ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟ; ಇಬ್ಬರ ಸ್ಥಿತಿ ಗಂಭೀರ!

By Ravi Janekal  |  First Published Dec 21, 2023, 5:52 PM IST

ಮನೆಯಲ್ಲಿ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ. ಸಂಜಯ್ 40, ಲೇಖನಾ 5 ವರ್ಷದ ಮಗುವಿಗೂ ಗಂಭೀರ ಗಾಯಗೊಂಡಿದ್ದಾರೆ.


ನೆಲಮಂಗಲ (ಡಿ.21): ಮನೆಯಲ್ಲಿ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ. ಸಂಜಯ್ 40, ಲೇಖನಾ 5 ವರ್ಷದ ಮಗುವಿಗೂ ಗಂಭೀರ ಗಾಯಗೊಂಡಿದ್ದಾರೆ.

ವಾಜರಹಳ್ಳಿ ನಿವಾಸಿ ವಿಜಯಮ್ಮ ಎಂಬುವವರ ಮನೆಯಲ್ಲಿ ನಡೆದಿರುವ ಘಟನೆ. ಎಂದಿನಂತೆ ಅಡುಗೆ ಮನೆಗೆ ತೆರಳಿ ಗ್ಯಾಸ್ ಆನ್ ಮಾಡಿ ಬೆಂಕಿ ಹೊತ್ತಿಸಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡು ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಸಂಜಯ್ ಎಂಬವವರಿಗೆ ತೀವ್ರ ಸ್ವರೂಪದ ಸುಟ್ಟುಗಾಯಗಳಾಗಿವೆ. ಇನ್ನು ಲೇಖನ ಎಂಬ ಮಗು ಸಹ ಗಂಭೀರವಾಗಿ ಗಾಯಗೊಂಡಿದೆ. ಗಾಯಾಳಿಬ್ಬರನ್ನು ಸರ್ಕಾರ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಸ್ಥಿತಿ ಗಂಭೀರವಾಗಿರುವುದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

Tap to resize

Latest Videos

undefined

ಇನ್ನು ವಿಜಯಮ್ಮ ಮನೆಯಲ್ಲಿ ಸಿಲಿಂಡರ್ ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಸ್ಫೋಟದ ಸದ್ದಿಗೆ ಮನೆಯಿಂದ ಹೊರಬಂದ ಜನರು. ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ತಡರಾತ್ರಿ ಸಿಲಿಂಡರ್ ಸ್ಪೋಟ; 9 ತಿಂಗಳ ಮಗು ಸೇರಿ ಒಂದೇ ಕುಟುಂಬದ 7 ಜನರು ಗಂಭೀರ ಗಾಯ!

click me!