Latest Videos

ಕರ್ನಾಟಕದಲ್ಲಿ ಭಂಡ ಸರ್ಕಾರ ಇದೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ವಿಜಯೇಂದ್ರ

By Girish GoudarFirst Published Jun 18, 2024, 11:59 AM IST
Highlights

ಬಿಜೆಪಿ ಸರ್ಕಾರದಿಂದ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ರಾಜ್ಯದ ಆದಾಯ ಅಧಿಕವಿತ್ತು. ಆದಾಯ ಹೆಚ್ಚಳವಿದ್ದ ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಯಾವ ರೀತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅತೀ ಹೆಚ್ಚು ಬಜೆಟ್ ಮಂಡಿಸಿರುವ ಅನುಭವಿ ಮುಖ್ಯಮಂತ್ರಿ ಇದ್ದೀರಿ. ರಾಜ್ಯದ ಹಣಕಾಸು ಪರಿಸ್ಥಿತಿಯನ್ನ ಮುಖ್ಯಮಂತ್ರಿಯವರು ಅದೋಗತಿಗೆ ತಂದಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ 

ತುಮಕೂರು(ಜೂ.18):  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಿನ್ನೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದೇವೆ. ಗುರುವಾರ ರಾಜ್ಯಾದ್ಯಂತ ರಸ್ತೆ ರೋಖೋ ಚಳವಳಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಭಂಡ ಸರ್ಕಾರ ಇದೆ. ನಾವು ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತಾ ಇದ್ರೆ, ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರವನ್ನ ದೂರುವ ಕೆಲಸ ಮಾಡ್ತಿದ್ದಾರೆ. ಅವರ ಹುಳುಕನ್ನ ಮುಚ್ಚಿ ಹಾಕುವ ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದು ವರ್ಷದಲ್ಲಿ ಹಾಲಿನ ದರ, ವಿದ್ಯುತ್ ದರ, ಅಬಕಾರಿ ಸೇರಿದಂತೆ ಎಲ್ಲಾ ದರ ಹೆಚ್ಚು ಮಾಡಿದ್ದಾರೆ.  ಮುದ್ರಾಂಕ ಶುಲ್ಕವನ್ನ ಕೂಡ ಜಾಸ್ತಿ ಮಾಡಿದ್ರಿ, ಇಷ್ಟೆಲ್ಲಾ ತೆರಿಗೆ ಜಾಸ್ತಿ ಮಾಡಿ ಸರ್ಕಾರದ ಆದಾಯ ಜಾಸ್ತಿ ಮಾಡಿಕೊಂಡ್ರಿ, ಇದೆಲ್ಲಾ ಆದಾಯ ಎಲ್ಲಿಗೆ ಹೋಗ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ.

ಇಂದು(ಮಂಗಳವಾರ) ಸಿದ್ದಗಂಗಾ ಮಠ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ,  ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡ್ತಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಣ ಆಂಧ್ರಕ್ಕೆ ಹೋಗಿದೆ. ಆಂಧ್ರ ಚುನಾವಣೆಯಲ್ಲಿ ಬಳಕೆಯಾಗಿದೆ, ಬೇನಾಮಿ ಖಾತೆ ಮುಖಾಂತರ ಹೋಗಿದೆ . ರಾಜ್ಯದ ಹಣಕಾಸು ಮಂತ್ರಿಯಾಗಿದ್ದೀರಿ ನೀವು, ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ನಿಮಗೆ ನೈತಿಕತೆ ಇದ್ಯಾ?. ಕೇಂದ್ರ ಸರ್ಕಾರವನ್ನ ದೂಷಿಸ್ತೀರಿ, ನಾವು ಪ್ರತಿಭಟನೆ ಮಾಡ್ತಿದ್ರೆ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡ್ತೀರಿ. ನೀವೇನು ಕಡಿತಾ ಇದ್ದೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದ್ದಾರೆ. 

