ಬಿಜೆಪಿ ಮೋರ್ಚಾಗಳಿಗೆ ಹೊಸ ಉತ್ಸಾಹಿಗಳ ಸಾರಥ್ಯ

By Kannadaprabha NewsFirst Published Aug 26, 2020, 9:36 AM IST
Highlights

ರಾಜ್ಯಾಧ್ಯಕ್ಷರಾಗಿ ಕಟೀಲ್‌ 1 ವರ್ಷ ಪೂರೈಸುತ್ತಿರುವ ಬೆನ್ನಲ್ಲೇ 7 ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ| ಈ ಮೋರ್ಚಾಗಳಿಗೆ ಇತ್ತೀಚೆಗೆ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು| ಇದೀಗ ಇತರ ಪದಾಧಿಕಾರಿಗಳ ನೇಮಕ| 

ಬೆಂಗಳೂರು(ಆ.26):  ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನಳಿನ್‌ ಕುಮಾರ್‌ ಕಟೀಲ್‌ ಅವರು ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಪಕ್ಷದ ಎಲ್ಲ ಏಳು ಮೋರ್ಚಾಗಳ ರಾಜ್ಯ ಪದಾಧಿಕಾರಿಗಳನ್ನು ನೇಮಕ ಮಾಡಿ ಮಂಗಳವಾರ ಸಂಜೆ ಆದೇಶ ಹೊರಡಿಸಲಾಗಿದೆ.

ರೈತ ಮೋರ್ಚಾ, ಮಹಿಳಾ ಮೋರ್ಚಾ, ಯುವ ಮೋರ್ಚಾ, ಅಲ್ಪಸಂಖ್ಯಾತರ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ, ಎಸ್‌ಟಿ ಮೋರ್ಚಾ, ಎಸ್‌ಸಿ ಮೋರ್ಚಾಗಳ ಪದಾಧಿಕಾರಿಗಳನ್ನು ನೇಮಿಸಿ ಆಯಾ ಮೋರ್ಚಾಗಳ ಅಧ್ಯಕ್ಷರು ಪ್ರಕಟಣೆ ನೀಡಿದ್ದಾರೆ.

ಈ ಮೋರ್ಚಾಗಳಿಗೆ ಇತ್ತೀಚೆಗೆ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಇತರ ಪದಾಧಿಕಾರಿಗಳ ನೇಮಕವಾಗಿದೆ. ಎಲ್ಲ ಮೋರ್ಚಾಗಳಲ್ಲೂ ಬಹುತೇಕ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಮೋರ್ಚಾಕ್ಕೂ ಆರು ಮಂದಿ ಉಪಾಧ್ಯಕ್ಷರು, ಇಬ್ಬರು ಪ್ರಧಾನ ಕಾರ್ಯದರ್ಶಿಗಳು, ಆರು ಮಂದಿ ಕಾರ್ಯದರ್ಶಿಗಳು, ಒಬ್ಬರು ಕೋಶಾಧ್ಯಕ್ಷರು ಹಾಗೂ ಒಬ್ಬರು ಕಾರ್ಯಾಲಯ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.

'ಬಿಜೆಪಿ ಸರ್ಕಾರ ಬರಲು ನನ್ನ ಪಾತ್ರ ದೊಡ್ಡದು, ನಾನೂ ಸಚಿವ ಸ್ಥಾನದ ಆಕಾಂಕ್ಷಿ'

ವಿವಿಧ ಮೋರ್ಚಾಗಳ ಹೆಸರುಗಳು, ಹುದ್ದೆಗಳು ಮತ್ತು ಪದಾಧಿಕಾರಿಗಳು ಪ್ರತಿನಿಧಿಸುವ ಕ್ಷೇತ್ರಗಳ ವಿವರ ಕೆಳಕಂಡಂತಿದೆ.

ರೈತ ಮೋರ್ಚಾ: 

