Alcohol Sale in Karnataka: ನೈಟ್‌ ಕರ್ಫ್ಯೂ ಇದ್ದರೂ ₹975 ಕೋಟಿ ಮದ್ಯ ಮಾರಾಟ!

By Kannadaprabha NewsFirst Published Jan 1, 2022, 5:11 AM IST
Highlights

*ಸರ್ಕಾರದ ಬೊಕ್ಕಸಕ್ಕೆ ₹574 ಕೋಟಿ ರು. ಆದಾಯ
*ಕೋವಿಡ್‌,ನೈಟ್‌ ಕರ್ಫ್ಯೂ ನಡುವೆಯೂ ದಾಖಲೆ
*ವರ್ಷದ ಕಡೆಯ 2 ದಿನ ಮದ್ಯ ಮಾರಾಟ ಎಷ್ಟೆಷ್ಟು?
 

ಬೆಂಗಳೂರು (ಜ.1): ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಹೆಚ್ಚಳ (Covid 19) ಮತ್ತು ನೈಟ್‌ ಕರ್ಫ್ಯೂ ನಡುವೆಯೇ ಮದ್ಯ ಮಾರಾಟ (Alcohol Sale) ಕಳೆದೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಶೇ.13ರಷ್ಟು ಹೆಚ್ಚಳವಾಗಿದ್ದು, ಕೇವಲ ಎಂಟು ದಿನಗಳಲ್ಲಿ ಬರೋಬ್ಬರಿ 974.58 ಕೋಟಿ ರು.ಗಳಷ್ಟುವಹಿವಾಟು ನಡೆದಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 573.75 ಕೋಟಿ ರು. ಆದಾಯ ಹರಿದು (Revenue) ಬಂದಿದೆ. ಕೋವಿಡ್‌ ಪೂರ್ವದಲ್ಲಿ (2019) ವರ್ಷದ ಕೊನೆಯ ಎಂಟು ದಿನಗಳಲ್ಲಿ 878.25 ಕೋಟಿ ರು.ಗಳಷ್ಟುವಹಿವಾಟು ನಡೆದಿತ್ತು. 

ಆನಂತರ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ 844.25 ಕೋಟಿ ರು.ಗಳಷ್ಟುವಹಿವಾಟು ನಡೆದಿದ್ದು ಶೇ.-3.83ರಷ್ಟುನಷ್ಟದ ವಹಿವಾಟು ದಾಖಲಾಗಿತ್ತು. ಈ ಬಾರಿ ನೈಟ್‌ ಕಫä್ರ್ಯ, ನಿಷೇಧಾಜ್ಞೆ ನಡುವೆಯೂ ಮದ್ಯದ ಮಾರಾಟದಲ್ಲಿ ಶೇ.13ರಷ್ಟುಹೆಚ್ಚಳವಾಗಿದೆ.

ದಿನದ ಅಂತ್ಯದೊಳಗೆ 165 ಕೋಟಿ ರು.ಗಳಿಗೂ ಅಧಿಕ ವಹಿವಾಟು!

