Latest Videos

ದರ್ಶನ್ ಪರ ವಕೀಲರು, ಲಾಯರ್ ಆಗಲು ಅನ್‌ಫಿಟ್; ಎಂಎಲ್‌ಸಿ ಭೋಜೇಗೌಡ ಆಕ್ರೋಶ

By Sathish Kumar KHFirst Published Jun 18, 2024, 4:11 PM IST
Highlights

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧವಾಗಿರುವ ನಟ ದರ್ಶನ್ ಪರ ವಾದ ಮಂಡಿಸುತ್ತಿರುವ ವಕೀಲರು ಲಾಯರ್ ಆಗಲು ಅನ್‌ ಫಿಟ್ ಆಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಕಿಡಿ ಕಾರಿದ್ದಾರೆ.

ಚಿಕ್ಕಮಗಳೂರು (ಜೂ.18): ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನ ಪರವಾಗಿ ವಾದ ಮಾಡುತ್ತಿರುವ ವಕೀಲರು ತಮ್ಮ ಕಕ್ಷಿದಾರ ಅಪರಾಧ ಮಾಡಿಲ್ಲವೆಂದು 100 ಸಲ ಹೇಳ್ತಾನೆ. ಆದರೆ, ಇವರು ಕಕ್ಷಿದಾರ ನಿರಪರಾಧಿ ಎಂದು ಕೋರ್ಟ್‌ನಲ್ಲಿ ಹೇಳಬೇಕು ಹೊರತು ಸಾರ್ವಜನಿಕವಾಗಿ ಹೇಳಬಾರದು. ದರ್ಶನ್ ಪರ ವಕೀಲರು ಲಾಯರ್ ಆಗಲು ಅನ್‌ಫಿಟ್ ಆಗಿದ್ದಾರೆ ಎಂದು ಬಾರ್ ಕೌನ್ಸಿಲ್ ಮಾಜಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಪರ ವಕೀಲರಿಗೆ ನಿನ್ನ ಕಕ್ಷಿದಾರರನ್ನ ಕೋರ್ಟಿನಲ್ಲಿ ಡಿಫೆಂಡ್ ಮಾಡ್ಕೋ... ಪಬ್ಲಿಕ್ ನಲ್ಲಿ ಅಲ್ಲ. ದರ್ಶನ್ ಪರ ವಕೀಲರು ಮಾಧ್ಯಮಗಳ ಮುಂದೆ ಮಾತನಾಡುವಾಗ ಅವರು ಅಪರಾಧ ಮಾಡಿಲ್ಲ ಅಂತ 100 ಸಲ ಹೇಳ್ತಾನೆ. ಆತ ಲಾಯರ್ ಆಗಲು ಅನ್ ಫಿಟ್. ಬಾರ್ ಕೌನ್ಸಿಲ್‌ನಿಂದ ಅವನಿಗೆ ನೋಟೀಸ್ ಕೊಡುಸ್ತೀನಿ. ಅವರು ತಪ್ಪು ಮಾಡಿಲ್ಲ, ಪೊಲೀಸರ ತನಿಖೆ ಸರಿ‌ ಇಲ್ಲ ಅಂತ ಬೀದಿಯಲ್ಲಿ ಹೇಳ್ತಾರಾ? ಬೀದಿಯಲ್ಲಿ ಮಾತನಾಡಲು ನಿನಗೆ ಪ್ರತಿಜ್ಞೆ ಕೊಟ್ಟಿದ್ದಾರಾ.? ಎಂದು ತಾಕೀತು ಮಾಡಿದರು.

