ನಾನೊಬ್ಬ ರೈತನ ಮಗ ಕೃಷಿಯ ಮಹತ್ವ ಗೊತ್ತಿದೆ: ಡಿಸಿಎಂ

By Ravi Janekal  |  First Published Nov 17, 2023, 4:34 PM IST

ಭೂಮಿ ತಾಯಿ ಮೊದಲ ಮಕ್ಕಳಾದ ಅನ್ನದಾತರಿಗೆ ನನ್ನ ಸಾಷ್ಟಾಂಗ ನಮಸ್ಕಾರ. ನಾನೊಬ್ಬ ರೈತನ ಮಗ, ನಮ್ಮ‌ ಕುಟುಂಬದಿಂದ ಎಷ್ಟು ಜಮೀನು ಬಂದಿತ್ತೊ ಅಷ್ಟು ಜಮೀನಿನಲ್ಲಿ ನಾವು ಕೃಷಿ ಮಾಡುತ್ತಿದ್ದೇವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗದಂತೆ ಕೃಷಿಕ, ಕಾರ್ಮಿಕ, ಸೈನಿಕರು ಕೂಡ ದೇಶದ ಸ್ತಂಭ ಎಂದು ಡಿಸಿಎಂ ಡಿಕೆ ಶಿವಕುಮಾರ ಅಭಿಪ್ರಾಯಪಟ್ಟರು.


ಬೆಂಗಳೂರು (ನ.17): ಭೂಮಿ ತಾಯಿ ಮೊದಲ ಮಕ್ಕಳಾದ ಅನ್ನದಾತರಿಗೆ ನನ್ನ ಸಾಷ್ಟಾಂಗ ನಮಸ್ಕಾರ. ನಾನೊಬ್ಬ ರೈತನ ಮಗ, ನಮ್ಮ‌ ಕುಟುಂಬದಿಂದ ಎಷ್ಟು ಜಮೀನು ಬಂದಿತ್ತೊ ಅಷ್ಟು ಜಮೀನಿನಲ್ಲಿ ನಾವು ಕೃಷಿ ಮಾಡುತ್ತಿದ್ದೇವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗದಂತೆ ಕೃಷಿಕ, ಕಾರ್ಮಿಕ, ಸೈನಿಕರು ಕೂಡ ದೇಶದ ಸ್ತಂಭ ಎಂದು ಡಿಸಿಎಂ ಡಿಕೆ ಶಿವಕುಮಾರ ಅಭಿಪ್ರಾಯಪಟ್ಟರು.

ಇಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿ.ಕೆ.ವಿ.ಕೆ) ಹಮ್ಮಿಕೊಂಡಿದ್ದ ಕೃಷಿಮೇಳ -2023 ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದ ಡಿಕೆ ಶಿವಕುಮಾರ, ಕರ್ನಾಟಕ  ರಾಜ್ಯದ ರೈತರು ಹಲವು ಹೊಸ ಪ್ರಯೋಗಗಳ ಮೂಲಕ ಕೃಷಿ ಕ್ಷೇತ್ರದ ಏಳಿಗೆಗೆ ಶ್ರಮಿಮಿಸುತ್ತಿರುವುದು ಹೆಮ್ಮೆಯ ಸಂಗತಿ. ನಾನೊಬ್ಬ ರೈತನ ಮಗನಾಗಿ ಕೃಷಿಯ ಮಹತ್ವವನ್ನು ಅರಿತಿದ್ದು, ಅನ್ನದಾತರ ಶ್ರಮದಿಂದ ಇಂದು ನಾವು ಉತ್ತಮ ಆಹಾರ ಸೇವಿಸುತ್ತಿದ್ದೇವೆ. ಮುಂಗಾರು ರೈತರ ಕೈಹಿಡಿಯದ ಹಿನ್ನೆಲೆಯಲ್ಲಿ ಈ ಬಾರಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ, ಇಂತಹ ಸಂದರ್ಭವನ್ನು ಹೇಗೆ ನಿರ್ವಹಿಸಬೇಕು, ಉಳಿದ ರೈತರು ಏನಾದರೂ ಪರ್ಯಾಯ ಮಾಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದಕ್ಕೆ ಈ ಬಾರಿಯ ಕೃಷಿ ಮೇಳವು ಅತ್ಯಂತ ಸಹಕಾರಿ ಹಾಗೂ ಉಪಯುಕ್ತವಾಗಿದೆ ಎಂದರು. 

