ಕಾಣದ ಕೈ ಸೂಚನೆಯಂತೆ ನಡೆಯುವ ಪೊಲೀಸರು; ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿರಲು ಸಾಧ್ಯವೇ?: ಸಿಟಿ ರವಿ ಪ್ರಶ್ನೆ

By Ravi Janekal  |  First Published Dec 26, 2024, 3:36 PM IST

ಪೊಲೀಸ್ ಇಲಾಖೆ ನನ್ನ ಮೇಲೆ ದೌರ್ಜನ್ಯ ನಡೆಸಲು ಮಂತ್ರಿಗಳ ಷಡ್ಯಂತ್ರ ಎಂದು ಎಂಎಲ್ಸಿ ಸಿಟಿ ರವಿ ಆರೋಪಿಸಿದ್ದಾರೆ. ಸರ್ಕಾರದ ಕಪಿಮುಷ್ಟಿಯಲ್ಲಿರುವ ಸಿಐಡಿ ತನಿಖೆ ಹೇಗೆ ನಿಷ್ಪಕ್ಷಪಾತವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.


ಚಿಕ್ಕಮಗಳೂರು (ಡಿ.26): ನನ್ನ ಬಂಧಿಸಿದ ಬಳಿಕ ಪೊಲೀಸ್ ಇಲಾಖೆ ಯಾರ ನಿರ್ದೇಶನದ ಮೇಲೆ ಹೇಗೆಲ್ಲ ನಡೆದುಕೊಂಡಿತು ಎಂದು ನೋಡಿದ್ದೀರಿ. ನನ್ನ ಮೇಲೆ ಕೇಸ್ ಹಾಕಿ ದೌರ್ಜನ್ಯ ನಡೆಸಲು ಮಂತ್ರಿಗಳೇ ಷಡ್ಯಂತ್ರ ನಡೆಸಿದರು. ಹೀಗಿರುವಾಗ ಇದೇ ಸರ್ಕಾರದ ಕಪಿಮುಷ್ಟಿಯಲ್ಲಿರುವ ಸಿಐಡಿ ತನಿಖೆ ಹೇಗೆ ನಿಷ್ಪಕ್ಷಪಾತವಾಗಿ ಇರಲು ಸಾಧ್ಯ? ಎಂದು ಎಂಎಲ್ಸಿ ಸಿಟಿ ರವಿ ಪ್ರಶ್ನಿಸಿದರು.

ಚಿಕ್ಕಮಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾಸಗಿಯಾಗಿ ನಾನೇಕೆ ಎಫ್‌ಎಸ್‌ಎಲ್ ತನಿಖೆ ಮಾಡಿಸಲಿ? ನನ್ನ ಮೇಲೆ ಆರೋಪ ಮಾಡಿರುವುದು ಮಂತ್ರಿ ಎಫ್‌ಎಸ್‌ಎಲ್ ವರದಿ ಬರುವ ಮುಂಚೆಯೇ ಪೊಲೀಸರು ನನ್ನನ್ನು ಬಂಧಿಸಿದ್ರೋ ಇಲ್ವೋ? ನನ್ನನ್ನು ಅರೆಸ್ಟ್ ಮಾಡಿಸಲು ಕಾಣದ ಕೈ ಕೆಲಸ ಮಾಡಿದ್ದವಲ್ಲ? ಅದೇ ಕಾಣದ ಕೈ ಎಫ್‌ಎಸ್‌ಎಲ್ ಹಾಗೂ ಸಿಐಡಿ ತನಿಖೆ ಮೇಲೂ ಕೆಲಸ ಮಾಡಬಹುದು. ಖಾಸಗಿಯಾಗಿ ಕಾಲ್ ಲಿಸ್ಟ್ ತೆಗೆಸಲು ಬರುವುದಿಲ್ಲ, ತನಿಖೆ ನಡೆಸಬೇಕು. ಅದಕ್ಕೆ ನಾನು ಹೇಳಿದ್ದು ನ್ಯಾಯಧೀಶರ ನೇತೃತ್ವದಲ್ಲೇ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಸಿದ್ದರಾಮಯ್ಯ ಪರ ಬ್ಯಾಟಿಂಗ್; ಪ್ರತಾಪ ಸಿಂಹ ಎಲ್ಲಿಯಾದ್ರೂ ಸಿಕ್ಕರೆ ಕಾಫಿ ಕೊಡಿಸುತ್ತೇನೆ: ಎಂ ಲಕ್ಷ್ಮಣ್

ಸತ್ಯಕ್ಕೂ-ಪ್ರಮಾಣಿಕತೆಗೂ ಕಾಂಗ್ರೆಸ್ಸಿಗೂ ಸಂಬಂಧ ಇಲ್ಲ:

 ಸತ್ಯಕ್ಕೂ-ಪ್ರಮಾಣಿಕತೆಗೂ ಕಾಂಗ್ರೆಸ್ಸಿಗೂ ಸಂಬಂಧ ಇಲ್ಲ. ಅಮಿತ್ ಶಾ ಹೇಳಿದ್ದು ಕಾಂಗ್ರೆಸ್ ಅಂಬೇಡ್ಕರ್‌ಗೆ ಹೇಗೆ ಮೋಸ, ಅನ್ಯಾಯ ಮಾಡಿದ್ರು ಅನ್ನೋದರ ಬಗ್ಗೆ, ಇಂದು ಸಂವಿಧಾನ, ಅಂಬೇಡ್ಕರ್ ಜಪ ಮಾಡುತ್ತಿರುವ ಕಾಂಗ್ರೆಸ್ ಅಂದು ಚುನಾವಣೆಯಲ್ಲಿ ಅಂಬೇಡ್ಕರರನ್ನ ಹೇಗೆ ಮೋಸದಿಂದ ಸೋಲಿಸಿದರು ಅನ್ನುವುದರ ಬಗ್ಗೆ ಆದರೆ ಕಾಂಗ್ರೆಸ್ ತಮ್ಮ ಬಂಡಾವಳ ಬಯಲು ಮಾಡಿದ ಅಮಿತ್ ಶಾ ಅವರ ಹೇಳಿಕೆಯನ್ನೇ ತಿರುಚಿ ಅಂಬೇಡ್ಕರ್‌ಗೆ ಅಮಿತ್ ಶಾ ಅವಮಾನ ಮಾಡಿದ್ದಾರೆ ಎಂದರು.

 ನಿಜವಾಗಲೂ ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ತೀರಿಕೊಂಡಾಗ 6-3 ಅಡಿ ಜಾಗ ಕೊಡಲೇ ಇದ್ದದ್ದು ಕಾಂಗ್ರೆಸ್, ಅಂಬೇಡ್ಕರ್ ಅವರ ಮೃತದೇಹ ಸಾಗಿಸಿದ ವಿಮಾಣದ ಬಾಡಿಗೆ ಕಟ್ಟಿಸಿಕೊಂಡಿದ್ದ ಇದೇ ಕಾಂಗ್ರೆಸ್,ಭಾರತ ರತ್ನ ಕೊಡದೆ ಅಪಮಾನ ಮಾಡಿದ್ದು ಕೂಡ ಇದೇ ಕಾಂಗ್ರೆಸ್ ಆದರೆ ಸತ್ಯದ ತಲೆಗೆ ಹೊಡೆದಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮುಡಾ ಪ್ರಕರಣ: ವಕೀಲರಿಗೆ ಲಕ್ಷ ಲಕ್ಷ ಫೀಸ್ ಕೊಡಲು ಸ್ನೇಹಮಯಿ ಕೃಷ್ಣಗೆ ಹಣ ಎಲ್ಲಿಂದ ಬರುತ್ತೆ?: ಎಂ ಲಕ್ಷ್ಮಣ್ ಪ್ರಶ್ನೆ

ಕಾಂಗ್ರೆಸ್‌ 100ರ ಸಂಭ್ರಮದ ಅಧಿವೇಶನ ಮಾಡಿಕೊಳ್ಳುತ್ತಿದ್ದಾರೆ. ಆತ್ಮಾವಲೋಕನ ಮಾಡಿಕೊಳ್ಳಲಿ ಅವರು ಒಗ್ಗಟ್ಟಿನಲ್ಲಿ ಬಲ ಅಂದ್ರೆ ಇವರು ಒಡೆದು ಆಳುವ ನೀತಿಯಲ್ಲಿ ಅಧಿಕಾರ ಸಿಗುತ್ತೆ ಅನ್ನೋರು. ಇವ್ರು ಅಧಿಕಾರಕ್ಕಾಗಿ ಬ್ರಿಟಿಷರ ಕುಟೀಲ ನೀತಿ ಇಟ್ಟುಕೊಂಡಿರೋರು. ಇದೇ ಕಾರಣಕ್ಕೆ ಅಂದು ಗಾಂಧೀಜಿ ಹೇಳಿದ್ದರು. ಸ್ವಾತಂತ್ರ ನಂತರ ಕಾಂಗ್ರೆಸ್ ವಿಸರ್ಜಿಸಿ ಇವರು ಜನಕ್ಕೆ ಮೋಸ ಮಾಡುತ್ತಾರೆ ಎಂದು ಮಹಾತ್ಮ ಗಾಂಧಿಯೇ ಹೇಳಿದ್ದರು. ಮಹಾತ್ಮ ಗಾಂಧಿ ಹೇಳಿದಂತೆಯೇ ಇವರು (ಕಾಂಗ್ರೆಸ್‌) ವೋಟ್‌ಬ್ಯಾಂಕ್‌ಗಾಗಿ ಕಾಶ್ಮೀರವನ್ನೇ ತುಂಡರಿಸುವ ಕೆಲಸ ಮಾಡಿದ್ದಾರೆ ಎಂದರೆ ಇವರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರು.

click me!