ಕರ್ನಾಟಕದಲ್ಲಿ ಪೆಟ್ರೋಲ್‌ ಶತಕ ದಾಟಿಸಿದ್ದೇ ಬಿಜೆಪಿ: ಜಮೀ‌ರ್ ಅಹಮದ್

ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರೈತರಿಗೆ ಅನ್ಯಾಯವಾಗ್ತಿದೆ. ಮುಖ್ಯಮಂತ್ರಿಯವರು ಇದನ್ನ ಗಮನಿಸಬೇಕು. ರಾಜ್ಯದಲ್ಲಿ ಈಗ ಉತ್ತಮ ಮಳೆಯಾಗ್ತಿದೆ. ರೈತರು ಟ್ರ್ಯಾಕ್ಟರ್, ಟಿಲ್ಲರ್, ಪಂಪ್ ಸೆಟ್ ಗಳನ್ನ ಉಪಯೋಗಿಸುತ್ತಿದ್ದಾರೆ. ಮೂರು ಮೂರುವರೆ ರೂಪಾಯಿ ಜಾಸ್ತಿ ಮಾಡಿದ್ರೆ ಅದರ ಹೊರೆ ರೈತರ ಮೇಲೆ ಬೀಳೋದಿಲ್ವ. ಜನರ ಸಾಮಾನ್ಯರ ಮೇಲೆ ಹೊರೆ ಆಗಲ್ವಾ?. ಸಚಿವರು ಹೇಳ್ತಾರೆ, ತೆರಿಗೆ ಜಾಸ್ತಿ ಮಾಡಿರೋದು ಜನಸಾಮಾನ್ಯರಿಗೆ ಹೊರೆ ಆಗಿಲ್ಲ ಅಂತಾ ಹೇಳ್ತೀರಾ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಅಭಿವೃದ್ಧಿ ಮಾಡೋಕೆ ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ ಅಂತಾ ಹೇಳ್ತೀರಾ. ನಿಮ್ಮ ಆದಾಯವನ್ನ ಏನ್ ಮಾಡ್ತಿದ್ದೀರಾ ಹಾಗಿದ್ರೆ ಎಂದು ಕಿಡಿ ಕಾರಿದ್ದಾರೆ. 

ಬಿಜೆಪಿ ಸರ್ಕಾರದಿಂದ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ರಾಜ್ಯದ ಆದಾಯ ಅಧಿಕವಿತ್ತು. ಆದಾಯ ಹೆಚ್ಚಳವಿದ್ದ ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಯಾವ ರೀತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅತೀ ಹೆಚ್ಚು ಬಜೆಟ್ ಮಂಡಿಸಿರುವ ಅನುಭವಿ ಮುಖ್ಯಮಂತ್ರಿ ಇದ್ದೀರಿ. ರಾಜ್ಯದ ಹಣಕಾಸು ಪರಿಸ್ಥಿತಿಯನ್ನ ಮುಖ್ಯಮಂತ್ರಿಯವರು ಅದೋಗತಿಗೆ ತಂದಿದ್ದಾರೆ. ಬಿಜೆಪಿಯವರು ಪ್ರಶ್ನೆ ಮಾಡೋದೇ ತಪ್ಪು ಅನ್ನೋ ರೀತಿಯಲ್ಲಿ ಬಿಂಬಿಸುತ್ತಿದ್ದೀರಿ, ಇದು ಸರಿಯಲ್ಲ. ರಾಜಕಾರಣ ಮಾಡೋದನ್ನ ಬಿಟ್ಟು, ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಜನಸಾಮಾನ್ಯರಿಗೆ ಹೊರೆ ಆಗ್ತಿರೋ ನಿರ್ಧಾರದಿಂದ ಹಿಂದೆ ಸರಿಯಬೇಕು. ಬರೋ ಗುರುವಾರ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಜೊತೆ ಸೇರಿ ನಾವೆಲ್ಲರೂ ಪ್ರತಿಭಟನೆ ಮಾಡ್ತಿದ್ದೀವಿ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯವರು ಎಲ್ಲೋ ಒಂದು ಕಡೆ ಎಡವುತ್ತಿದ್ದಾರೆ. ರಾಜ್ಯ ಸರ್ಕಾರ ಎಡವುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸವನ್ನ ಮಾಡ್ತಿದ್ದೇವೆ. ಬೇರೆ ರಾಜ್ಯದಲ್ಲಿ ನಮ್ಮ ರಾಜ್ಯಕ್ಕಿಂತ ಬೆಲೆ ಜಾಸ್ತಿ ಇದೆ ಅನ್ನೋ ಉದಾಹರಣೆ ಇಟ್ಟುಕೊಂಡು, ಇಂತಹ ಸಂದರ್ಭದಲ್ಲಿಯೂ ರೈತರ ಮೇಲೆ ಹೊರೆ ಹಾಕ್ತಿರುವಂತಹದ್ದು ಸರಿನಾ?. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಜನಸಾಮಾನ್ಯರ ಮೇಲೆ ಹೊರೆ ಹಾಕೋದು ಎಷ್ಟು ಸರಿ. ಈ ರೀತಿ ಉಡಾಫೆ ಉತ್ತರ ಕೊಡೋದು ಬಿಟ್ಟು, ಹಿಂದೆ ಬೊಮ್ಮಾಯಿ 7 ರೂಪಾಯಿ ಕಡಿಮೆ ಮಾಡಿದ್ದರು. ತೆರಿಗೆ ಜಾಸ್ತಿ ಮಾಡಿಕೊಂಡು ಎಲ್ಲೋಗ್ತಿದೆ ಈ ದುಡ್ಡು, ಅಭಿವೃದ್ಧಿಗೂ ದುಡ್ಡಿಲ್ಲ ಎಂದಿದ್ದಾರೆ., 