Tap to resize

Latest Videos

ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ: ಸಿಎಂ ಸಿದ್ದರಾಮಯ್ಯ

ಈ ಹಿಂದೆ ಕೃಷ್ಣಬೈರೆಗೌಡರು ಈ ಖಾತೆ ತೆಗೆದುಕೊಂಡಾಗ ಒಳ್ಳೆ ಕೆಲಸ ಮಾಡಿದ್ರು. ಅವರ ತಂದೆ ಬೈರೇಗೌಡರು ಕಾಲದಲ್ಲಿ  ಮಾದರಿ ಕೃಷಿ ಜಾರಿಗೆ ತಂದಿದ್ರು. ಚಿಕ್ಕಬಳ್ಳಾಪುರ, ಕೋಲಾರದ ಜನ ಬಹಳ ಲೆಕ್ಕಾಚಾರದಿಂದ ಕೃಷಿ ಮಾಡಿ ಮಾದರಿ ರೈತರಾಗಿದ್ದಾರೆ. ದೇಶಕ್ಕೆ ಬುದ್ದಿವಂತರು, ವಿದ್ಯಾವಂತರು ಇಲ್ಲದಿದ್ರೂ ಪರವಾ ಇಲ್ಲ. ಆದರೆ ಪ್ರಜ್ಞಾವಂತರು ಇಲ್ಲದಿದ್ರೆ ದೇಶ ನಡೆಯಲ್ಲ ಎಂದರು.

ರೈತರು ಏನೇ ಒತ್ತಡ ಬಂದ್ರೂ ಜಮೀನನ್ನು ಮಾರಿಕೊಳ್ಳಲು ಹೋಗಬೇಡಿ ಎಂದು ಮನವಿ ಮಾಡಿದ ಡಿಸಿಎಂ ಡಿಕೆ ಶಿವಕುಮಾರ, ನಮ್ಮ ಸರ್ಕಾರ ರೈತರಿಗಾಗಿ ಅನೇಕ ಕಾರ್ಯಗಳನ್ನ ರೂಪಿಸಿದ್ದೇವೆ. ಚಲುವರಾಯಸ್ವಾಮಿ ಬೇರೆ ಖಾತೆ ಬೇಕು ಅನ್ನೋ ಯೋಚನೆ ಇತ್ತು. ಅವರು ರೈತನ ಮಗ ಆದ್ರಿಂದ ಚಲುವರಾಯಸ್ವಾಮಿಗೆ ಕೃಷಿ ಇಲಾಖೆಯನ್ನ ಕೊಟ್ಟಿದ್ದೇವೆ. ಬೇರೆಯವರಿಗೆ ಈ ಖಾತೆ ಕೊಟ್ರೆ ರೈತರ ಕಷ್ಟ ಅವರಿಗೆ ಅರ್ಥವಾಗಲ್ಲ ಹೀಗಾಗಿ ರೈತನ ಮಗನಿಗೆ ರೈತರ ಕಷ್ಟ ಚಲುವರಾಯಸ್ವಾಮಿಗೆ ಅರ್ಥವಾಗುತ್ತೆ ಎಂದು ಕೃಷಿ ಖಾತೆ ನೀಡಿದ್ದೇವೆ ಎಂದರು. 

