ಭ್ರಷ್ಟಾಚಾರದ ಕೂಪವಾಗಿರುವ ಬಳ್ಳಾರಿ ಆರ್‌ಟಿಒ ಓರ್ವ ಅಧಿಕಾರಿ ಮತ್ತು ಏಜೆಂಟನನ್ನು ಬಂಧಿಸಿರೋ ಲೋಕಾಯುಕ್ತ ಅಧಿಕಾರಿಗಳು. ವಾರ್ನಿಂಗ್ ನೀಡಿದ್ರೂ ಬುದ್ದಿ ಕಲಿಯದ ಆರ್ಟಿಓ ಅಧಿಕಾರಿಗಳಿಗೆ ಜೈಲೇ ಗತಿ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ನ.17): ಭ್ರಷ್ಟಾಚಾರದ ಕೂಪವಾಗಿರೋ ಬಳ್ಳಾರಿ RTO ಕಚೇರಿ ಮೇಲೆ ಸ್ಥಳೀಯ ಶಾಸಕ ದಾಳಿ ಮಾಡೋ ಮೂಲಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಾರ್ನಿಂಗ್ ಮಾಡಿದ್ರು. ಆ ವಾರ ಕಳೆಯೊದ್ರೊಳಗೆ ತಮ್ಮ ಹಳೇ ಚಾಳಿ ಬಿಡದ ಅಧಿಕಾರಿಗಳು ಮತ್ತದೆ ಲಂಚ ಪಡೆಯೋವಾಗ ಸಿಲುಕಿ ಕೊಂಡಿದ್ದಾರೆ. ಮಾರಾಟವಾದ ಲಾರಿಯ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಹಣದ ಬೇಡಿಕೆ ಇಟ್ಟ ಪರಿಣಾಮ ಇದೀಗ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಆರ್‌ಟಿಒ ಅಧಿಕಾರಿಗಳು ಸಿಲುಕೊಂಡಿದ್ಧಾರೆ.
undefined
ಭ್ರಷ್ಟಾಚಾರದ ಕೂಪ ಬಳ್ಳಾರಿ ಆರ್‌ಟಿಒ ಓರ್ವ ಅಧಿಕಾರಿ ಮತ್ತು ಏಜೆಂಟನನ್ನು ಬಂಧಿಸಿರೋ ಲೋಕಾಯುಕ್ತ ಅಧಿಕಾರಿಗಳು. ವಾರ್ನಿಂಗ್ ನೀಡಿದ್ರೂ ಬುದ್ದಿ ಕಲಿಯದ ಆರ್ಟಿಓ ಅಧಿಕಾರಿಗಳಿಗೆ ಜೈಲೇ ಗತಿ.
ಮಾರು ವೇಷದಲ್ಲಿ ಆರ್‌ಟಿಒ ಕಚೇರಿಗೆ ಬಂದ ಶಾಸಕ ಭರತ್ ರೆಡ್ಡಿ; ತಪ್ಪಿಸಿಕೊಂಡು ಓಡಿಹೋದ ಬ್ರೋಕರ್‌ಗಳು!
ಹೌದು, ಶಕ್ತಿ ಯೋಜನೆ ಜಾರಿ ಬಂದ ಬಳಿಕ ಖಾಸಗಿ ಬಸ್ ಗಳನ್ನು ಬಹುತೇಕ ಮಹಿಳೆಯರು ಹತ್ತುತ್ತಿಲ್ಲ. ಹೀಗಾಗಿ ಖಾಸಗಿ ಬಸ್ ಓಡಿಸೋದು ಕಷ್ಟವಾಗಿದೆ ಎಂದು ಖಾಸಗಿ ಬಸ್ ಮಾಲೀಕರು ತಮ್ಮ ಬಸ್ ಗಳನ್ನು ಮಾರಾಟ ಮಾಡೋ ಮೂಲಕ ಮತ್ತೊಂದು ಉದ್ಯಮವನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಆದ್ರೇ, ಬಸ್ ಮಾರಾಟ ಮಾಡೋವಾಗ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬೇಕಾದ ಹಿನ್ನೆಲೆ ಆರ್ಟಿಓ ಕಚೇರಿಗೆ ಹೋದರೆ ಬಳ್ಳಾರಿ ಆರ್ಟಿಓ ಅಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಮೂವತ್ತು ಸಾವಿರ, ನಲವತ್ತು ಸಾವಿರ ಹೀಗೆ ಬಾಯಿಗೆ ಬಂದಂತೆ ಹಣ ಬೇಡಿಕೆ ಇಟ್ಟ ಹಿನ್ನೆಲೆ ಖಾಸಗಿ ಬಸ್ ಮಾಲೀಕ ಉಮೇಶ್ ಲೋಕಾಯುಕ್ತರಿಗೆ ದೂರು ನೀಡಿದ್ರು.
