6ನೇ ತರಗತಿಯ ಪುಸ್ತಕದಲ್ಲಿರುವ ವಿವಾದಿತ ಪಾಠವನ್ನು ತೆಗೆದು ಹಾಕಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಉಡುಪಿ (ಆ.26) : ರಾಜ್ಯದ 6ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಹಿಂದುಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುವಂತಿರುವ ಪಾಠವನ್ನು ಕೈಬಿಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಪಾಠದ ಬಗ್ಗೆ ಉಡುಪಿ ಶ್ರೀಕೃಷ್ಣಮಠದ ಈಶಪ್ರಿಯತೀರ್ಥರು ಕೂಡ ತಮ್ಮ ಆಕ್ಷೇಪವನ್ನು ಆಡಿಯೋ ಮೂಲಕ ಸಚಿವರಿಗೆ ಕಳುಹಿಸಿದ್ದರು.
ಈ ಪಾಠದಲ್ಲೇನಿದೆ?: ‘ಉತ್ತರ ವೇದ ಕಾಲದಲ್ಲಿ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರ ಉತ್ಪಾದನೆ ಕುಂಠಿತವಾಯಿತು.
ಅಬ್ಬೋ..! ಐಎಎಸ್ ಸಂದರ್ಶನದಲ್ಲಿ ಹೀಗೂ ಪ್ರಶ್ನೆ ಕೇಳ್ತಾರಾ..?
ಯಾಗ-ಯಜ್ಞಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು, ಸರಳ ಮಾರ್ಗಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು’ ಎಂದು ಪ್ರತಿಪಾದಿಸಲಾಗಿದೆ.
ಅ. 1 ರಿಂದ ಪದವಿ, ಸ್ನಾತಕೋತ್ತರ ಪದವಿ ಪ್ರಾರಂಭಕ್ಕೆ ಸಿದ್ಧತೆ; ಹೀಗಿರಲಿವೆ ತರಗತಿಗಳು