ಕೊರೋನಾ ಅಬ್ಬರ ಕ್ಷೀಣ : 100ಕ್ಕಿಂತಲೂ ಕಮ್ಮಿ ಕೇಸ್

By Kannadaprabha NewsFirst Published Nov 12, 2020, 7:21 AM IST
Highlights

ರಾಜ್ಯದಲ್ಲಿ ಚಳಿಗಾಲವಾದರೂ ಕೊರೋನಾ ಅಬ್ಬರ ಇಳಿಮುಖವಾಗಿದೆ. ಇನ್ನಷ್ಟು ಇನ್ನಷ್ಟು ಕ್ಷೀಣಿಸಿದೆ. ಅತೀ ಕಡಿಮೆ ಸಂಖ್ಯೆಯಲ್ಲಿ ಕೇಸ್‌ಗಳು ದಾಖಲಾಗಿವೆ. 

ಬೆಂಗಳೂರು (ನ.12):  ರಾಜ್ಯವ್ಯಾಪಿ ಕೊರೋನಾ ಸೋಂಕಿನ ಅಬ್ಬರ ಕ್ಷೀಣಿಸುತ್ತಿದ್ದು, ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿದೆ. ಬುಧವಾರ ರಾಜ್ಯದಲ್ಲಿ 2,584 ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿದೆ. 2,881 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 23 ಮಂದಿ ಮೃತರಾಗಿದ್ದಾರೆ.

ಬುಧವಾರದ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು (1,665) ಪ್ರಕರಣಗಳು ರಾಜ್ಯ ರಾಜಧಾನಿಯಿಂದಲೇ ವರದಿಯಾಗಿದೆ. ಉಳಿದಂತೆ ಮೈಸೂರಿನಲ್ಲಿ 112 ಪ್ರಕರಣಗಳು ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಮೂರಂಕಿಯ ಪ್ರಕರಣಗಳು ವರದಿಯಾಗುತ್ತಿದ್ದ ಹಾಸನ, ದಕ್ಷಿಣ ಕನ್ನಡ, ತುಮಕೂರು, ಧಾರವಾಡ, ಬೆಳಗಾವಿಗಳಲ್ಲಿ ಈಗ ದೈನಂದಿನ ಸೋಂಕಿನ ಪ್ರಕರಣಗಳು ಎರಡಂಕಿಗೆ ಇಳಿದಿದೆ.

ಕೊರೋನಾ ಅಟ್ಟಹಾಸಕ್ಕೆ ಸದ್ದಿಲ್ಲದೆ ಮಸಣ ಸೇರಿದ ಜೀವಗಳು..! ...

ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 8.53 ಲಕ್ಷಕ್ಕೆ ಏರಿದೆ. ಇದರಲ್ಲಿ 30,743 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 824 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8.11 ಲಕ್ಷ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರಲ್ಲಿ ಶೇ. 95ಕ್ಕಿಂತ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕೊರೋನಾ ಸೋಂಕಿದ್ದರೂ ಅನ್ಯ ಕಾರಣದಿಂದ 19 ಜನರು ಈವರೆಗೆ ಮೃತರಾಗಿದ್ದಾರೆ. ಒಟ್ಟು 11,453 ಮಂದಿ ಸೋಂಕಿನ ಕಾರಣದಿಂದಲೇ ಮರಣವನ್ನಪ್ಪಿದ್ದಾರೆ. 1.10 ಲಕ್ಷದಷ್ಟುಕೊರೋನಾ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ರಾಜ್ಯದ ಒಟ್ಟು ಪರೀಕ್ಷೆ 90 ಲಕ್ಷದ ಗಡಿ ದಾಟಿದೆ.

click me!