ವರ್ಷದ ಕಡೆಯ ದಿನದಲ್ಲಿ 2019ರಂದು 163.61 ಕೋಟಿ ರು. ಮತ್ತು 2020ರಲ್ಲಿ 153.53 ಕೋಟಿ ರು.ಗಳಷ್ಟುವಹಿವಾಟು ನಡೆದಿತ್ತು. ರಾಜ್ಯದಲ್ಲಿ ಈ ಬಾರಿ (ಡಿ.31ರಂದು) 17.14 ಲಕ್ಷ ಕೇಸ್‌ ಐಎಂಎಲ್‌ (ಭಾರತೀಯ ಮದ್ಯ) ಮತ್ತು 1.55 ಲಕ್ಷ ಕೇಸ್‌ ಬಿಯರ್‌ (ರಾತ್ರಿ 7 ಗಂಟೆವರೆಗೆ) ಮಾರಾಟವಾಗಿದೆ. ದಿನದ ಅಂತ್ಯದೊಳಗೆ 165 ಕೋಟಿ ರು.ಗಳಿಗೂ ಅಧಿಕ ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಇದು ಕಳೆದ ಎರಡು ವರ್ಷಗಳಲ್ಲೇ ವರ್ಷದ ಕೊನೆಯ ದಿನದ ಅತ್ಯಧಿಕ ವಹಿವಾಟು ಆಗಲಿದೆ ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಮದ್ಯ ಮಾರಾಟ ಹೆಚ್ಚಿರುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಇಳಿಕೆಯಾಗಿತ್ತು. ಈ ಬಾರಿ ಕೊರೋನಾ ಸೋಂಕಿನ ಎರಡನೇ ಅಲೆಯ ನಂತರ ಸೋಂಕಿತ ಪ್ರಕರಣಗಳು ಇಳಿಕೆಯಾಗಿದ್ದರಿಂದ ಮದ್ಯಪ್ರಿಯರು ಸಂತಸಗೊಂಡಿದ್ದರಿಂದ ಮದ್ಯ ಮಾರಾಟವೂ ತುಸು ಹೆಚ್ಚಳವಾಗಿದೆ. ಡಿಸೆಂಬರ್‌ 24ರಿಂದ 31ರವರೆಗೆ ಭರ್ಜರಿ ಮದ್ಯ ಮಾರಾಟವಾಗಿದ್ದು ಬರೋಬ್ಬರಿ 974.58 ಕೋಟಿಗಳಷ್ಟುಮದ್ಯ ಮಾರಾಟವಾಗಿದೆ. ಡಿ. 31 ರಂದು 145ರಿಂದ 165 ಕೋಟಿ ರು.ಗಳಷ್ಟುಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.7ರಿಂದ 8ರಷ್ಟುಮಾರಾಟ ಜಾಸ್ತಿಯಾಗಿದೆ.

ಬೆಳಗ್ಗೆಯಿಂದಲೇ ಮದ್ಯ ಖರೀದಿ ಸಿದ್ಧತೆ!

ರೂಪಾಂತರಿ ಕೊರೋನಾ ಕಾರಣಕ್ಕಾಗಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಸಾಕಷ್ಟುನಿರ್ಬಂಧಗಳನ್ನು ವಿಧಿಸಲಾಗಿದೆ. ಡಿ.31ರಂದು ಸಂಜೆ 6 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೇ ರಾತ್ರಿ 10 ಗಂಟೆ ನಂತರ ಹೋಟೆಲ್‌, ಬಾರ್‌, ರೆಸ್ಟೋರಂಟ್‌, ಪಬ್‌ಗಳು ಬಂದ್‌ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದ್ದು ರಾತ್ರಿ ಪಾರ್ಟಿಗಳಿಗೆ ಕಡಿವಾಣ ಹಾಕಲಾಗಿತ್ತು. ಆದರೂ ಬೆಳಗ್ಗೆಯಿಂದಲೇ ಮದ್ಯ ಖರೀದಿ ಸಿದ್ಧತೆಯಲ್ಲಿ ತೊಡಗಿದ್ದ ಮದ್ಯ ಪ್ರಿಯರು ಬರೋಬ್ಬರಿ 140 ಕೋಟಿ ರು.ಗಳಿಗೂ ಅಧಿಕ ಮೊತ್ತದ ಮದ್ಯ ಖರೀದಿಸಿದ್ದಾರೆ. ಮದ್ಯದ ಮಳಿಗೆ, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ರಾತ್ರಿ 10 ಗಂಟೆವರೆಗೂ ತೆರೆದಿದ್ದು 165 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ವರ್ಷದ ಕಡೆಯ 2 ದಿನ ಮದ್ಯ ಮಾರಾಟ ಎಷ್ಟೆಷ್ಟು?

2019 ₹163.61 ಕೋಟಿ

2020 ₹153.53 ಕೋಟಿ

2021 ₹165 ಕೋಟಿ

ಇದನ್ನೂ ಓದಿ:

1) Vaccine for Children: 15-18 ವರ್ಷದವರಿಗೆ ಕೋವಿಡ್‌ ವ್ಯಾಕ್ಸಿನ್: ಹೈಸ್ಕೂಲ್‌, ಕಾಲೇಜಲ್ಲೇ ಲಸಿಕೆ ಕೇಂದ್ರ!

2) Basvaraj Bommai Loses Cool: ಬಾಸಿಸಂ ಬಿಡಿ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲಾಸ್‌!

3) Covid 19 Variant: ಮಹಾರಾಷ್ಟ್ರದಲ್ಲಿ ಒಮಿಕ್ರೋನ್‌ ಸೋಂಕಿತ ಸಾವು: ದೇಶದಲ್ಲೇ ಮೊದಲು!

click me!