ರಾಜ್ಯದಲ್ಲಿ ಹೊಸ ವರ್ಷಾಚರಣೆ ನಿಷೇಧ ಸಾಧ್ಯತೆ: ರಾತ್ರಿ ಕರ್ಫ್ಯೂ ಜಾರಿ?

By Kannadaprabha NewsFirst Published Dec 3, 2020, 7:31 AM IST
Highlights

ರಾಜ್ಯದಲ್ಲಿ ಹೊಸ ವರ್ಷಾಚರಣೆ ನಿಷೇಧ?| ಕೊರೋನಾ 2ನೇ ಅಲೆ ಭೀತಿ| ಡಿ.26ರಿಂದ ರಾತ್ರಿ ಕರ್ಫ್ಯೂಗೆ ಸಲಹೆ

ಬೆಂಗಳೂರು(ಡಿ.03): ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜನವರಿ, ಫೆಬ್ರವರಿಯಲ್ಲಿ ಆರಂಭವಾಗುವ ಆತಂಕವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹೊಸವರ್ಷಾಚರಣೆ ಮಾಡುವುದನ್ನು ನಿಷೇಧಿಸುವಂತೆ ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಿಫಾರಸು ಮಾಡಿದೆ. ಅಲ್ಲದೆ, ಡಿಸೆಂಬರ್‌ ಕೊನೆಯ ವಾರ ರಾತ್ರಿ ಕಫä್ರ್ಯ ಜಾರಿಗೊಳಿಸುವಂತೆಯೂ ಸಲಹೆ ನೀಡಿದೆ.

ಸರ್ಕಾರ ಡಾ.ಸುದರ್ಶನ್‌ ನೇತೃತ್ವದ ತಾಂತ್ರಿಕ ಸಮಿತಿಯ ವರದಿಯನ್ನು ಗಂಭೀರವಾಗಿ ಪರಿಗಣಿಸುವುದರಿಂದ ಈ ಬಾರಿ ವರ್ಷಾಂತ್ಯದ ವಾರದಲ್ಲಿ ರಾತ್ರಿ ತಿರುಗಾಟ ಮತ್ತು ಹೊಸ ವರ್ಷಾಚರಣೆಗೆ ಕಡಿವಾಣ ಬೀಳುವ ಸಾಧ್ಯತೆಯೇ ಹೆಚ್ಚಿದೆ.

ಕೊರೋನಾ ಹರಡುವ ಭೀತಿ: ಬ್ರಿಗೇಡ್‌, MG ರೋಡಲ್ಲಿ ಹೊಸ ವರ್ಷಾಚರಣೆ ಇಲ್ಲ?

ಮೊದಲ ಅಲೆ ಉತ್ತುಂಗ ತಲುಪಿದ ಮೂರು ನಾಲ್ಕು ತಿಂಗಳ ಬಳಿಕ ಎರಡನೇ ಅಲೆಯ ಸಾಧ್ಯತೆಯಿರುತ್ತದೆ. ರಾಜ್ಯದಲ್ಲಿ ಆಗಸ್ಟ್‌, ಸೆಪ್ಪೆಂಬರ್‌ನಲ್ಲಿ ಸೋಂಕು ಪರಾಕಾಷ್ಠೆಗೆ ತಲುಪಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಮೂರು ನಾಲ್ಕು ತಿಂಗಳು ಅಂದರೆ ಜನವರಿ, ಫೆಬ್ರವರಿಯಲ್ಲಿ ಮತ್ತೆ ಸೋಂಕಿನ ಪ್ರಮಾಣದಲ್ಲಿ ಭಾರಿ ಏರಿಕೆಯ ಸಂಭವವಿದೆ. ಚಳಿ, ಆನ್‌ಲಾಕ್‌ ಪ್ರಕ್ರಿಯೆ ಜಾರಿಯಲ್ಲಿರುವುದು, ನಿಯಮಗಳ ಪಾಲನೆಯಲ್ಲಿನ ನಿರ್ಲಕ್ಷ್ಯ ಮತ್ತು ಜನರ ಹೆಚ್ಚಿದ ಓಡಾಟ ಎರಡನೇ ಅಲೆಗೆ ಕಾರಣವಾಗಬಹುದು ಎಂದು ಸಲಹಾ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಚಳಿಗಾಲದ ತಿಂಗಳುಗಳಾದ ಡಿಸೆಂಬರ್‌ ಮತ್ತು ಜನವರಿಯಲ್ಲಿ ಜನ ಸೇರುವ ಜಾತ್ರೆ, ಹಬ್ಬ ಹರಿದಿನ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಂತ್ರಿಸಬೇಕು. ಮದುವೆಯಲ್ಲಿ ನೂರು ಜನಕ್ಕೆ, ಸಾರ್ವಜನಿಕ ಸಮಾರಂಭಕ್ಕೆ 200 ಜನ, ಸಾವು ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ 50, ಅಂತ್ಯಸಂಸ್ಕಾರದಲ್ಲಿ 20 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಬೇಕು. ಈ ಕಾರ್ಯಕ್ರಮಗಳನ್ನು ಹೊರಾಂಗಣದಲ್ಲಿ ನಡೆಸಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.