ಕಳೆದೊಂದು ವಾರದಿಂದ ಆರ್ಟಿಓ ಕಚೇರಿ ಮೇಲೆ ಆಬ್ಸರ್ವ್ ಮಾಡಿದ ಲೋಕಾಯುಕ್ತರು, ಹದಿನೈದು ಸಾವಿರ ಹಣ ಪಡೆಯುತ್ತಿರೋ ವೇಳೆ ಆರ್ಟಿಓ ಕಚೇರಿ ಅಧೀಕ್ಷಕ ಚಂದ್ರಕಾಂತ ಗುಡಿಮನಿ ಮತ್ತು ಏಜೆಂಟ್ ಮಹಮ್ಮದ್ ಸಿರಾಜ್ ನನ್ನು ಬಂಧಿಸಿದ್ದಾರೆ. ಈ ವೇಳೆ ಆರ್ಟಿಓ ಶೇಖರಪ್ಪ ಇದ್ದು, ಅಲ್ಲಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರಿಗೂ ಇದೀಗ ನೋಟಿಸ್ ನೀಡಲಾಗಿದೆ.
ಕಚೇರಿ ಅಧೀಕ್ಷಕ, ಬ್ರೋಕರ್ ಬಂಧನ:
ಇನ್ನು ಬಳ್ಳಾರಿ ಆರ್ಟಿಓ ಕಚೇರಿಯಲ್ಲಿ ಭ್ರಷ್ಟಾಚಾರದ ಕಥೆ ಇಂದು ನಿನ್ನೆಯದಲ್ಲ. ನಿರಂತರವಾಗಿ ಇಲ್ಲಿ ಎಲ್ಲದಕ್ಕೂ ಹಣದ ಬೇಡಿಕೆ ಇಡೋದು ಸಾಮಾನ್ಯವಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳಿಗೂ ದೂರು ಬಂದ ಹಿನ್ನೆಲೆ ಕಳೆದ ವಾರವಷ್ಟೆ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅನಿರೀಕ್ಷತವಾಗಿ ಭೇಟಿ ನಿಡೋ ಮೂಲಕ ಜನರೆದುರೇ ಅಧಿಕಾರಿಗಳಿಗೆ ಚಳಿ ಬಿಡಿಸಿದ್ರು. ಜನರಿಗೆ ತೊಂದರೆ ನೀಡಿ ಹಣ ಕೇಳಿದ್ರೇ ವರ್ಗಾವಣೆ ಮಾಡೋದಾಗಿ ಎಚ್ಚರಿಸಿದ್ರು. ಕಚೇರಿಯಲ್ಲಿ ಆ ರೀತಿ ನಡೆಯುತ್ತಿಲ್ಲವೆಂದು ಸಮಜಾಯಿಷಿ ನೀಡಲು ಬಂದ ಆರ್ಟಿಓ ಶೇಖರಪ್ಪ ಅವರಿಗೆ ಎಲ್ಲರೆದುರಲ್ಲಿಯೇ ಬಾಯಿಗೆ ಬಂದ ಹಾಗೇ ಬೈದಿದ್ರು. ಆದ್ರೇ, ಆ ಘಟನೆ ನಡೆದು ವಾರ ಕಳೆದಿಲ್ಲ. ಇದೀಗ ಮತ್ತದೆ ಭ್ರಷ್ಟಚಾರದ ಆರೋಪದಲ್ಲಿ ಕಚೇರಿ ಅಧೀಕ್ಷಕರನ್ನೆ ಬಂಧಿಸಿರೋದು ನಾಚಿಕೆಗೇಡಿನ ಸಂಗತಿಯಾಗಿದೆ.
ಬಡತನ ಮೆಟ್ಟಿನಿಂತು ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿ ಸಾಧನೆ; ಹೆಚ್ಚಿನ ತರಬೇತಿಗೆ ಶಾಸಕ ಭರತ್ ರೆಡ್ಡಿ ಧನ ಸಹಾಯ
ಹಣಕ್ಕಾಗಿ ಜನರಿಗೆಕಿರುಕುಳ ನೀಡ್ತಾರೆ
ಹೀಗೆ ನಿರಂತರವಾಗಿ ಹಣಕ್ಕಾಗಿ ಜನರನ್ನು ಪೀಡಿಸೋ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸೋ ಮೂಲಕ ಭ್ರಷ್ಟಾಚಾರ ನಿಗ್ರಹ ಮಾಡಬೇಕೆನ್ನುವುದ ಸಾರ್ವಜನಿಕರ ಆಗ್ರಹವಾಗಿದೆ.