ಕಾಂಗ್ರೆಸ್‌ ಶಾಸಕ ನಾಡಗೌಡ ಹೇಳ್ತಿದ್ದಾರೆ, ಅಭಿವೃದ್ಧಿಗೆ ಹಣ ಕೊಡ್ತಿಲ್ಲ. ನಾನು ಶಾಸಕರಾಗಿ ಮುಂದುವರೆಯೋಕೆ ಆಗ್ತಿಲ್ಲ. ರಾಜಕೀಯ ನಿವೃತ್ತಿ ಹೊಂದುತ್ತೀನಿ ನಾನು ಅಂತಾ ನಿಮ್ಮ ಶಾಸಕರೇ ಹೇಳ್ತಿದ್ದಾರೆ. ಮತ್ತೊಂದು ಕಡೆ ಲೋಕಸಭೆಯಲ್ಲಿ ಹಿನ್ನಡೆಯಾದ್ರೆ ಗ್ಯಾರೆಂಟಿಗಳನ್ನ ನಿಲ್ಲಿಸಬೇಕು ಅಂತಾ ಅವರ ಸಚಿವ, ಶಾಸಕರೇ ಹೇಳಿದ್ದಾರೆ. ಇದನ್ನ ಮುಖ್ಯಮಂತ್ರಿಯವರು ಗಂಭೀರವಾಗಿ ತೆಗೆದುಕೊಳ್ಳದೆ ಜನರ ಮೇಲೆ ಹೊರೆ ಹಾಕ್ತಿದ್ದಾರೆ. ನಾವು ಎಲ್ಲವನ್ನ ಮಾಡ್ತಿದ್ದೇವೆ, ನಿನ್ನೆ ಪ್ರತಿಭಟನೆ ಕೂಡ ಮಾಡ್ತಿದ್ದೇವೆ. ಮುಂದಿನ ಅಧಿವೇಶನದಲ್ಲಿ ಸರ್ಕಾರ ಶಾಸಕರಿಗೆ ಅನುದಾನ ಕೊಡ್ತಿಲ್ಲ ಅನ್ನೋದನ್ನ ಕೂಡ ಚರ್ಚೆ ಮಾಡ್ತೇವೆ ಎಂದು ತಿಳಿಸಿದ್ದಾರೆ. 

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡೋದು ಕೇಂದ್ರ ಸರ್ಕಾರಕ್ಕೆ ಸರ್ವೇ ಸಾಮಾನ್ಯ: ಡಿಕೆಶಿ ಗರಂ

ಚಿನ್ನೇನಹಳ್ಳಿ ಪ್ರಕರಣವನ್ನ ಜಿಲ್ಲಾಡಳಿತ ಮುಚ್ಚಿಹಾಕುವ ಕೆಲಸ ಮಾಡ್ತಿದೆ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಇದೊಂದೇ ಅಲ್ಲ, ಗಂಭೀರವಾದ ವಿಚಾರವನ್ನ ಹಗುರವಾಗಿ ತೆಗೆದುಕೊಳ್ತಿದೆ. ಗ್ಯಾರೆಂಟಿಗೆ ಹಣ ಹೊಂದಿಸೋದ್ರಲ್ಲಿಯೇ ಸರ್ಕಾರ ಮುಳುಗಿ ಹೋಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ರೇಣುಕಾಸ್ವಾಮಿ ಮನೆಗೆ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಜಯೇಂದ್ರ, ಸಮಾಜದಲ್ಲಿ ಈ ರೀತಿಯ ವಿಚಾರಗಳನ್ನ ಯಾರೂ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ. ಈ ಕೃತ್ಯ ಎಸಗಿದವರು ಎಷ್ಟೇ ದೊಡ್ಡವರಾದ್ರೂ ಕೂಡ ಪೊಲೀಸರು ಬಿಗಿಯಾಗಿ ಕೆಲಸ ಮಾಡಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಯಾರು ಎಷ್ಟೇ ಪ್ರಭಾವಿಗಳಾಗಿದ್ರು ತನಿಖೆ ಬಿಗಿಯಾಗಿ ಆಗಬೇಕು ಅನ್ನೋದು ನನ್ನ ಒತ್ತಾಯ. ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕೆಲಸ ಮಾಡ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ. 

click me!