ಪೊಲೀಸರೊಂದಿಗೆ ಸೈಬರ್ ಸ್ಕ್ಯಾಮ್ ಜಾಗೃತಿಗೆ ಕೈ ಜೋಡಿಸಿದ 'ನಾನು ನಂದಿನಿ' ಹಾಡಿನ ಖ್ಯಾತಿಯ ವಿಕ್ಕಿ, ಅಮಿತ್ ಚಿಟ್ಟೆ!

Published : Dec 26, 2024, 03:34 PM ISTUpdated : Dec 26, 2024, 09:26 PM IST
ಪೊಲೀಸರೊಂದಿಗೆ ಸೈಬರ್ ಸ್ಕ್ಯಾಮ್ ಜಾಗೃತಿಗೆ ಕೈ ಜೋಡಿಸಿದ 'ನಾನು ನಂದಿನಿ' ಹಾಡಿನ ಖ್ಯಾತಿಯ  ವಿಕ್ಕಿ,  ಅಮಿತ್ ಚಿಟ್ಟೆ!

ಸಾರಾಂಶ

'ನಂದಿನಿ' ಹಾಡಿನ ವಿಕ್ಕಿಪೀಡಿಯಾ ಮತ್ತು ಅಮಿತ್ ಚಿಟ್ಟಿ, ಸೈಬರ್‌ ಅಪರಾಧ ಜಾಗೃತಿ ವಿಡಿಯೋದಲ್ಲಿ ನಟಿಸಿದ್ದಾರೆ. ಬ್ಯಾಂಕ್‌, ಉದ್ಯೋಗ, ಕೊರಿಯರ್‌ ಹೆಸರಿನಲ್ಲಿ ವಂಚನೆ ಮಾಡುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸೈಬರ್‌ ಅಪರಾಧಕ್ಕೊಳಗಾದರೆ 1930ಕ್ಕೆ ಕರೆ ಮಾಡಿ ದೂರು ನೀಡಲು ಸೂಚಿಸಿದ್ದಾರೆ. ಬೈಯಪ್ಪನಹಳ್ಳಿ ಮತ್ತು ಸೆನ್‌ ಠಾಣೆ ಪೊಲೀಸರು ಈ ಜಾಗೃತಿಯಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರು (ಡಿ.26): ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಗಳನ್ನು ಕುರಿತು ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ವಿಕ್ಕಿಪೀಡಿಯಾ ಹಾಗೂ ಅಮಿತ್ ಚಿಟ್ಟಿ ರಚಿಸಿದ್ದ 'ನಾನು ನಂದಿನಿ ಬೆಂಗಳೂರಿಗೆ ಬಂದೀನಿ., ಪಿಜಿಲಿ ಇರ್ತೀನಿ..' ಹಾಡು ದೇಶದಾದ್ಯಂತ ಫೇಮಸ್ ಆಗಿತ್ತು. ಆದರೆ, ಇದೀಗ ಅದೇ ವಿಕ್ಕಿ ಅಲಿಯಾಸ್ ವಿಕ್ಕಿಪೀಡಿಯಾ ಹಾಗೂ ಆತನ ಸ್ನೇಹಿತ ಅಮಿತ್ ಚಿಟ್ಟೆ ಪೊಲೀಸರೊಂದಿಗೆ ಸೈಬರ್ ಸ್ಕ್ಯಾಮ್ ಜಾಗೃತಿಗಾಗಿ ಕೈ ಜೋಡಿಸಿದ್ದಾರೆ.

ಹೌದು, ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಸೋಶಿಯಲ್ ಮೀಡಿಯಾ ಬಳಸುವ ಜನರು 'ನಾನು ನಂದಿನಿ ಬೆಂಗಳೂರಿಗೆ ಬಂದೀನಿ., ಪಿಜಿಲಿ ಇರ್ತೀನಿ..' ಹಾಡನ್ನು ಒಮ್ಮೆಯಾದರೂ ಕೇಳಿರ್ತೀರಿ ಅಲ್ವಾ..? ಈ ಹಾಡನ್ನು ರಚನೆ ಮಾಡಿದ್ದು ಬೆಂಗಳೂರಿನ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ವಿಕ್ಕಿಪೀಡಿಯಾ ಹಾಗೂ ಅಮಿತ್ ಚಿಟ್ಟಿ ಅವರ ಸಂಗಡಿಗರು. ಈ ಹಾಡು ದೇಶದಾದ್ಯಂತ ಖ್ಯಾತಿ ಪಡೆದು ವಿಕ್ಕಿ ಅವರಿಗೆ ದೊಡ್ಡ ಹೆಸರನ್ನೂ ತಂದುಕೊಟ್ಟಿತು. ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ, ಇದೀಗ ಅದೇ ವಿಕ್ಕಿ ಹಾಗೂ ಅಮಿತ್ ಚಿಟ್ಟೆ ಇಬ್ಬರೂ ಸ್ಕ್ಯಾಮ್ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

