KRS ಡಿಸ್ನಿ ಲ್ಯಾಂಡ್‌ಗೆ ಆರಂಭದಲ್ಲೇ ವಿಘ್ನ

Published : Nov 17, 2018, 09:12 AM IST
KRS  ಡಿಸ್ನಿ ಲ್ಯಾಂಡ್‌ಗೆ ಆರಂಭದಲ್ಲೇ ವಿಘ್ನ

ಸಾರಾಂಶ

ಕೆಆರ್‌ಎಸ್‌ ಬೃಂದಾವನ ಬಳಿ ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿ ಯೋಜನೆಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಜಿಲ್ಲಾಡಳಿತವು ಶುಕ್ರವಾರ ಜಮೀನು ವೀಕ್ಷಣೆ ಕಾರ್ಯಕ್ಕೆ ಮುಂದಾದ ಸಂದರ್ಭದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. 

ಮಂಡ್ಯ :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಕೆಆರ್‌ಎಸ್‌ ಬೃಂದಾವನ ಬಳಿ ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿ ಯೋಜನೆಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಜಿಲ್ಲಾಡಳಿತವು ಶುಕ್ರವಾರ ಜಮೀನು ವೀಕ್ಷಣೆ ಕಾರ್ಯಕ್ಕೆ ಮುಂದಾದ ಸಂದರ್ಭದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. 

ಬಳಿಕ ಜಿಲ್ಲಾಧಿಕಾರಿ ಮಂಜುಶ್ರೀ ಸಮಾಧಾನದ ಮಾತುಗಳನ್ನು ಹೇಳಿದ ಬಳಿಕ ತಣ್ಣಗಾಗಿದ್ದಾರೆ. ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿಗಾಗಿ 300 ಎಕರೆ ಭೂಮಿ ಒದಗಿಸಲು ಸರ್ಕಾರ ಚಿಂತನೆ ಮಾಡಿ ಶ್ರೀರಂಗಪಟ್ಟಣ ತಾಲೂಕಿನ ಹೊಂಗಳ್ಳಿ, ಚಿಕ್ಕಯಾರಹಳ್ಳಿ ಗ್ರಾಮಗಳ ಜಮೀನು ಸ್ವಾಧೀನ ಮಾಡಿಕೊಳ್ಳುವ ಚಿಂತನೆ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಭೂಮಿಯನ್ನೂ ಕೊಡಲ್ಲ, ಗ್ರಾಮವನ್ನೂ ತೊರೆಯಲ್ಲ ಎಂದು ಎಚ್ಚರಿಕೆ ನೀಡಿದರು.

ಕೆಆರ್‌ಎಸ್‌ ಜಲಾಶಯದ ಅಕ್ಕಪಕ್ಕದಲ್ಲಿ ಇರುವ ಹಳ್ಳಿಗಳು ಎರಡೂ ಗ್ರಾಮಗಳನ್ನು ಸ್ಥಳಾಂತರ ಮಾಡುವುದು. ನಂತರ ಭೂಮಿ ವಶಪಡಿಸಿಕೊಳ್ಳಲು ಆಲೋಚಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ರೈತರ ವಿರೋಧವಿದೆ. ಜಿಲ್ಲಾಡಳಿತವು ಶುಕ್ರವಾರ ಜಮೀನು ವೀಕ್ಷಣೆ ಕಾರ್ಯಕ್ಕೆ ಮುಂದಾದ ಸುದ್ದಿ ತಿಳಿದ ಸ್ಥಳೀಯರು ಗ್ರಾಮದಲ್ಲಿ ಸಭೆ, ಪ್ರತಿಭಟನೆ ಮಾಡಲು ಮುಂದಾದರು.

ರೈತರ ಭೂಮಿ ಸ್ವಾಧೀನವಿಲ್ಲ:  ರೈತರು ಮತ್ತು ಗ್ರಾಮಸ್ಥರ ವಿರೋಧದ ಮಾಹಿತಿ ತಿಳಿದುಕೊಂಡ ಜಿಲ್ಲಾಧಿಕಾರಿ ಮಂಜುಶ್ರೀ, ಸರ್ಕಾರ ನಮಗೆ ರೈತ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅಥವಾ ಗ್ರಾಮಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಯಾರದ್ದೋ ಮಾತುಗಳನ್ನು ಕೇಳಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರಿ ಭೂಮಿ ಎಲ್ಲಿ ಎಷ್ಟುಲಭ್ಯವಿದೆ ಎಂಬುದನ್ನು ಮಾತ್ರ ನಾವು ತಲಾಷೆ ಮಾಡುತ್ತೇವೆ ಎಂದು ಸಮಾಧಾನ ಮಾತುಗಳನ್ನು ಹೇಳಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