ಕೂರಲು ಆಗ್ತಿಲ್ಲ, ನಿಲ್ಲೋಕು ಆಗ್ತಿಲ್ಲ, ಬಳ್ಳಾರಿಯಲ್ಲಿ ಬಾಸ್‌ಗೆ 'ಅದೇ..' ಬರ್ತಿಲ್ಲ: ಕೊನೆಗೂ ಸಿಕ್ತು ಸರ್ಜಿಕಲ್‌ ಚೇರ್‌!

By Santosh Naik  |  First Published Sep 2, 2024, 2:43 PM IST

surgical chair in bellary jail ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆಯಾದ ನಂತರ ನಟ ದರ್ಶನ್‌ಗೆ ಹೊಸ ಸಮಸ್ಯೆ ಎದುರಾಗಿದೆ. ಬೆನ್ನು ನೋವಿನಿಂದಾಗಿ ಅವರಿಗೆ ಶೌಚಕ್ಕೆ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಸರ್ಜಿಕಲ್ ಚೇರ್ ನೀಡಲು ಜೈಲು ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ.


ಬಳ್ಳಾರಿ (ಸೆ.2 ): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಕಂಬಿ ಎಣಿಸುತ್ತಿರುವ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ಗೆ ಹೊಸ ಸಮಸ್ಯೆ ಎದುರಾಗಿತ್ತು. ಪರಪ್ಪನ ಅಗ್ರಹಾರ ಜೈಲಲ್ಲಿ ಐಷಾರಾಮಿ ಫಾರಿನ್‌ ಕಮೋಡ್‌ನಲ್ಲಿ ಕೂತು 'ಅದನ್ನು' ಇಳಿಸ್ತಿದ್ದ ದರ್ಶನ್‌ಗೆ ಬಳ್ಳಾರಿ ಜೈಲಿನ ಇಂಡಿಯನ್‌ ಕಮೋಡ್‌ನಲ್ಲಿ ಕೂರೋಕೆ ಸಮಸ್ಯೆ ಆಗ್ತಿತ್ತು. ಬೆನ್ನು ನೋವಿನ ಸಮಸ್ಯೆಯ ಕಾರಣಕ್ಕಾಗಿ ಶೌಚ ಮಾಡಲು ಸಮಸ್ಯೆ ಆಗ್ತಿದೆ ಎಂದು ದರ್ಶನ್‌ ಹೇಳಿಕೊಂಡಿದ್ದರು. ಕೊನೆಗೆ ಅವರ ಮನವಿಗೆ ಸ್ಪಂದಿಸಿದ ಜೈಲಿನ ಅಧಿಕಾರಿಗಳು ವೈದ್ಯರ ಶಿಫಾರಸಿನ ಮೇರೆಗೆ ಸರ್ಜಿಕಲ್‌ ಚೇರ್‌ ಕೊಡಲು ಒಪ್ಪಿಕೊಂಡಿದ್ದಾರೆ. ಸೋಮವಾರ ಸಂಜೆಯ ವೇಳೆಗೆ ದರ್ಶನ್‌ಗೆ ಸರ್ಜಿಕಲ್‌ ಚೇರ್‌ ಸಿಗಲಿದೆ ಎಂದು ವರದಿಯಾಗಿದೆ. ವೈದ್ಯರ ಶಿಫಾರಸ್ಸಿನ ಬಳಿಕ ಸಂಜೆ ದರ್ಶನ್ ಗೆ ಸಂಜೆ ಸರ್ಜಿಕಲ್‌ ಚೇರ್‌ ಸಿಗಲಿದೆ. ದರ್ಶನ್‌ ಅವರ ಸೆಲ್‌ಗೆ ಸರ್ಜಿಕಲ್‌ ಚೇರ್‌ ಬರಲಿದೆ.

ವೈದ್ಯರ ತಪಾಸಣೆ, ಕುಟುಂಬದ ಸದಸ್ಯರು ನೀಡಿದ ಮೆಡಿಕಲ್ ವರದಿ ಮತ್ತು ಪರಪ್ಪನ ಅಗ್ರಹಾರ ವೈದ್ಯರು ‌ನೀಡಿದ ವರದಿಯ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ.  ದರ್ಶನ್ ಆರೋಗ್ಯದ ಬಗ್ಗೆ ವೈದ್ಯರು ಕೊಟ್ಟ ವರದಿ ಬಳಿಕ ಕಾರಾಗೃಹ ಇಲಾಖೆ ಡಿಐಜಿ ಸರ್ಜಿಕಲ್ ಚೇರ್ ಗೆ ಒಪ್ಪಿಗೆ ನೀಡಿದ್ದಾರೆ. ಅರ್ಥೋಪಿಡಿಕ್ ವೈದ್ಯರು ಹಾಗೂ ಪರಪ್ಪನ ಅಗ್ರಹಾರದಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಆದರೆ, ಮನೆಯಿಂದ ಅವರಿಗೆ ಸರ್ಜಿಕಲ್‌ ಚೇರ್‌ ಕೊಡಲು ಒಪ್ಪಿಗೆ ನೀಡಲಾಗಿಲ್ಲ. ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದರ್ಶನ್ ಗೆ ಚೇರ್ ನೀಡಲಾಗುತ್ತದೆ.