ಇದೇನಪ್ಪಾ ಸೋಶಿಯಲ್ ಮೀಡಿಯಾದಿಂದ ಒಳ್ಳೆಯ ಹಣ ಬರುವುದಕ್ಕೆ ಆದಾಯ ಮಾಡಿಕೊಂಡಿರುವ ಇವರು ಇದ್ಯಾಕೆ ಸ್ಕ್ಯಾಮ್ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಚಿಂತಿಸಬೇಡಿ. ಇವರು ಸ್ಕ್ಯಾಮ್ ಮಾಡುವವರು ಹೇಗೆ ನಿಮ್ಮನ್ನು ಯಾಮಾರಿಸುತ್ತಾರೆ? ಯಾವಾವ ಉದ್ದೇಶದಿಂದ ನಿಮಗೆ ಕರೆ ಮಾಡಿ ನಿಮ್ಮ ಹಣ ಲಪಟಾಯಿಸುತ್ತಾರೆ? ಎಂಬುದನ್ನು ತೋರಿಸಿ ಜಾಗೃತಿ ಮೂಡಿಸಿದ್ದಾರೆ. ಇದನ್ನು ಸ್ವತಃ ಪೊಲೀಸರ ನೆರವಿನಿಂದಲೇ ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದಲೇ ಸೈಬರ್ ಸ್ಕ್ಯಾಮ್ ತಡೆಗಟ್ಟುವುದಕ್ಕೆ ಜಾಗೃತಿ ಮೂಡಿಸಲು ಈ ಇಬ್ಬರನ್ನು ಬಳಕೆ ಮಾಡಿಕೊಂಡು ವಿಡಿಯೋ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಹೊಸ ನಿಯಮ, ಜಿಎಸ್‌ಟಿ, ಮೊಬೈಲ್ ಶುಲ್ಕ, ವೀಸಾ ಸೇರಿ ಹಲವು ಬದಲಾವಣೆ!

ಈ ಜಾಗೃತಿ ವಿಡಿಯೋದಲ್ಲಿ ಬ್ಯಾಂಕ್‌ನವರ ಹೆಸರಿನಲ್ಲಿ ಕರೆ ಮಾಡುವ ಸೈಬರ್ ಸ್ಕ್ಯಾಮ್ ಮಾಡುವವರು ನಿಮ್ಮ ಅಕೌಂಟ್ ಫ್ರೀಜ್ ಆಗಿದೆ, ಎಟಿಎಂ ಕಾರ್ಡ್ ಬ್ಲ್ಯಾಕ್ ಆಗಿದೆ ಹಾಗೂ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಬೇಕು ಎಂದು ಕರೆ ಮಾಡಿ ನಿಮ್ಮ ಮೊಬೈಲ್‌ಗೆ ಒಂದು ಒಪಿಟಿ ಕಳಿಸಿ ನಿಮ್ಮ ಖಾತೆಯಲ್ಲಿರುವ ಎಲ್ಲ ಹಣ ಲಪಟಾಯಿಸುತ್ತಾರೆ. ಮತ್ತೊಂದು ರೀತಿಯಲ್ಲಿ ಇದು ಪೊಲೀಸ್, ನ್ಯಾಯಾಧೀಶರು ಎಂದೆಲ್ಲಾ ಹೇಳಿ ಡಿಜಿಟಲ್ ಆರೆಸ್ಟ್ ಆಗಿದ್ದೀರಿ ಎಂದು ಹೇಳಿ ನಿಮ್ಮ ಬ್ಯಾಂಕ್ ಖಾತೆ ವಿವರ ಪಡೆದು ವಂಚಿಸುತ್ತಾರೆ.

 

ನಿಮಗೆ ಉದ್ಯೋಗ ಆಫರ್, ಬ್ಯಾಂಕ್ ಜಾಬ್, ಕೋರಿಯರ್ ಬಂದಿದೆ, ಗಿಫ್ಟ್ ಬಂದಿದೆ, ಆಪ್ ಡೌನ್‌ಲೋಡ್ ಮಾಡಿಕೊಳ್ಳಿ, ವರ್ಕ್‌ಫ್ರಂ ಹೋಮ್ ಇತ್ಯಾದಿಗಳನ್ನು ನಿಮಗೆ ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಇಂಥವರಿಂದ ಹುಷಾರಾಗಿದೆ. ಒಂದು ವೇಳೆ ಸೈಬರ್ ಅಪರಾಧ ಕೃತ್ಯಕ್ಕೆ ಒಳಗಾದಲ್ಲಿ ಕೂಡಲೇ  ಸೈಬರ್ ಅಪರಾಧ ಸಹಾಯವಾಣಿ 1930 ಕರೆ ಮಾಡಿ ದೂರು ದಾಖಲಿಸಿ ಎಂದು ವಿಡಿಯೋ ಮೂಲಕ ಜಾಗೃತಿ ಮೂಡಿಸಿದ್ದಾರೆ. ಬೆಂಗಳೂರಿನ ಪೂರ್ವ ವಲಯದ ಬೈಯಪ್ಪನಹಳ್ಳಿ ಪೊಲೀಸ ಠಾಣೆ ಹಾಗೂ ಸೆನ್ ಪೊಲೀಸ್‌ ಠಾಣೆ ಪೊಲೀಸರು ಕೂಡ ಜಾಗೃತಿ ವಿಡಿಯೋದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಇದು ರೈಲ್ವೆ ಪ್ರಯಾಣಿಕರ ಗಮನಕ್ಕೆ, ಇನ್ಮುಂದೆ IRCTC ಬಂದ್ ಮಾಡಲಿದೆ ಈ ಸರ್ವಿಸ್, ನಿಮ್ಮ ಹಣಕ್ಕೆ ನೀವೇ ಜವಾಬ್ದಾರರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