ದಲಿತರು ರಾಜ್ಯದ ಸಿಎಂ ಆಗಬೇಕು ಎಂಬುದು ನಮ್ಮ ಆಸೆ, ಸಮುದಾಯದ ಆಸೆ ಆಗಿರಬಹುದು. ಅವೆಲ್ಲಕ್ಕಿಂತ ಇಲ್ಲಿ ಪಕ್ಷ ಬಹಳ ಮುಖ್ಯ ಅದು ಬಹಳ ದೊಡ್ಡದು. ಕಾಲ ಕೂಡಿ ಬಂದಾಗ ಅವಕಾಶ ಸಿಗುತ್ತೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬಾಗಲಕೋಟೆ (ನ.5): ದಲಿತರು ರಾಜ್ಯದ ಸಿಎಂ ಆಗಬೇಕು ಎಂಬುದು ನಮ್ಮ ಆಸೆ, ಸಮುದಾಯದ ಆಸೆ ಆಗಿರಬಹುದು. ಅವೆಲ್ಲಕ್ಕಿಂತ ಇಲ್ಲಿ ಪಕ್ಷ ಬಹಳ ಮುಖ್ಯ ಅದು ಬಹಳ ದೊಡ್ಡದು. ಕಾಲ ಕೂಡಿ ಬಂದಾಗ ಅವಕಾಶ ಸಿಗುತ್ತೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ವಾಲ್ಮೀಕಿ ಜಾಗೃತಿ ಸಮಾವೇಶದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ದಲಿತರು ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿರುವ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇಲ್ಲಿ ನಮಗೆ ಆಸೆ ಇದೆ, ಸಮುದಾಯದ ಆಸೆಯೂ ಆದರೆ ಪಕ್ಷದ ತೀರ್ಮಾನವೇ ಅಂತಿಮ. ನಮ್ಮ ಹೈಕಮಾಂಡ್ ಏನು ನಿರ್ಧರಿಸುತ್ತದೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
undefined
ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ದಲಿತ ಸಿಎಂ ಕೂಗು ಎಬ್ಬಿಸಿದ ವಾಲ್ಮೀಕಿ ಗುರುಪೀಠ ಪ್ರಸನ್ನಾನಂದ ಸ್ವಾಮೀಜಿ!
ಪಕ್ಷದಲ್ಲಿನ ಭಿನ್ನಮತ, ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ. ಅಸಮಾಧಾನ ಆಗುವಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಸಮಸ್ಯೆ ಬಂದರೂ ಮಾತುಕತೆ ಮೂಲಕ ಪರಿಹಾರ ಮಾಡಿಕೊಡಿಕೊಳ್ತೇವೆ. ಅಂತಹ ಯಾವುದೇ ಘಟನೆ ಆಗಿಲ್ಲ. ಇಲ್ಲಿ ಹೈಕಮಾಂಡ್ ಮಾತೇ ಅಂತಿಮ. ಒಂದು ವೇಳೆ ಅಂತಹ ಸಮಸ್ಯೆ ಎದುರಾದಲ್ಲಿ ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಪಾರ್ಟಿಯಲ್ಲಿ ಮುಂಚೆನೂ ಸರಿಯಿದೆ, ಈಗಲೂ ಸರಿಯಿದೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಪಕ್ಷದಲ್ಲಿ ಸಿಎಂ ಬದಲಾವಣೆ ಆಗುತ್ತೆ ಎಂಬ ಮಾತುಗಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನೇ ಇರ್ತೀನಿ ಅಂದಿದ್ದಾರೆ, ಕಾದು ನೋಡಬೇಕು. ಸಂದರ್ಭ ಉದ್ಭವ ಆದಾಗ ನೋಡೋಣ ಎಂದರು.
ಸತೀಶ್ ಜಾರಕಿಹೊಳಿಯನ್ನು ಮಹಾರಾಷ್ಟ್ರದ ಅಜೀತ್ ಪವಾರ್ ಹೊಲಿಸಿದ ಈಶ್ವರಪ್ಪ ಹೇಳಿಕೆ ವಿಚಾರ, ಆ ರೀತಿಯಲ್ಲಿ ಇಲ್ಲ, ನಮ್ಮ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಇದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವಿಸಲ್ಲ ಎಂದರು.