ವಿಧಾನಪರಿಷತ್‌ನಲ್ಲಿ ಸಿ.ಟಿ. ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ತೀವ್ರ ವಾಗ್ಯುದ್ಧ ನಡೆದಿದ್ದು, ಪರಸ್ಪರ ವೈಯಕ್ತಿಕ ನಿಂದನೆ ಮಾಡಿಕೊಂಡಿದ್ದಾರೆ. ಸಿ.ಟಿ. ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು 'ಪ್ರಾಸ್ಟಿಟ್ಯೂಟ್' ಎಂದು ಕರೆದರೆ, ಹೆಬ್ಬಾಳ್ಕರ್ ಅವರು ರವಿ ಅವರನ್ನು 'ಕೊಲೆಗಡುಕ' ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರು (ಡಿ.20): ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಜಾರಿಣಿ ಯುದ್ಧ ರಾಜ್ಯ ರಾಜಕೀಯದಲ್ಲಿ ತೀವ್ರವಾಗಿದೆ. ಅಷ್ಟಕ್ಕೂ ಗುರುವಾರ ವಿಧಾನಪರಿಷತ್‌ನಲ್ಲಿ ಆಗಿದ್ದೇನು? ಇಡೀ ಪ್ರಕರಣದ ವಿಚಾರಣೆ ನಡೆಸಿದ್ದ ಸಭಾಪತಿಗಳು ನೀಡಿದ ರೂಲಿಂಗ್ ಏನು ಅನ್ನೋದರ ವಿವರ ಇಲ್ಲಿದೆ. ಅಮಿತ್ ಶಾ ಹೇಳಿಕೆ ವಿರೋಧಿಸಿ ವಿಧಾನಪರಿಷತ್‌ನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗದ್ದಲ, ಗಲಾಟೆ ನಡೆಯುತ್ತಿತ್ತು. ಈ ನಡುವೆ ಪರಿಷತ್ ಸದಸ್ಯ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆಯೂ ವಾಗ್ಯುದ್ಧ ನಡೆಯುತ್ತಿತ್ತು. ಈ ಹಂತದಲ್ಲಿ ಸಚಿವೆಗೆ ಪ್ರಾಸ್ಟಿಟ್ಯೂಟ್ ಎಂದು ಸಿಟಿ ರವಿ ಕರೆದಿದ್ದಾರೆ ಅನ್ನೋ ಆರೋಪವನ್ನು ಮಾಡಲಾಗಿದೆ. ಸಿ.ಟಿ ರವಿ ವಿರುದ್ಧ ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ. ಅಂಬೇಡ್ಕರ್ ವಿಷಯದಲ್ಲಿ ಪ್ರತಿಭಟನೆ ವೇಳೆ ನಿಂದಿಸಿದ ಆರೋಪ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಕಣ್ಣೀರು ಹಾಕಿಕೊಂಡು ಪರಿಷತ್ನಿಂದ ಹೆಬ್ಬಾಳ್ಕರ್ ಹೊರನಡೆದಿದ್ದಾರೆ. ಸಿಟಿ ರವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಲೆಗಡುಕ ಎಂದಿದ್ದರು. ಕೊಲೆಗಡುಕ ಹೇಳಿಕೆಗೆ ಪ್ರಾಸ್ಟಿಟ್ಯೂಟ್ ಎಂದು ಸಿ.ಟಿ ರವಿ ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಸಭಾಪತಿ ಬಸವರಾಜ್ ಹೊರಟ್ಟಿಗೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ಕೂಡ ನೀಡಿದ್ದರು.
ಅಂದಾಜು ಹತ್ತು ಬಾರಿ ಸಿಟಿ ರವಿ ಪ್ರಾಸ್ಟಿಟ್ಯೂಟ್ ಎಂದಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ನಾನು ಆ ಪದವನ್ನೇ ಬಳಸಿಲ್ಲ. ನಾನು ಫ್ರಸ್ಟೇಟ್ (ಹತಾಶೆ) ಎಂದಿದ್ದರೆ. ಈ ಬಗ್ಗೆ ದಾಖಲೆ ಇದ್ದರೆ ತೆಗೆಯಿರಿ ಎಂದು ಸಿಟಿ ರವಿ ಸವಾಲ್ ಹಾಕಿದ್ದರು.
