ತ್ರಿಕಾಲ ಜ್ಞಾನಿ ಸ್ವಾಮಿಗಳೇ ಹೀಗೆ ಮಾಡಿದರೆ ಹೇಗೆ? ನ್ಯಾಯಾಂಗ ನಿಂದನೆ ಮಾಡಿದ ಶ್ರೀಗಳ ವಿರುದ್ಧ ಹೈಕೋರ್ಟ್ ಅಸಮಾಧಾನ 

By Kannadaprabha News  |  First Published Dec 21, 2023, 5:22 PM IST

ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಹಗುರುವಾಗಿ ಮಾತನಾಡಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ರಾಮಲಿಂಗೇಶ್ವರಮಠದ ಪೀಠಾಧಿಪತಿ ಶ್ರೀ ನೀಲಕಂಠ ಸಾರಂಗ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಹೈಕೋರ್ಟ್, ನಿಮ್ಮಂಥ ತ್ರಿಕಾಲಜ್ಞಾನ ಸ್ವಾಮೀಜಿಗಳು ಹೀಗೆ ಮಾಡಿದರೆ ನ್ಯಾಯಾಲಯ ಎಲ್ಲಿಗೆ ಹೋಗಬೇಕು ಎಂದು ಕಟುವಾಗಿ ಪ್ರಶ್ನಿಸಿದೆ.


ಬೆಂಗಳೂರು (ಡಿ.21): ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಹಗುರುವಾಗಿ ಮಾತನಾಡಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ರಾಮಲಿಂಗೇಶ್ವರಮಠದ ಪೀಠಾಧಿಪತಿ ಶ್ರೀ ನೀಲಕಂಠ ಸಾರಂಗ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಹೈಕೋರ್ಟ್, ನಿಮ್ಮಂಥ ತ್ರಿಕಾಲಜ್ಞಾನ ಸ್ವಾಮೀಜಿಗಳು ಹೀಗೆ ಮಾಡಿದರೆ ನ್ಯಾಯಾಲಯ ಎಲ್ಲಿಗೆ ಹೋಗಬೇಕು ಎಂದು ಕಟುವಾಗಿ ಪ್ರಶ್ನಿಸಿದೆ.

ಸ್ವಾಮೀಜಿಗಳ ವಿರುದ್ಧ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ|ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಅತೃಪ್ತಿ ವ್ಯಕ್ತಪಡಿಸಿತು. ನ್ಯಾಯಾಲಯದ ಬಗ್ಗೆ ಹಗುರವಾಗಿ ಸಾಮಾನ್ಯ ಮನುಷ ಮನುಷ್ಯ ಮಾತನಾಡಿದ್ದರೆ ಅದನ್ನು ನಾವು ಅರ್ಥ ಮಾಡಿ ಕೊಳ್ಳುತ್ತಿದ್ದೆವು. ನೀವು ತ್ರಿಕಾಲ ಜ್ಞಾನಿಗಳು ಹಿಂದೂ ಧರ್ಮ

Tap to resize

Latest Videos

 

‘ಪೇ ಚಲುವ’ ಭಿತ್ತಿಪತ್ರ ಕೇಸಿನ ವಿಚಾರಣೆಗೆ ಹೈಕೋರ್ಟ್‌ ತಡೆ

ಹಾಗೂ ಇತ್ಯಾದಿ ನಂಬಿಕೆಗಳನ್ನು ಪಾಲಿಸುವಲ್ಲಿ ಸ್ವಾಮೀಜಿ ಬಹಳ ಬ್ಯುಸಿಯಾಗಿ ಇರುತ್ತಾರೆ. ಹಿಂದೂ ಧರ್ಮ, ಶ್ಲೋಕ ಮತ್ತು ಮಂತ್ರಗಳಲ್ಲಿ ನ್ಯಾಯಾಧೀಶ ಪ್ರತ್ಯಕ್ಷ ದೇವತಾಃ ಹಾಗೂ ನ್ಯಾಯಸ್ಥಾನಕ್ಕೆ ಗೌರವ ಕೊಡಬೇಕು ಎಂದು ಹೇಳುತ್ತದೆ. ಹಾಗಾದರೆ ನ್ಯಾಯಾಧೀಶರು ಹಿಂದೂ ಧರ್ಮದ ಭಾಗವಲ್ಲವೇ, ಸ್ವಾಮೀಜಿ ಏಕೆ ಗೌರವ ಕೊಡಲಿಲ್ಲ ಎಂದು ನ್ಯಾಯಪೀಠ ತೀಕ್ಷವಾಗಿ ಕೇಳಿತು.

 ಸ್ವಾಮೀಜಿ ಏನು ಹೇಳುತ್ತಾರೋ, ಅವರ ಭಕ್ತರು ಅದನ್ನೇ ಮಾಡುತ್ತಾರೆ. ನ್ಯಾಯಾಧೀ ಶರು ನ್ಯಾಯಾಂಗದ ಭಾಗ. ಗೌರವವನ್ನು ನ್ಯಾಯಾಲಯಕ್ಕೆ ನೀಡಲಾಗುತ್ತದೆಯೇ ವಿನಾ ವ್ಯಕ್ತಿಗಲ್ಲ. ನ್ಯಾಯಾಂಗದ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ಹಾಗಾಗಿ, ನ್ಯಾಯಾಲಯವನ್ನು ಗೌರವಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು.

ಬೆಳಗಾವಿ ಮಹಿಳೆಗೆ ಹಲ್ಲೆ ಪ್ರಕರಣ: ಮೂಕಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಗೆ 'ಪುಂಡ ದಂಡ' ಸಂಗ್ರಹಿಸಿ; ಸರ್ಕಾರಕ್ಕೆ ಹೈಕೋರ್ಟ್ ಸಲಹೆ

ಅಂತಿಮವಾಗಿ ಸಾಮೀಜಿ ಕಮೆ ಕೋರಿದ ಹಿನ್ನೆಲೆ ಅವರು ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಟ್ಟ ಹೈಕೋರ್ಟ್. ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.

click me!