ಗುತ್ತಿಗೆ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

By Kannadaprabha NewsFirst Published Oct 14, 2020, 7:09 AM IST
Highlights

ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದ ವೈದ್ಯರ ಸೇವೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು (ಅ.14): ಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ರಾಜ್ಯ ಸರ್ಕಾರವು ಕಳೆದ ಮಾರ್ಚಲ್ಲಿ ತಾತ್ಕಾಲಿಕವಾಗಿ 18 ಜಿಲ್ಲೆಗಳಿಗೆ ನೇಮಿಸಿದ್ದ ವೈದ್ಯರು ಸೇರಿದಂತೆ ಇನ್ನಿತರ ವೈದ್ಯಕೀಯ ಸಿಬ್ಬಂದಿಯ ಆರು ತಿಂಗಳ ಗುತ್ತಿಗೆ ಅವಧಿಯನ್ನು ಈ ವರ್ಷದ ಅಂತ್ಯದವರಗೆ ವಿಸ್ತರಿಸಿದೆ.

 ಸೆಪ್ಟೆಂಬರ್‌ 30ಕ್ಕೆ ಈ ಸಿಬ್ಬಂದಿಯ ಗುತ್ತಿಗೆ ಅಥವಾ ಹೊರಗುತ್ತಿಗೆ ಅವಧಿ ಮುಕ್ತಾಯಗೊಂಡಿತ್ತು. ರಾಜ್ಯದಲ್ಲಿ ಪ್ರಸಕ್ತ ಕೊರೋನಾ ಸೋಂಕಿನ ಹಬ್ಬುವಿಕೆ ಉತ್ತುಂಗಕ್ಕೆ ತಲುಪಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಸಿಬ್ಬಂದಿಯ ಗುತ್ತಿಗೆ ಅವಧಿಯನ್ನು ಡಿಸೆಂಬರ್‌ ಕೊನೆಯವರೆಗೆ ವಿಸ್ತರಿಸಿದೆ. 

ಕೊರೋನಾ ನಿಯಂತ್ರಣದಲ್ಲಿ ಆರೋಗ್ಯ ಸೇತು ಆ್ಯಪ್ ಪ್ರಮಖ ಪಾತ್ರ; WHO ಮೆಚ್ಚುಗೆ! .

ಪ್ರತಿ ಜಿಲ್ಲೆಗೆ 10 ವೈದ್ಯರು, 20 ಶುಶ್ರೂಷಕರು, 5 ಪ್ರಯೋಗಶಾಲಾ ತಂತ್ರಜ್ಞರು, 10 ಗ್ರೂಪ್‌ ಡಿ ಸಿಬ್ಬಂದಿ ಹೀಗೆ ಒಟ್ಟು 45 ಮಂದಿಯನ್ನು ನೇಮಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ನೀಡಿತ್ತು.

click me!