ಶೀಘ್ರದಲ್ಲೇ ಕಬ್ಬನ್‌ ಪ್ರತಿಮೆ ಸ್ಥಳಾಂತರ

By Kannadaprabha NewsFirst Published Oct 30, 2019, 7:58 AM IST
Highlights

ಹೈಕೋರ್ಟ್‌ ಆವರಣದಲ್ಲಿರುವ ಕಬ್ಬನ್‌ ಪಾರ್ಕ್ ನಿಮಾತೃ ಮಾರ್ಕ್ ಕಬ್ಬನ್‌ ಅವರ ಪ್ರತಿಮೆ ಶೀಘ್ರದಲ್ಲಿ ಕಬ್ಬನ್‌ ಉದ್ಯಾನದ ಮಧ್ಯಭಾಗಕ್ಕೆ ಸ್ಥಳಾಂತರಗೊಳ್ಳಲಿದೆ. ಮಾರ್ಕ್ ಕಬ್ಬನ್‌ 1866ರಲ್ಲಿ ಎಂ.ಜಿ.ರಸ್ತೆಯಲ್ಲಿರುವ ಮಾಣಿಕ್‌ ಷಾ ಪೆರೆಡ್‌ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಬಳಿಕ ಹೈಕೋರ್ಟ್‌ ಮುಂಭಾಗದಲ್ಲಿ ನಿರ್ಮಿಸಲಾಗಿತ್ತು. ಇದೀಗ ಕಬ್ಬನ್‌ ಉದ್ಯಾನದಲ್ಲಿರುವ ಬ್ಯಾಂಡ್‌ ಸ್ಟ್ಯಾಡ್‌ ಮುಂಭಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಬೆಂಗಳೂರು(ಅ.30): ಹೈಕೋರ್ಟ್‌ ಆವರಣದಲ್ಲಿರುವ ಕಬ್ಬನ್‌ ಪಾರ್ಕ್ ನಿಮಾತೃ ಮಾರ್ಕ್ ಕಬ್ಬನ್‌ ಅವರ ಪ್ರತಿಮೆ ಶೀಘ್ರದಲ್ಲಿ ಕಬ್ಬನ್‌ ಉದ್ಯಾನದ ಮಧ್ಯಭಾಗಕ್ಕೆ ಸ್ಥಳಾಂತರಗೊಳ್ಳಲಿದೆ.

20 ದಿನಗಳ ಹಿಂದೆ ಪ್ರತಿಮೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶಿಸಿದೆ. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಪ್ರಾರಂಭಿಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಸ್ಥಳಾಂತರವಾಗಲಿದೆ.

ಕರಾವಳಿ ಸೇರಿ ದಕ್ಷಿಣ ಒಳನಾಡು, ಮಲೆನಾಡಿನಲ್ಲಿ 2 ದಿನ ವ್ಯಾಪಕ ಮಳೆ ಸಾಧ್ಯತೆ

ಪ್ರತಿವರ್ಷ ಮಾರ್ಕ್ ಕಬ್ಬನ್‌ ಜನ್ಮದಿನಾಚರಣೆ ಸಂದರ್ಭದಲ್ಲಿ ಆಯೋಜಿಸುವ ಕಾರ್ಯಕ್ರಮದಿಂದ ಹೈಕೋರ್ಟ್‌ ಕಲಾಪಕ್ಕೆ ತೊಂದರೆ ಆಗಬಹುದು ಹಾಗೂ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಸುಲಭವಾಗಿ ಹೈಕೋರ್ಟ್‌ ಆವರಣಕ್ಕೆ ಪ್ರವೇಶಿಸಿ ಪ್ರತಿಮೆ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ಸ್ಥಳಾಂತರಕ್ಕೆ ಮುಂದಾಗಿರುವುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರು ರಾಜ್ಯದ ಬ್ರಿಟೀಷ್‌ ಕಮಿಷನರ್‌ ಆಗಿದ್ದ(1834) ಮಾರ್ಕ್ ಕಬ್ಬನ್‌ ಅವರು ಬೆಂಗಳೂರು ನಗರದಲ್ಲಿ ಕಬ್ಬನ್‌ ಉದ್ಯಾನವನ್ನು ನಿರ್ಮಿಸಿದ್ದರು. ಪರಿಣಾಮ ಈ ಉದ್ಯಾನಕ್ಕೆ ಕಬ್ಬನ್‌ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು(ಇದೀಗ ಜಯಚಾಮರಾಜೇಂದ್ರ ಉದ್ಯಾನವನ).

ವಿಡಿಯೋ ವೈರಲ್ ಬಿಸಿಯ ನಡುವೆ ಸಿದ್ದರಾಮಯ್ಯ-ಹೆಬ್ಬಾಳ್ಕರ್ ಗಂಭೀರ ಚರ್ಚೆ...

ಮಾರ್ಕ್ ಕಬ್ಬನ್‌ 1866ರಲ್ಲಿ ಎಂ.ಜಿ.ರಸ್ತೆಯಲ್ಲಿರುವ ಮಾಣಿಕ್‌ ಷಾ ಪೆರೆಡ್‌ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಬಳಿಕ ಹೈಕೋರ್ಟ್‌ ಮುಂಭಾಗದಲ್ಲಿ ನಿರ್ಮಿಸಲಾಗಿತ್ತು. ಇದೀಗ ಕಬ್ಬನ್‌ ಉದ್ಯಾನದಲ್ಲಿರುವ ಬ್ಯಾಂಡ್‌ ಸ್ಟ್ಯಾಡ್‌ ಮುಂಭಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!