ಕೆಎಸ್‌ಆರ್‌ಟಿಸಿ 'ಬೆಂಗಳೂರು-ಶ್ರೀರಂಗಪಟ್ಟಣ-ಮೈಸೂರು' ಟೂರ್ ಪ್ಯಾಕೇಜ್; ಟಿಕೆಟ್ ದರ-ವೇಳಾಪಟ್ಟಿ ಇಲ್ಲಿದೆ

Published : Oct 12, 2026, 04:59 PM IST
KSRTC Bengaluru Mysuru Tour Package

ಸಾರಾಂಶ

KSRTCಯಿಂದ ಬೆಂಗಳೂರು-ಮೈಸೂರು ಹೊಸ ಪ್ಯಾಕೇಜ್ ಟೂರ್ ಆರಂಭ. ಮೈಸೂರು ದಸರಾ ರಜೆ ದಿನಗಳ ಅಂಗವಾಗಿ ಅಶ್ವಮೇಧ ಕ್ಲಾಸಿಕ್ ಬಸ್ ಸಂಚಾರ ಮಾಡಲಿದೆ. ವೇಳಾಪಟ್ಟಿ, ವೀಕ್ಷಿಸಬೇಕಾದ ಸ್ಥಳಗಳು ಮತ್ತು ಟಿಕೆಟ್ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ಆಕರ್ಷಕ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ 'ಬೆಂಗಳೂರು-ನಿಮಿಷಾಂಬ-ಶ್ರೀರಂಗಪಟ್ಟಣ-ಮೈಸೂರು' ಮಾರ್ಗದಲ್ಲಿ ಅತ್ಯಾಧುನಿಕ ಅಶ್ವಮೇಧ ಕ್ಲಾಸಿಕ್ (Ashwamedha Classic) ಬಸ್ ಮೂಲಕ ವಿಶೇಷ ಪ್ಯಾಕೇಜ್ ಟೂರ್ ಅನ್ನು ಆರಂಭಿಸಲಾಗಿದೆ.

ಪ್ರಯಾಣಿಕರು ಈ ಪ್ರವಾಸದ ಸೌಲಭ್ಯವನ್ನು ದಿನಾಂಕ: 13-10-2026 ರಿಂದ 28-10-2026 ರವರೆಗೆ (ಅಕ್ಟೋಬರ್ 20 ಮತ್ತು 21 ರಂದು ಹೊರತುಪಡಿಸಿ) ಪಡೆದುಕೊಳ್ಳಬಹುದಾಗಿದೆ.

ಪ್ರವಾಸದ ವೇಳಾಪಟ್ಟಿ (Time Table):

ಬೆಂಗಳೂರಿನಿಂದ ನಿರ್ಗಮನ: ಬೆಳಿಗ್ಗೆ 06:00 (ಎಕ್ಸ್‌ಪ್ರೆಸ್ ಹೈವೇ)

ನಿಮಿಷಾಂಬ ದೇವಸ್ಥಾನ (ವೀಕ್ಷಣೆ/ಉಪಾಹಾರ): ಬೆಳಿಗ್ಗೆ 08:00 - 09:00

ಶ್ರೀರಂಗಪಟ್ಟಣ (ರಂಗನಾಥ ಸ್ವಾಮಿ ದೇವಾಲಯ, ದರಿಯಾ ದೌಲತ್, ಗುಂಬಜ್, ಸಂಗಮ): ಬೆಳಿಗ್ಗೆ 09:00 - 11:00

ಶ್ರೀರಂಗಪಟ್ಟಣದಿಂದ ಮೈಸೂರಿಗೆಯಾತ್ರೆ: ಬೆಳಿಗ್ಗೆ 11:00 - 11:30

ಸೆಂಟ್ ಫಿಲೋಮಿನಾ ಚರ್ಚ್: ಬೆಳಿಗ್ಗೆ 11:30 - ಮಧ್ಯಾಹ್ನ 12:00

ಮಧ್ಯಾಹ್ನದ ಊಟ: ಮಧ್ಯಾಹ್ನ 12:00 - 01:00

ಕಾವೇರಿ ಆರ್ಟ್ ಗ್ಯಾಲರಿ & ಕ್ರಾಫ್ಟ್ ಎಂಪೋರಿಯಂ: ಮಧ್ಯಾಹ್ನ 01:00 - 02:00

ಮೈಸೂರು ಅರಮನೆ: ಮಧ್ಯಾಹ್ನ 02:00 - ಸಂಜೆ 04:00

ಮೃಗಾಲಯ (Zoo): ಸಂಜೆ 04:00 - 05:30

ಚಾಮುಂಡಿ ಬೆಟ್ಟ: ಸಂಜೆ 05:30 - ರಾತ್ರಿ 08:00

ಬೆಂಗಳೂರು ತಲುಪುವುದು: ರಾತ್ರಿ 10:00 (ಎಕ್ಸ್‌ಪ್ರೆಸ್ ಹೈವೇ)

ಪ್ಯಾಕೇಜ್ ಟೂರ್ ಟಿಕೆಟ್ ದರ (Fare Details):

ವಯಸ್ಕರಿಗೆ: ರೂ. 950/- ಪ್ರತಿ ವ್ಯಕ್ತಿಗೆ

ಮಕ್ಕಳಿಗೆ (6 ರಿಂದ 12 ವರ್ಷದವರೆಗೆ): ರೂ. 750/- ಪ್ರತಿ ಮಗುವಿಗೆ

ಟಿಕೆಟ್ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ:

ಪ್ರಯಾಣಿಕರು ಈ ಪ್ಯಾಕೇಜ್ ಟೂರ್‌ನ ಸೌಲಭ್ಯ ಪಡೆಯಲು KSRTC ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಅಥವಾ www.ksrtc.karnataka.gov.in ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:

ದೂರವಾಣಿ ಸಂಖ್ಯೆಗಳು: 080-26252625 / 7760990100 / 7760990560 / 7760990287

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್: ಶೇ.56ರ ಮೀಸಲು ಆದೇಶಕ್ಕೆ ತಡೆ
ಮೈಸೂರು ದಸರಾ ನೋಡಲು ಬರೋರಿಗೆ ಕಾದಿದೆ ಅಚ್ಚರಿ! 7 ವಿಶೇಷ ಪ್ರವಾಸ ಪ್ಯಾಕೇಜ್‌ಗಳು ಘೋಷಿಸಿದ ಕೆಎಸ್‌ಟಿಡಿಸಿ