* ಪಾಸಿಟಿವಿಟಿ 1.78%ಗೆ ಏರಿಕೆ
* ಸೋಮವಾರ 111 ಮಂದಿಗೆ ಸೋಂಕು, ಸಾವು ಇಲ್ಲ
* ಏಪ್ರಿಲ್‌ನಲ್ಲಿ ಕೋವಿಡ್‌ಗೆ 5 ಬಲಿ: ಅತಿ ಕನಿಷ್ಠ
ಬೆಂಗಳೂರು(ಮೇ.03): ರಾಜ್ಯದಲ್ಲಿ(Karnataka) ಕೊರೋನಾ ಸೋಂಕಿನ ಪಾಸಿಟಿವಿಟಿ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಮವಾರ ಶೇ.1.78ರಷ್ಟು ಪಾಸಿಟಿವಿಟಿ ದರ(Positivity Rate) ವರದಿಯಾಗಿದ್ದು, 111 ಮಂದಿಗೆ ಸೋಂಕು ದೃಢಪಟ್ಟಿದೆ. ಯಾವುದೇ ಸಾವಿನ ವರದಿಯಾಗಿಲ್ಲ.
ನಿತ್ಯ ಸರಾಸರಿ 10 ಸಾವಿರ ಕೊರೋನಾ ಪರೀಕ್ಷೆ ನಡೆಸುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಆದರೆ, ಸೋಮವಾರದ ವೇಳೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೇವಲ 6,224 ಮಂದಿಗೆ ಮಾತ್ರ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಹೀಗಿದ್ದರೂ ಶೇ.1.78ರಷ್ಟುಪಾಸಿಟಿವಿಟಿ ದರದೊಂದಿಗೆ 111 ಮಂದಿಗೆ ಸೋಂಕು ದೃಢಪಟ್ಟಿದೆ.
undefined
'ಕೋವಿಡ್ ನಾಲ್ಕನೇ ಅಲೆ ಎದುರಿಸಲು ಉತ್ತರ ಕನ್ನಡ ಜಿಲ್ಲೆ ಸಿದ್ಧತೆ!
ಭಾನುವಾರ 10,566 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಶೇ.1.23 ರಷ್ಟುಪಾಸಿಟಿವಿಟಿ ದರದೊಂದಿಗೆ 104 ಮಂದಿಗೆ ಮಾತ್ರ ಸೋಂಕು ತಗುಲಿತ್ತು. ಸೋಮವಾರ 6,224 ಪರೀಕ್ಷೆಗೆ 111 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಪಾಸಿಟಿವಿಟಿ ದರ ಹೆಚ್ಚಾಗುವ ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,815 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 76 ಸೋಂಕಿತರು ಗುಣಮುಖರಾಗಿದ್ದು, ಗುಣಮುಖರ ಒಟ್ಟು ಸಂಖ್ಯೆ 39.05 ಲಕ್ಷ ದಾಟಿದೆ. ಸೋಮವಾರ ಯಾವುದೇ ಸಾವು ವರದಿಯಾಗಿಲ್ಲ. ಸಾವಿನ ಸಂಖ್ಯೆ 40,060 ರಷ್ಟೇ ಇದೆ. ಸೋಂಕು ಪ್ರಕರಣದ ಪೈಕಿ ಸೋಮವಾರದ 111 ಸೇರಿ ಈವರೆಗೆ 39.47 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಉಂಟಾದಂತಾಗಿದೆ.
ಬೆಂಗಳೂರು ನಗರದಲ್ಲಿ 103 ಮಂದಿ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ತಲಾ ಇಬ್ಬರು ಹಾಗೂ ಬೆಳಗಾವಿ, ಹಾವೇರಿ, ರಾಮನಗರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಂತೆ 111 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 23 ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪ್ರಕರಣ ವರದಿಯಾಗಿಲ್ಲ.
ಎರಡು ತಿಂಗಳ ಬಳಿಕ ಶೇ.1ರ ಗಡಿ ದಾಟಿದ ಸೋಂಕು ಪಾಸಿಟಿವಿಟಿ
ನವದೆಹಲಿ: ದೇಶದಲ್ಲಿ(India) ಹೊಸದಾಗಿ 3157 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 26 ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಮಧ್ಯೆ ಸೋಂಕಿನ ಪಾಸಿಟಿವಿಟಿ ದರ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಶೇ.1ರ ಗಡಿ ದಾಟಿರುವುದು ಕಳವಳಕ್ಕೆ ಕಾರಣವಾಗಿದೆ.
15 ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಬೂಸ್ಟರ್ ಡೋಸ್ ಕೇಳೋರೇ ಇಲ್ಲ!
ಏಪ್ರಿಲ್‌ನಲ್ಲಿ ಕೋವಿಡ್‌ಗೆ 5 ಬಲಿ: ಅತಿ ಕನಿಷ್ಠ
ಬೆಂಗಳೂರು: ದುರ್ಬಲವಾದ ಕೊರೋನಾ (Coronavirus), ಬಹುತೇಕರಿಗೆ ಲಸಿಕೆ (Vaccine) ನೀಡಿಕೆ, ಆಸ್ಪತ್ರೆಗಳಲ್ಲಿ (Hospitals) ಉತ್ತಮ ಸೌಲಭ್ಯ, ಆರೋಗ್ಯದ (Health) ಬಗ್ಗೆ ಜನರಲ್ಲಿ ಕಾಳಜಿ ಪರಿಣಾಮ ರಾಜ್ಯದಲ್ಲಿ (Karnataka) ಈಗ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ಅತ್ಯಂತ ಕನಿಷ್ಠ 5 ಜನರು ಮೃತರಾಗಿದ್ದಾರೆ. ಇದು 2020ರ ಮಾರ್ಚ್ ಬಳಿಕ ತಿಂಗಳೊಂದರಲ್ಲಿ ದಾಖಲಾದ ಕನಿಷ್ಠ ಸಂಖ್ಯೆಯ ಸಾವು (Death) ಆಗಿದೆ.
ಏಪ್ರಿಲ್ 4 ಮತ್ತು 6ರಂದು ಬೆಂಗಳೂರು ನಗರದಲ್ಲಿ ತಲಾ ಒಬ್ಬರು, ಏ.8ರಂದು ಗದಗದಲ್ಲಿ ಒಬ್ಬರು ಮತ್ತು ಏ.30ರಂದು ಬೆಳಗಾವಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಮೊದಲ ಬಾರಿಗೆ ಕಾಣಿಸಿಕೊಂಡ 2020ರ ಮಾರ್ಚ್‌ನಲ್ಲಿ ಮೂವರು ಮೃತರಾಗಿದ್ದರು. ನಂತರದ ಏಪ್ರಿಲ್‌ನಲ್ಲಿ 21 ಜನರು ಮೇ ತಿಂಗಳಲ್ಲಿ 22 ಸಾವು ಸಂಭವಿಸಿತ್ತು. ನಂತರದ ತಿಂಗಳಲ್ಲಿ ನೂರಕ್ಕಿಂತ ಹೆಚ್ಚು ಜನರು ಕೋರೊನಾಗೆ ಬಲಿಯಾಗುತ್ತಿದ್ದರು. ಸೋಂಕು ಪ್ರಕರಣ ಏರಿಕೆಯೊಂದಿಗೆ ಸಾವಿನ ಸಂಖ್ಯೆ ಹೆಚ್ಚಳ ಕಂಡು ಬಂದಿತ್ತು.