ಬೆಂಗಳೂರು (ಸೆ.05): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಐದು ದಿನಗಳ ಬಳಿಕ ಸಾವಿರಕ್ಕೂ ಕಡಿಮೆ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಶನಿವಾರ 983 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 21 ಮಂದಿ ಮರಣವನ್ನಪ್ಪಿದ್ದಾರೆ.
ಆಗಸ್ಟ್ 30ರಂದು 973 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅದು 2ನೇ ಅಲೆ ಬಳಿಕ ಅತಿ ಕನಿಷ್ಠ ಮಟ್ಟವಾಗಿತ್ತು. ಆ ಬಳಿಕ ಪ್ರತಿದಿನ ಸರಾಸರಿ 1200 ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದವು. ಶನಿವಾರದ ಹೊಸ ಪ್ರಕರಣಗಳ ಪತ್ತೆಯಿಂದ ರಾಜ್ಯದ ಈವರೆಗಿನ ಸೋಂಕಿತರ ಸಂಖ್ಯೆ 29,54,047ಕ್ಕೆ ಏರಿಕೆಯಾಗಿದೆ. 1620 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 28,98,874 ಜನರು ಗುಣಮುಖರಾಗಿದ್ದಾರೆ.
undefined
ಕೋವಿಡ್ ಆತಂಕ : ರಾಜ್ಯದಲ್ಲಿ 4ನೇ ದಿನವೂ 1200 ಕೇಸು
ರಾಜ್ಯದಲ್ಲಿ ಒಟ್ಟು 17,746 ಸಕ್ರಿಯ ಸೋಂಕಿತ ಪ್ರಕರಣಗಳು ಇವೆ. ರಾಜ್ಯದ ಗದಗ, ರಾಯಚೂರು, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆ, ಬೀದರ್, ದಾವಣಗೆರೆ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 289, ದಕ್ಷಿಣ ಕನ್ನಡ 162, ಉಡುಪಿ 97, ಮೈಸೂರು 89, ಹಾಸನ 62, ಶಿವಮೊಗ್ಗ 56, ತುಮಕೂರು 41, ಉತ್ತರ ಕನ್ನಡ 29, ಬೆಳಗಾವಿ 33, ಚಿಕ್ಕಮಗಳೂರು 32, ಕೋಲಾರ 17, ಕೊಡಗು 16, ಚಾಮರಾಜನಗರ 10 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.