ವಿಧಾನಪರಿಷತ್‌ನಲ್ಲಿ ಆಗಿದ್ದೇನು: ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ವಿರೋಧಿಸಿ ಚರ್ಚೆಗೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಅಂಬೇಡ್ಕರ್ ಫೋಟೋ ಹಿಡಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡಿದ್ದರು. ಬಿಜೆಪಿ ಸದಸ್ಯರಿಂದಲೂ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸಲಾಗಿತ್ತು. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಬಿಜೆಪಿಗರು ಘೋಷಣೆ ಮಾಡುತ್ತಿದ್ದರು. ಸದನದಲ್ಲಿ ಕೋಲಾಹಲ ಹೆಚ್ಚಾದಾಗ ಸಭಾಪತಿ ಹೊರಟ್ಟಿ ಕಲಾಪವನ್ನು ಮುಂದೂಡಿದ್ದರು. ಮುಂದೂಡಿಕೆಯಾದರೂ ಪರಿಷತ್‌ನಲ್ಲಿ ಆರೋಪ-ಪ್ರತ್ಯಾರೋಪ ಮುಂದುವರಿದಿದ್ದವು.
undefined
ಈ ವೇಳೆ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿಟಿ ರವಿ ಕರೆದಿದ್ದಾರೆ. ನೀವು ಕುಡಿದ ಮತ್ತಲ್ಲಿ ಕಾರು ಓಡಿಸಿ ಆ್ಯಕ್ಸಿಡೆಂಟ್ ಮಾಡಿದ್ದೀರಾ.. ನಿಮ್ಮನ್ನು ಕೊಲೆಗಡುಕ ಎಂದು ಕರೆಯಬಹುದಾ ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಟಿ ರವಿ, ನಿಮ್ಮನ್ನ ಪ್ರಾಸ್ಟಿಟ್ಯೂಟ್ ಎಂದು ಕರೆಯಬಹುದಾ ಎಂದು ಕೇಳಿದ್ದಾರೆ ಎನ್ನಲಾಗಿದೆ.
ಸಿಟಿ ರವಿ ಮೇಲೆ ಬೇಲ್ ಸಿಗದಂಥ ಕೇಸ್, ರಾತ್ರಿಯಿಡೀ ಸುತ್ತಾಡಿಸಿ ಅಂಕಲಗಿ ಠಾಣೆಗೆ ಕರೆತಂದ ಪೊಲೀಸರು!
ಕಾಂಗ್ರೆಸ್ ಎಂಎಲ್‌ಸಿ ನಾಗರಾಜ್ ಯಾದವ್ ಮಾತನಾಡಿದ್ದು, 'ಸಿ.ಟಿ ರವಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಪ್ರಾಸಿಟ್ಯೂಟ್ ಎಂದ್ರು. ಪ್ರಾಸಿಟ್ಯೂಟ್ ಪದ ಒಪ್ಪಿಕೊಳ್ಳಲು ಸಾಧ್ಯನಾ..? ಸಿ.ಟಿ. ರವಿಗೆ ಹೆಂಡತಿ ಮಕ್ಕಳು ಇಲ್ವಾ..? ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಸಿ.ಟಿ ರವಿ ಈ ಪದ ಬಳಸಿದ್ದರು. ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್ ಎಂದೂ ಹೇಳಿದ್ದರು. ಇದಕ್ಕೆ ಕೆರಳಿದ ಲಕ್ಷ್ಮೀ ಹೆಬ್ಬಾಳ್ಕರ್ ಸಿಟಿ ರವಿಗೆ ಕೊಲೆಗಾರ ಎಂದರು. ಆಗ ಸಿ.ಟಿ ರವಿ ನೀವು ಪ್ರಾಸ್ಟಿಟ್ಯೂಟ್ ಎಂದು ಹೇಳಿದ್ದಾರೆ.
ಇವತ್ತಿನ ಘಟನೆ ಕರ್ನಾಟಕ ಜನತೆ ತಲೆ ತಗ್ಗಿಸುವ ಕೆಲಸ. ಬಿಜೆಪಿ ಪರಿಷತ್ ಸದಸ್ಯ ಸಿ.ಟಿ ರವಿ ಈ ರೀತಿ ಮಾಡಿದ್ದಾರೆ. ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಸಹಜ. ಹೆಬ್ಬಾಳ್ಕರ್ ವಿರುದ್ಧ ಅಸಾಂವಿಧಾನಿಕ ಪದ ಪ್ರಯೋಗ ತಪ್ಪು. ಮಹಿಳೆಯರ ಬಗ್ಗೆ ಬಿಜೆಪಿಗೆ ಎಷ್ಟು ಅಭಿಮಾನ ಎಂಬುದು ತೋರಿಸುತ್ತೆ ಸಿಟಿ ರವಿ ವಿರುದ್ಧ ಯಾವ ಕ್ರಮ ಆಗಬೇಕು ಸಭಾಪತಿ ನಿರ್ಧರಿಸುತ್ತಾರೆ ಎಂದು ಎಂಎಲ್‌ಸಿ ಬಿಕೆ ಹರಿಪ್ರಸಾದ್ ತಿಳಿಸಿದ್ದರು.