ಉಪಾಧ್ಯಕ್ಷರು- ಪ್ರಸನ್ನಗೌಡ (ಮೈಸೂರು ಗ್ರಾಮಾಂತರ), ನಂಜುಂಡೇಗೌಡ (ಮಂಡ್ಯ), ಆರ್‌.ಟಿ.ಪಾಟೀಲ್‌ (ಬಾಗಲಕೋಟೆ), ದುಂಡಪ್ಪ ಬೆಂಡವಾಡಿ (ಚಿಕ್ಕೋಡಿ), ಎ.ವಿ.ತೀರ್ಥರಾಜು (ದಕ್ಷಿಣ ಕನ್ನಡ), ಸಿ.ವಿ.ಲೋಕೇಶ್‌ಗೌಡ (ಚಿಕ್ಕಬಳ್ಳಾಪುರ). ಪ್ರಧಾನ ಕಾರ್ಯದರ್ಶಿಗಳು- ಎಸ್‌.ಶಿವಪ್ರಸಾದ್‌ (ತುಮಕೂರು), ಗುರುಲಿಂಗನಗೌಡ (ಬಳ್ಳಾರಿ ಗ್ರಾಮಾಂತರ). ಕಾರ್ಯದರ್ಶಿಗಳು- ಡಾ.ನವೀನ್‌ಕುಮಾರ್‌ (ಕೊಡಗು), ಪಾಲಾಕ್ಷಗೌಡ ಪಾಟೀಲ್‌ (ಹಾವೇರಿ), ಷಣ್ಮುಖ ಗುರಿಕಾರ (ಧಾರವಾಡ), ಧರ್ಮಣ್ಣ ದೊಡ್ಡಮನಿ (ಕಲಬುರ್ಗಿ ಗ್ರಾಮಾಂತರ), ಡಿ.ರಮೇಶ್‌ (ಚಿತ್ರದುರ್ಗ), ಚಂದ್ರಶೇಖರ್‌ ಮಾಗನೂರು (ಯಾದಗಿರಿ). ಕೋಶಾಧ್ಯಕ್ಷ- ಲಲ್ಲೇಶ್‌ ರೆಡ್ಡಿ (ಬೆಂಗಳೂರು ದಕ್ಷಿಣ). ಕಾರ್ಯಾಲಯ ಕಾರ್ಯದರ್ಶಿ- ಶಶಿಕುಮಾರ್‌ ಗುತ್ತನ್ನವರ್‌ (ಬಾಗಲಕೋಟೆ).

ಮಹಿಳಾ ಮೋರ್ಚಾ:

ಉಪಾಧ್ಯಕ್ಷರು- ಸೀಮಾ ಮಸೂತಿ (ಧಾರವಾಡ ಗ್ರಾಮಾಂತರ), ಲಲಿತ ಅನುಪುರ (ಯಾದಗಿರಿ), ಪ್ರೇಮಾ ಭಂಡಾರಿ (ಬೆಳಗಾವಿ ಗ್ರಾಮಾಂತರ), ಶಿವಕೃಷ್ಣಮ್ಮ (ಬಳ್ಳಾರಿ ನಗರ), ಸುನೀತಾ ಜಗದೀಶ್‌ (ಚಿಕ್ಕಮಗಳೂರು), ಪ್ರಮೀಳಾ ವರದರಾಜುಗೌಡ (ಮಂಡ್ಯ). ಪ್ರಧಾನ ಕಾರ್ಯದರ್ಶಿಗಳು- ಚಂದ್ರಮ್ಮ ಪಾಟೀಲ ರೇವೂರ್‌ (ಕಲಬುರ್ಗಿ ಗ್ರಾಮಾಂತರ), ಶಿಲ್ಪಾ ಸುವರ್ಣ (ಉಡುಪಿ). ಕಾರ್ಯದರ್ಶಿಗಳು- ವಿಜಯಲಕ್ಷ್ಮಿ ಉಕುಮನಾಳ (ವಿಜಯಪುರ), ಚಂದ್ರಕಲಾ ಬಾಯಿ (ಬೀದರ್‌), ವತ್ಸಲ (ದೊಡ್ಡಬಳ್ಳಾಪುರ), ಮೇಲಕಾ ಹುರುಳಿ (ಹುಬ್ಬಳ್ಳಿ), ಡಾ.ಪದ್ಮಾ ಪ್ರಕಾಶ್‌ (ಬೆಂ.ಉತ್ತರ), ನಿಶ್ಚಿತಾ (ಬೆಂಗಳೂರು ಕೇಂದ್ರ). ಕೋಶಾಧ್ಯಕ್ಷೆ- ಸುರಭಿ ರಘು (ಹಾಸನ), ಕಾರ್ಯಾಲಯ ಕಾರ್ಯದರ್ಶಿ- ಶೋಭಾ ಗಿರೀಶ್‌ (ಬೆಂ.ದಕ್ಷಿಣ).

ಯುವ ಮೋರ್ಚಾ: 

