Latest Videos

ದರ್ಶನ್ & ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್‌: ಆರೋಪಿಗಳು ಎಷ್ಟೇ ದೊಡ್ಡವರಾದ್ರೂ ಕ್ರಮ ಜರುಗಿಸಬೇಕು, ವಿಜಯೇಂದ್ರ

By Girish GoudarFirst Published Jun 18, 2024, 12:25 PM IST
Highlights

ಈವರೆಗೆ ಸರ್ಕಾರದ ಸಚಿವರು ರೇಣುಕಾಸ್ವಾಮಿ ಮನೆಗೆ ಬಂದಿಲ್ಲ. ಇಂದು ಗೃಹ ಸಚಿವ ಪರಮೇಶ್ವರ್ ಬರುತ್ತಾರೆಂಬ ಮಾಹಿತಿ ಇದೆ. ಸರ್ಕಾರ ಕೂಡಲೇ ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ಮೃತ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಬಿಜೆಪಿ ವತಿಯಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 2 ಲಕ್ಷ ರೂ. ನೆರವು ನೀಡಿದ್ದೇವೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 
 

ಚಿತ್ರದುರ್ಗ(ಜೂ.18):  ನಟ ದರ್ಶನ್ & ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಇದೊಂದು ಅಮಾನುಷ ಕೃತ್ಯ ರಾಷ್ಟ್ರಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ರೇಣುಕಾಸ್ವಾಮಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು. ಗಂಭೀರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆರೋಪಿಗಳು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. 

ಇಂದು(ಮಂಗಳವಾರ) ವಿಜಯೇಂದ್ರ ಅವರು ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬದ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ವಿಜಯೇಂದ್ರ ಬಳಿ ರೇಣುಕಾಸ್ವಾಮಿ ಪೋಷಕರು ಕಣ್ಣೀರಿಟ್ಟಿದ್ದಾರೆ.

ನಟ ದರ್ಶನ್ ಫಾರ್ಮ್ ಹೌಸ್‌ನ ಮತ್ತೊಬ್ಬ ಮ್ಯಾನೇಜರ್ ಶವವಾಗಿ ಪತ್ತೆ!

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಈವರೆಗೆ ಸರ್ಕಾರದ ಸಚಿವರು ರೇಣುಕಾಸ್ವಾಮಿ ಮನೆಗೆ ಬಂದಿಲ್ಲ. ಇಂದು ಗೃಹ ಸಚಿವ ಪರಮೇಶ್ವರ್ ಬರುತ್ತಾರೆಂಬ ಮಾಹಿತಿ ಇದೆ. ಸರ್ಕಾರ ಕೂಡಲೇ ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ಮೃತ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಬಿಜೆಪಿ ವತಿಯಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 2 ಲಕ್ಷ ರೂ. ನೆರವು ನೀಡಿದ್ದೇವೆ ಎಂದು ಹೇಳಿದ್ದಾರೆ. 

click me!