ಬೈಕ್, ಟಿವಿ, ಫ್ರಿಡ್ಜ್ ಇದ್ದವರ BPL ಕಾರ್ಡ್​ ರದ್ದಾಗುತ್ತಾ? ಇಲ್ಲಿದೆ ಇದರ ಸತ್ಯಾಸತ್ಯತೆ

By Suvarna News  |  First Published Sep 4, 2021, 4:35 PM IST

* ಬೈಕ್, ಟಿ.ವಿ, ಫ್ರಿಡ್ಜ್ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು ವಿಚಾರ
* ಆಹಾರ ಮತ್ತು ನಾಗರೀಕ ಇಲಾಖೆಯಿಂದ ಸ್ಪಷ್ಟನೆ.
* ಈ ರೀತಿ ಯಾವುದೇ ಆದೇಶವನ್ನ ಸರ್ಕಾರ ಹೊರಡಿಸಿಲ್ಲ ಎಂದು ಆಹಾರ ಇಲಾಖೆ


ಬೆಂಗಳೂರು, (ಸೆ.04): ನಿಜವಾದ ಸುದ್ದಿಗಿಂತ ಸುಳ್ಳು ಸುದ್ದಿಯೇ ಬೇಗ ಎಲ್ಲರಿಗೂ ಮುಟ್ಟಿಬಿಡುತ್ತೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದೇ ಆಗಿದ್ದು.  ಅಂತಹದ್ದೇ ಒಂದು ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು,  ಬಡ ಜನರ ಆತಂಕಕ್ಕೆ ಕಾರಣವಾಗಿದೆ.

ಹೌದು.. ಬೈಕ್, ಫ್ರಿಡ್ಜ್, ಟಿವಿ ಇದ್ದರೂ BPL ಕಾರ್ಡ್ ರದ್ದು ಮಾಡಲಾಗುತ್ತೆ ಎನ್ನುವ ಒಂದು ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದ್ರೆ, ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.  ಈ ಬಗ್ಗೆ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಸ್ಪಷ್ಟನೆ ಕೊಟ್ಟಿದೆ.

Latest Videos

undefined

85,000 ‘ಶ್ರೀಮಂತರ' ಬಿಪಿಎಲ್‌ ಕಾರ್ಡ್‌ ರದ್ದು..!

ಬೈಕ್, ಟಿ.ವಿ, ಫ್ರಿಡ್ಜ್ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಸ್ಪಷ್ಟನೆ ಕೊಟ್ಟಿರುವ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ,
ಈ ರೀತಿ ಯಾವುದೇ ಆದೇಶವನ್ನ ಸರ್ಕಾರ ಹೊರಡಿಸಿಲ್ಲ ಎಂದು ತಿಳಿಸಿದರು.

ಬೈಕ್, ಟಿವಿ, ಫ್ರಿಡ್ಜ್ ಹೊಂದಿರೋ ಕುಟುಂಬದವರು ಆದ್ಯತಾ ಪಡಿತರ ಪಡೆಯಲು ಅರ್ಹರು. ಇದು ಸರ್ಕಾರ ನಿಗದಿಪಡಿಸಿರೋ ಮಾನದಂಡದಲ್ಲೇ ಅವಕಾಶ ಇದೆ. ಮೂರು ಹೆಕ್ಟೇರ್ ಗಿಂತ ಹೆಚ್ಚು ಜಮೀನು ಇರುವ ಮತ್ತು ವಾರ್ಷಿಕ 1.20ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬ ಸ್ಥಿತಿಗತಿ ಪರಿಶೀಲಿಸಿ. ಬಿಪಿಎಲ್ ಕಾರ್ಡಿನಿಂದ ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡಲು ಡಿಸಿಗಳಿಗೆ ಆದೇಶ ಎಂದು ಸ್ಪಷ್ಟಪಡಿಸಿದೆ.

ಯಾವುದೇ ಅಧಿಕಾರಿ ಆಧಾರ ರಹಿತವಾಗಿ ಕಾರ್ಡ್ ರದ್ದುಪಡಿಸಿದರೆ ತಹಶೀಲ್ದಾರ್ ಅಥವಾ ಡಿಸಿಗಳಿಗೆ ದೂರು ನೀಡಬಹುದು ಎಂದು ಆಹಾರ ಇಲಾಖೆ ಹೇಳಿದೆ.

click me!