ದರ್ಶನ್‌ರಿಂದ ಸರ್ಜಿಕಲ್‌ ಚೇರ್‌ ಮನವಿ ಬಂದ ಬಳಿಕ ಅವರ ಮೆಡಿಕಲ್‌ ಚೆಕ್‌ಅಪ್‌ ಕೂಡ ಮಾಡಲಾಗಿತ್ತು. ಬಿಪಿ ಶುಗರ್ ಸೇರಿದಂತೆ ಎಲ್ಲಾ ನಾರ್ಮಲ್ ಇದ್ದರೆ, ಬೆನ್ನುನೋವು ಇರೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ. ಪರಪ್ಪನ ಅಗ್ರಹಾರದಲ್ಲಿ ನಡೆದ ಮೆಡಿಕಲ್ ರಿಪೋರ್ಟ್ ಮೇಲ್ ಮೂಲಕ ಜೈಲಿನ ಡಿಐಜಿ ತರಿಸಿಕೊಂಡಿದ್ದರು. ಬಳ್ಳಾರಿ ಮೆಡಿಕಲ್ ವರದಿ ಮತ್ತು ಅಗ್ರಹರದ ಮೆಡಿಕಲ್ ರಿಪೋರ್ಟ್ ತಾಳೆ ಮಾಡಿ ನೋಡಲಾಗುತ್ತು. ದರ್ಶನ್‌ಗೆ ಬೆನ್ನುನೋವು ಇರುವುದು ಈ ವೇಳೆ ಗೊತ್ತಾಗಿದೆ.

Latest Videos

undefined

ಬೆನ್ನು ನೋವಿದೆ, ಶೌಚಕ್ಕೆ ಕೆಳಗೆ ಕೂರಲು ಆಗಲ್ಲ, ಸರ್ಜಿಕಲ್‌ ಚೇರ್‌ ಬೇಕು: ದರ್ಶನ್‌ ಮನವಿ

ಜೈಲಿನಲ್ಲಿ ಬೆಳಗ್ಗೆ ವಾಕ್‌ ಮಾಡಿದ್ದ ದರ್ಶನ್‌, ಬೆಳಗಿನ ಉಪಾಹಾರವಾಗಿ ಟೊಮೋಟೋ ಬಾತ್‌ ಸೇವಿಸಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಅವರ ಜೊತೆಗಿನ ಭೇಟಿ ಬಳಿಕ ದರ್ಶನ್‌ ಸ್ವಲ್ಪ ನಿರಾಳರಾಗಿದ್ದರೂ, ಸೌಚದ ವಿಚಾರವಾಗಿ ಎದುರಾದ ಸಮಸ್ಯೆಯಿಂದ ಕಷ್ಟ ಎದುರಿಸಿದ್ದರು.

 

Repoters Dairy: ದರ್ಶನ್‌ಗೆ ಕಾಡುತ್ತಿದೆ ‘ದುರ್ಯೋಧನ ಗ್ರಹಣ’: ಇದೇಕೆ ಹೀಗೆ ಸಾಲು ಸಾಲು ಕಂಟಕ?