ಡಿಸೆಂಬರ್‌ 26ರಿಂದ ಜನವರಿ 1 ರವರೆಗೆ ರೆಸಾರ್ಟ್‌, ಹೋಟೆಲ್‌ ಮತ್ತು ರಸ್ತೆ (ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ ಇತ್ಯಾದಿ)ಗಳಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸಿ ಮತ್ತು ರಾತ್ರಿ 8ರಿಂದ ಬೆಳಗಿನ ಜಾವ 5 ಗಂಟೆಯ ತನಕ ರಾತ್ರಿ ಕಫä್ರ್ಯವನ್ನು ಹೇರಬೇಕು ಎಂದು ಸಮಿತಿ ಹೇಳಿದೆ.

ರಾಜ್ಯದಲ್ಲೂ ಲಸಿಕೆ ಪ್ರಯೋಗ ಯಶಸ್ವಿ: ಹೊಸ ವರ್ಷಕ್ಕೆ ಕೊರೋನಾ ವ್ಯಾಕ್ಸಿನ್?

ಈಜುಕೋಳದ ಬಳಕೆ ಮತ್ತು ಕ್ರೀಡಾ ಚಟುವಟಿಕೆಗಳ ಮೇಲಿರುವ ನಿರ್ಬಂಧವನ್ನು 2021ರ ಫೆಬ್ರವರಿ ತನಕ ಮುಂದುವರಿಸಬೇಕು. ಫೆಬ್ರವರಿತನಕ ಪ್ರತಿದಿನ 1.25 ಲಕ್ಷ ಕೊರೋನಾ ಪರೀಕ್ಷೆ ನಡೆಸಬೇಕು. ಇದರಲ್ಲಿ 1 ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆ ಆಗಿರಬೇಕು ಎಂದು ಶಿಫಾರಸು ಮಾಡಲಾಗಿದೆ.

ಸೋಂಕು ದೊಡ್ಡ ಪ್ರಮಾಣದಲ್ಲಿದ್ದ ಅಕ್ಟೋಬರ್‌ ತಿಂಗಳಿನಲ್ಲಿ ಏನೆಲ್ಲಾ ಚಿಕಿತ್ಸಾ ವ್ಯವಸ್ಥೆಗಳಿದ್ದವೋ ಅಷ್ಟೇ ವ್ಯವಸ್ಥೆಗಳು ಜನವರಿ ತಿಂಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರಬೇಕು. ಒಂದು ವೇಳೆ ಇಲ್ಲದೆ ಇದ್ದರೂ ಎರಡ್ಮೂರು ದಿನದಲ್ಲಿ ಎಲ್ಲ ವ್ಯವಸ್ಥೆ ಮಾಡಲು ಸಜ್ಜಾಗಿರಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಾಸ್ಕ್‌ ಧರಿಸದವನ್ನು ಜೈಲಿಗೆ ಹಾಕಿ:

ಮಾಸ್ಕ್‌ ಧರಿಸದವರಿಗೆ ಮಧ್ಯಪ್ರದೇಶದಲ್ಲಿ ಮಾಡಿರುವಂತೆ ಕೆಲವು ಗಂಟೆಗಳ ಕಾಲ ಸಾದಾ ಜೈಲು ಶಿಕ್ಷೆ ನೀಡುವ ನಿಯಮ ರೂಪಿಸಬೇಕು. ಮಾರುಕಟ್ಟೆ, ಬಸ್‌ ನಿಲ್ದಾಣ, ಬಸ್‌ಗಳಲ್ಲಿ, ವಾಣಿಜ್ಯ ಪ್ರದೇಶಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಧರಿಸದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಹೆಚ್ಚು ಮಾರ್ಷಲ್‌ ಮತ್ತು ಪೊಲೀಸರನ್ನು ನಿಯೋಜಿಸಬೇಕು ಎಂದು ಹೇಳಿದೆ.

ಒಂದು ವಾರದ ಸೋಂಕಿನ ಪ್ರಮಾಣದಲ್ಲಿನ ಹೆಚ್ಚಳ ಮತ್ತು ಹಬ್ಬಿರುವ ಪ್ರಮಾಣವನ್ನು ಗಮನಿಸಿ ಸೋಂಕಿನ ಎರಡನೇ ಅಲೆಯನ್ನು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮೊದಲೇ ಪತ್ತೆ ಹಚ್ಚಬಹುದು. ಈ ನಿಟ್ಟಿನಲ್ಲಿ ಸಾಂಕ್ರಾಮಿಕತೆ ಮೇಲೆ ನಿಗಾ ಇಟ್ಟಿರುವ ತಂಡ ಆರೋಗ್ಯ ಇಲಾಖೆಯನ್ನು ಎಚ್ಚರಿಸಬೇಕು. ಅನ್ಯ ರಾಜ್ಯಗಳಲ್ಲಿ ಕೋವಿಡ್‌ ನಿಯಂತ್ರಿಸಲು ಕೈಗೊಂಡಿರುವ ಉತ್ತಮ ಕ್ರಮಗಳ ಬಗ್ಗೆ ತಿಳಿದುಕೊಂಡು ಅದನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಬೇಕು. ಎರಡನೇ ಆಲೆ ತಪ್ಪಿಸಬೇಕಾದರೆ ಕ್ಲಸ್ಟರ್‌ ಪತ್ತೆ, ಪರೀಕ್ಷೆ, ನಿಗಾ ವಹಿಸುವಿಕೆ, ಸಂಪರ್ಕ ಪತ್ತೆಗೆ ಒತ್ತು ನೀಡಬೇಕು. ವೈಯಕ್ತಿಕ ನೆಲೆಯಲ್ಲಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ತೀರಾ ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಹೋಗಬೇಕು ಎಂದು ಸಮಿತಿ ಪುನರುಚ್ಚರಿಸಿದೆ.

ಅನುಶ್ರೀ ಅರೆಸ್ಟ್ ತಡೆಯುತ್ತಿರುವ ಆ 'ಶುಗರ್ ಡ್ಯಾಡಿ' ಯಾರು?

ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ:

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌, ಡಿಸೆಂಬರ್‌ 26ರಿಂದ ಜನವರಿ 1 ರವರೆಗೆ ರಾತ್ರಿ ಕಫä್ರ್ಯ ವಿಧಿಸುವಂತೆ ಸಮಿತಿಯು ಶಿಫಾರಸು ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ. ಆರೋಗ್ಯ ಇಲಾಖೆ ಮತ್ತು ಗೃಹ ಇಲಾಖೆಯೊಂದಿಗೂ ಸಮಾಲೋಚನೆ ನಡೆಸುತ್ತೇವೆ ಎಂದು ಹೇಳಿದರು.

click me!