ನಟ ದರ್ಶನ್ ಫಾರ್ಮ್ ಹೌಸ್‌ನ ಮತ್ತೊಬ್ಬ ಮ್ಯಾನೇಜರ್ ಶವವಾಗಿ ಪತ್ತೆ

ನಿಮ್ಮ ಕಕ್ಷಿದಾರರು ತಪ್ಪು ಮಾಡಿಲ್ಲ ಅನ್ನೋದನ್ನ ಕೋರ್ಟಿನಲ್ಲಿ ಪ್ರೂವ್ ಮಾಡು. ಅದಕ್ಕೆ ಕರಿ ಕೋಟು ಹಾಕಿರೋದು, ಲಾಯರ್  ಆಗಿ ಕರಿಕೋಟಿನ ಬೆಲೆ ಕಳೆಯಬಾರದು. ಅಪರಾಧ ಮಾಡಿಲ್ಲ ಅಂತ ಅಪರಾಧಿ ಹೇಳಿದ ರೀತಿ ಲಾಯರ್ ಹೇಳ್ತಾನೆ. ನಿನ್ನ ಕೆಲಸ ಕೋರ್ಟ್ ಒಳಗೆ ಇರಬೇಕೇ ಹೊರತು, ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ. ನಿನ್ನ ಕಕ್ಷಿದಾರನ ಡಿಫೆಂಡ್ ಮಾಡು, ಎಲ್ಲರೂ ಅದಕ್ಕೆ ಕರೀ ಕೋಟು ಹಾಕಿರೋದು. ಗಾಂಧೀಜಯನ್ನು ಕೊಂದ ನಾಥೂರಾಮ್ ಗೋಡ್ಸೆ ಹಾಗೂ ಇಂದಿರಾಗಾಂಧಿ, ರಾಜೀವ್ ಗಾಂಧಿ ಕೊಂದವರಿಗೂ ಲಾಯರಿದ್ದರು. ಅವರು ಯಾರೂ ಕೂಡ ತಮ್ಮ ಕಕ್ಷಿದಾರರು ತಪ್ಪು ಮಾಡಿಲ್ಲ ಅಂತ ಹೇಳಿಲ್ಲ. ಆದರೆ ನೀನಿ ಹೇಗೆ ಸಾರ್ವಜನಿಕವಾಗಿ ತಪ್ಪು ಮಾಡಿಲ್ಲವೆಂದು ಹೇಳುತ್ತೀಯ ಎಂದು ಕಿಡಿಕಾರಿದರು.

ಅದೃಷ್ಟ ದೇವತೆ ಬಂದ್ರೆ ಬಟ್ಟೆಬಿಚ್ಚಿ ಬೆಡ್‌ರೂಮಲ್ಲಿ ಕೂರಿಸ್ಬೇಕು ಎಂದಿದ್ದ ದರ್ಶನ್‌ಗೆ ಪಂಚ ದೇವಿಯರ ವಕ್ರದೃಷ್ಟಿ!

ನಿನ್ನ ಕಕ್ಷಿದಾರ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷಿ ಸಮೇತ ಕೋರ್ಟಿನಲ್ಲಿ ಪ್ರೂವ್ ಮಾಡು, ಹೊರಗಡೆ ಕೂಗಾಡೋದಲ್ಲ. ನೀನು ನಿಜವಾಗಿಯೂ ಲಾಯರ್ ಆಗಲು ಅನ್‌ಫಿಟ್ ಇದ್ದೀಯ. ಕರೀ ಕೋಟಿಗೆ ಅದರದ್ದೇ ಆದ ಪಾವಿತ್ರ್ಯವಿದೆ, ಅದರ ಮರ್ಯಾದೆ ತೆಗೆಯಬಾರದು. ಒಮ್ಮೆ ಪ್ರತಿಜ್ಞಾವಿಧಿ ಸ್ವೀಕರಿಸದ ಮೇಲೆ ಅದರ ಗೌರವ ಕಾಪಾಡಬೇಕು ಎಂದು ಚಿಕ್ಕಮಗಳೂರಿನಲ್ಲಿ ವಕೀಲ ಹಾಗೂ ಎಂಎಲ್‌ಸಿ ಭೋಜೇಗೌಡ ಹೇಳಿದರು.

click me!