ಇನ್ನು ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಸಿದ ಡಿಸಿಎಂ, ಡಿಕೆ ಶಿವಕುಮಾರ ಅವರು, ಕುಮಾರಸ್ವಾಮಿ ಏನೇನೋ ಹೇಳ್ತಾರೆ ಅದಕ್ಕೆಲ್ಲ ಜನ ಉತ್ತರ ಕೊಟ್ಟಿದ್ದಾರೆ. ಅವರ ಮಾತುಗಳಿಗೆ,  ಆಚಾರ ವಿಚಾರಗಳಿಗೆ ಜನ ಉತ್ತರಿಸಿದ್ದಾರೆ. ಇನ್ನ ಏನು ಬೇಕು ಅದನ್ನ ಕೊಡ್ತೇನೆ.  ಏನೇನು ಪಟ್ಟಿ ಬೇಕು ಅಂದಿದ್ದಾರೆ ಅಲ್ವಾ ಅದರ ಬಗ್ಗೆ ಕೊಡೋಣ No problem ಎಂದರು.

ಕುಮಾರಸ್ವಾಮಿ ಹೇಳೋದೆಲ್ಲ ಶೇ. 99 ಸುಳ್ಳು, ಜೆಡಿಎಸ್ ಸೆಕ್ಯುಲರ್ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಪೊಗರು, ಬ್ಲಾಕ್‌ಮೇಲ್‌ಗೆಲ್ಲ ಹೆದರಲ್ಲ;

ಲೂಲು ಮಾಲ್ ಅಕ್ರಮದ ಬಗ್ಗೆ ಆರೋಪ ಮಾಡಲಾಗಿದೆ. ನೋಡ್ತಿ ನಾನು ಮಾಲ್ ಕಟ್ಟಿರೋದು ಕೇಂದ್ರ ಸರ್ಕಾರದ ಒಂದು ಸಂಸ್ಥೆದು. ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ. ಅದು ಕೇಂದ್ರ ಸರ್ಕಾರದ್ದು. ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ನಾನು ಅವರ ಹತ್ತಿರ ತೆಗೆದುಕೊಂಡಿದ್ದೇನೆ. ಏನಾದ್ರೂ ತಪ್ಪು ಮಾಡಿದ್ರೆ ಬೇಕಾದ್ರೆ ಗಲ್ಲಿಗೆ ಹಾಕಲಿ. ಅವರ ತಂದೆಗೆ ಹತ್ತು ಹದಿನೈದು ವರ್ಷದಿಂದನೇ ಅದ್ಯಾರೋ ಜಯರಾಜ್ ಅಂತಾ ಇದ್ರು. ಅವರ ಕೈಯಲ್ಲಿ ಏನೆನೋ ತನಿಖೆ ಮಾಡಿಸಿದ್ರು. ಈಗಲೂ ಬೇಕಾದ್ರು ತನಿಖೆ ಮಾಡಿಸಲಿ. ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿಸಿ. ನಾವು ಅದಕ್ಕೆ ರೆಡಿ ಇದ್ದೀವಿ. ಈ ಪೊಗರು ಈ ಬ್ಲಾಕ್ಮೆಲ್‌ಗೆಲ್ಲ ನಾವು ಹೆದರಲ್ಲ ಅಂತಾ ಅವರಿಗೂ ಗೊತ್ತು. ಏನು ದಾಖಲೆ ಬೇಕೋ ಕೊಡ್ತೇನೆ. ಅವರು ದಾಖಲೆ ಕೇಳ್ತಾ ಇದ್ದರಲ್ಲಾ, ನಾವೇನೋ ಇಲಿಗಲ್ ಕರಂಟ್ ಕಟ್ಟಿದ್ದೇವೆ ಅಂತಾ. ಮಾಲ್ ಕಟ್ಟಿದವನೂ ನಾನಲ್ಲ. ಜಾಯಿಂಟ್ ಡೆವೆಲಪೆಂಟ್ ಕಟ್ಡಿದವರು . ಅವರಿಗೆ ಹೇಳ್ತೇನೆ ಅದೇನೂ ಕರೆಂಟ್ ಕದ್ದಿದ್ದೀರಾ ತೋರಿಸಿ ಅಂತಾ ಎನ್ನುವ ಮೂಲಕ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು. 

click me!