ಉಪಾಧ್ಯಕ್ಷರು- ಎ.ವಸಂತಕುಮಾರ್‌ ಗೌಡ (ಬೆಂಗಳೂರು ಉತ್ತರ), ರಾಜಕುಮಾರ್‌ ಸಗಾಯಿ (ಬಾಗಲಕೋಟೆ), ಎಚ್‌.ಎಸ್‌.ಜಯಶಂಕರ್‌ (ಮೈಸೂರು ನಗರ), ಎಸ್‌.ಸಿ.ಧೀರಜ್‌ (ಚಾಮರಾಜನಗರ), ಪ್ರಕಾಶ್‌ ಶೃಂಗೇರಿ (ಹುಬ್ಬಳ್ಳಿ), ಎನ್‌.ವಿ.ಹರ್ಷಿತ್‌ (ಹಾಸನ). ಪ್ರಧಾನ ಕಾರ್ಯದರ್ಶಿಗಳು- ಡಾ.ಮಲ್ಲಿಕಾರ್ಜುನ ಬಾಳಿಕಾಯಿ ಧಾರವಾಡ) ಅಜಿತ್‌ ಹೆಗಡೆ ಬೆಳ್ಳೇಕೇರಿ (ಉತ್ತರ ಕನ್ನಡ). ಕಾರ್ಯದರ್ಶಿಗಳು- ಈರಣ್ಣ ಅಂಗಡಿ (ಬೆಳಗಾವಿ ಗ್ರಾಮಾಂತರ), ಕಿರಣ್‌ ಪಲ್ಲಂ (ಬೀದರ್‌), ಅರವಿಂದ ರೆಡ್ಡಿ (ಬೆಂ. ದಕ್ಷಿಣ), ಎಸ್‌.ಶ್ವೇತಾ (ದಕ್ಷಿಣ ಕನ್ನಡ), ಅಮರೇಶ್‌ (ರಾಯಚೂರು), ಟಿ.ಮಂಜುನಾಥ್‌ (ಚಿತ್ರದುರ್ಗ). ಕೋಶಾಧ್ಯಕ್ಷ- ಕೆ.ಅನಿಲ್‌ಕುಮಾರ್‌ ಶೆಟ್ಟಿ(ಬೆಂ.ದಕ್ಷಿಣ). ಕಾರ್ಯಾಲಯ ಕಾರ್ಯದರ್ಶಿ- ರಾಹುಲ್‌ ತೇರದಾಳ (ಚಿಕ್ಕೋಡಿ).

ಅಲ್ಪಸಂಖ್ಯಾತರ ಮೋರ್ಚಾ:

ಉಪಾಧ್ಯಕ್ಷರು- ಅಹಮ್ಮದ್‌ ರಫಿ ಪೀರ್‌ಜಾತೆ (ಬಾಗಲಕೋಟೆ), ಮೊಹಮ್ಮದ್‌ ಸಿರಾಜುದ್ದೀನ್‌ (ಬೆಂ.ಉತ್ತರ), ಎಸ್‌.ಎನ್‌.ರಾಜು (ಬೆಂ.ಕೇಂದ್ರ), ನೂರ್‌ ಭಾಷಾ (ಬಳ್ಳಾರಿ), ಶಾಂತಕುಮಾರ್‌ ಕೆನಡಿ (ಬೆಂಗಳೂರು), ಶೇಕ್‌ ಚಲ್‌ಮರಡಿ (ಹುಬ್ಬಳ್ಳಿ). ಪ್ರಧಾನ ಕಾರ್ಯದರ್ಶಿಗಳು- ಸಯ್ಯದ್‌ ಸಲಾಂ (ಬೆಂ.ದಕ್ಷಿಣ), ಡಾ.ಅನಿಲ್‌ ತೋಮಸ್‌ (ಮೈಸೂರು ನಗರ). ಕಾರ್ಯದರ್ಶಿಗಳು- ಆಸೀಫ್‌ ಶೇಟ್‌ (ಬೆಂಗಳೂರು), ಸಯ್ಯದಾ ಶಾಹೀನ್‌ ಅಬ್ಬಾಸ್‌ (ಕಲಬುರ್ಗಿ), ಶ್ರಪ್‌ ರಾವತ್ತರ್‌ (ಮಂಡ್ಯ), ಮಿರ್‌ ಔಸಾಫ್‌ ಅಬ್ಬಾಸ್‌ (ಬೆಂಗಳೂರು), ಸಲೀಂ ಅಂಬಾಗಿಲು (ಉಡುಪಿ), ನಬಿ ನದಾಫ್‌ (ಬಾಗಲಕೋಟೆ). ಕೋಶಾಧ್ಯಕ್ಷ- ಬಿ.ಟಿ.ನಜೀರ್‌ ಪಾಷಾ (ಬೆಂಗಳೂರು). ಕಾರ್ಯಾಲಯ ಕಾರ್ಯದರ್ಶಿ- ಸೈಯದ್‌ ಹಪೀಜರ್‌ ರೆಹಮಾನ್‌ (ಬೆಂ.ಉತ್ತರ).