ಜೈಲಿನಲ್ಲಿ ದರ್ಶನ್ ಕಾವಲು ಕಾಯಲು ಮೂರು ಸಿಸಿ ಕ್ಯಾಮಾರಾ, ಮೂರು ಬಾಡಿ ವೋರ್ನ್ ಕ್ಯಾಮೆರಾ ಇರಿಸಲಾಗಿದೆ. ದರ್ಶನ ಓಡಾಟ ಮಾಡಿದ , ಭೇಟಿ ಮಾಡಿದ ಸಂಬಂಧಿಕರ ದೃಶ್ಯಾವಳಿಯನ್ನೂ ಸಂಗ್ರಹ ಮಾಡಲಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಇರುವ ಪೂರ್ಣ ಸಮಯದ ವಿಡಿಯೋಗಳನ್ನು ಸಂಗ್ರಹ ಮಾಡಿ ಇಡಲಾಗುತ್ತಿದೆ. ಬಳ್ಳಾರಿಯ ಜೈಲಿನಲ್ಲಿ ದರ್ಶನ್ ಕುರಿತಾದ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ ಹಾರ್ಡ್ ಡಿಸ್ಕ್‌ನಲ್ಲಿ ಸೇವ್‌ ಮಾಡುತ್ತಿದ್ದಾರೆ. ಇದಕ್ಕಾಗಿ ಹೊಸ ಹಾರ್ಡ್‌ ಡಿಸ್ಕ್‌ ಕೂಡ ಖರೀದಿ ಮಾಡಲಾಗಿದೆ. ಹೈ ಸೆಕ್ಯೂರಿಟಿ ಸೆಲ್ ನಂಬರ್ 15 ಮುಂಭಾಗದ ಮೂರು ಸಿಸಿ ಕ್ಯಾಮೆರಾ, ಮೂರು ಬಾಡಿವೋರ್ನ್ ಕ್ಯಾಮೆರಾ ಸಿಬ್ಬಂದಿಗಳಿದ್ದಾರೆ. ಸಂಬಂಧಿಕರ ಭೇಟಿಯ ಸಿಸಿಟಿವಿ ವಿಡಿಯೋ ಸೇರಿದಂತೆ ಎಲ್ಲ ದೃಶ್ಯ ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿದೆ. ವಿಶೇಷ ಪ್ರಕರಣದದಲ್ಲಿ ಮಾತ್ರವೇ ಸಿಸಿ ಕ್ಯಾಮೆರಾಗಳ ವಿಡಿಯೋ ಸಂಗ್ರಹ ಮಾಡಲಾಗುತ್ತಿದೆ. ದರ್ಶನ್ ಸಂಬಂಧಿತ ಬಳ್ಳಾರಿ ಜೈಲಿನ 24 ಗಂಟೆಗಳ ಸಿಸಿಟಿವಿ ದೃಶ್ಯವನ್ನು ಜೈಲಾಧಿಕಾರಿಗಳು ಸಂಗ್ರಹ ಮಾಡುತ್ತಿದ್ದಾರೆ. ಸಿಸಿಟಿವಿ ಮಾನಿಟರಿಂಗ್‌ಗೆ ಸ್ಪೆಷಲ್ ಸಿಬ್ಬಂದಿ ನೇಮಕ ಮಾಡಲಾಗಿದೆ.

ನಟೋರಿಯಸ್‌ ಕ್ರಿಮಿನಲ್‌ಗಳ ಜೈಲು: ದರ್ಶನ್ ಇರಿಸಿರೋ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಈಗಲೂ ನಟೋರಿಯಸ್‌ ಕ್ರಿಮಿನಲ್‌ಗಳಿದ್ದಾರೆ. ಮೂರಕ್ಕಿಂತ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಗಳನ್ನು ಹೊತ್ತಿರುವ ವೈಕ್ತಿಗಳು ಜೈಲಿನಲ್ಲಿದ್ದಾರೆ. ಇದೇ ಹೈ ಸೆಕ್ಯೂರಿಟಿ ಸೆಲ್ ಗಳಲ್ಲಿ ದರ್ಶನ್‌ರನ್ನ ಇರಿಸಲಾಗಿದೆ. 16ಹೈ ಸೆಕ್ಯೂರಿಟಿ ಸೆಲ್ ಗಳಲ್ಲಿ ಇದೀಗ 15ನೇ ಸೆಲ್ ನಲ್ಲಿ ದರ್ಶನ್ ಇದ್ದಾರೆ. 3 ಮತ್ತು 4ನೇ ಸೆಲ್ ಗಳಲ್ಲಿ ದರ್ಶನ್ ಸೇರಿ 5 ಆರೋಪಿಗಳು ಹೈ ಸೆಕ್ಯೂರಿಟಿ ಸೆಲ್‌ಗಳಲ್ಲಿದ್ದಾರೆ. ಈ ಹೈ ಸೆಕ್ಯೂರಿಟಿ ಸೆಲ್ ಗಳಲ್ಲಿರೋ ಆರೋಪಿಗಳು ಇತರ ಖೈದಿಗಳೊಂದಿಗೆ ಸಂಪರ್ಕ ಸಾಧ್ಯವೇ ಇಲ್ಲ. ದಿನಕ್ಕೆ ಎರಡು ಬಾರಿ ಮಾತ್ರ ದರ್ಶನ್ ಗೆ ವಾಕಿಂಗ್ ಮಾಡೋದಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್‌ ಏಕಾಂಗಿಯಾಗಿ ದಿನಗಳನ್ನು ಕಳೆಯಬೇಕಿದೆ.

click me!