ನಾಪತ್ತೆಯಾಗಿದ್ದಳು. ಈ ಕುರಿತು ಆಗ ಕಂಪ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.