ಹಿಂದುಳಿದ ವರ್ಗಗಳ ಮೋರ್ಚಾ: 

ಉಪಾಧ್ಯಕ್ಷರು- ಗೋವಿಂದರಾಜ್‌ (ಬೆಂ.ಕೇಂದ್ರ), ಸಿದ್ದೇಶ್‌ ಯಾದವ್‌ (ಚಿತ್ರದುರ್ಗ), ಅಶೋಕ್‌ ಮೂರ್ತಿ (ಶಿವಮೊಗ್ಗ), ಶರಣಪ್ಪ ತಳವಾರ (ಕಲಬುರ್ಗಿ), ಎ.ಎಚ್‌.ಬಸವರಾಜು (ಬೆಂ.ದಕ್ಷಿಣ), ಭೋಜರಾಜ ಕರೋದಿ (ಹಾವೇರಿ). ಪ್ರಧಾನ ಕಾರ್ಯದರ್ಶಿಗಳು- ಸುರೇಶ್‌ಬಾಬು (ಮೈಸೂರು ಗ್ರಾಮಾಂತರ), ವಿವೇಕಾನಂದ ಡಬ್ಬಿ (ವಿಜಯಪುರ). ಕಾರ್ಯದರ್ಶಿಗಳು- ಕೊಟ್ರೇಶ್‌ (ಹಾಸನ), ರವಿ ದಂಡಿನ (ಗದಗ), ಸತೀಶ್‌ ಶೇಜೇವಾಡಕರ್‌ (ಹುಬ್ಬಳ್ಳಿ), ವಿಠಲ ಪೂಜಾರಿ (ಉಡುಪಿ), ಕಿರಣ ಜಾಧವ್‌ (ಬೆಳಗಾವಿ), ಉಮೇಶ್‌ ಸಜ್ಜನ್‌ (ಕೊಪ್ಪಳ). ಕೋಶಾಧ್ಯಕ್ಷ- ಆರ್‌.ಗೋವಿಂದ ನಾಯ್ಡು (ಬೆಂ.ದಕ್ಷಿಣ), ಕಾರ್ಯಾಲಯ ಕಾರ್ಯದರ್ಶಿ- ಜಯದೇವ (ಬೆಂ.ದಕ್ಷಿಣ).

ಎಸ್‌ಟಿ ಮೋರ್ಚಾ: 

ಉಪಾಧ್ಯಕ್ಷರು- ವ್ಯಾಸನಕೇರಿ ಶ್ರೀನಿವಾಸ್‌ (ವಿಜಯಪುರ), ಸಿ..ಪಿ.ಪಾಟೀಲ್‌ (ಉತ್ತರ ಕನ್ನಡ), ವೀರೇಂದ್ರ ಸಿಂಹ ಹರ್ತಿಕೋಟೆ (ಚಿತ್ರದುರ್ಗ), ಮಲ್ಲಪ್ಪ ಕೌಲಗಿ (ವಿಜಯಪುರ), ಎನ್‌.ಎಸ್‌.ಮಂಜುನಾಥ್‌ (ಪುತ್ತೂರು), ರಾಮಚಂದ್ರ (ಚಾಮರಾಜನಗರ). ಪ್ರಧಾನ ಕಾರ್ಯದರ್ಶಿಗಳು- ನರಸಿಂಹ ನಾಯ್ಕ (ದಾಸರಹಳ್ಳಿ), ಮಂಜುನಾಥ್‌ ಓಲೇಕಾರ (ರಾಣೆಬೆನ್ನೂರು). ಕಾರ್ಯದರ್ಶಿಗಳು- ಅರುಣಕುಮಾರ ಹುದಲಿ (ಹುಬ್ಬಳ್ಳಿ), ಮಹಾಂತೇಶ್‌ ನಾಯಕ (ಚಳ್ಳಕೆರೆ), ಮಂಜುಳಾ (ಕುಶಾಲನಗರ), ಶಿವಕುಮಾರ್‌ (ಬಳ್ಳಾರಿ), ಲೋಕೋಶ್‌ ಹಿಂಡಿಗೇರಿ (ಬಾಗಲಕೋಟೆ), ನಂದಕುಮಾರ್‌ (ಕಲಬುರ್ಗಿ). ಕೋಶಾಧ್ಯಕ್ಷ- ಶಿವಕುಮಾರ್‌ (ಮೈಸೂರು ನಗರ). ಕಾರ್ಯಾಲಯ ಕಾರ್ಯದರ್ಶಿ- ಸಚ್ಚಿದಾನಂದಮೂರ್ತಿ (ಬೆಂಗಳೂರು).

ಎಸ್‌ಸಿ ಮೋರ್ಚಾ: 

ಉಪಾಧ್ಯಕ್ಷರು- ಜಿ.ಎನ್‌.ನಂಜುಂಡಸ್ವಾಮಿ (ಚಾಮರಾಜನಗರ), ಈಶಪ್ಪ ಹಿರೇಮನಿ (ಕೊಪ್ಪಳ), ಬಸವರಾಜ್‌ ನಾಯಕ (ದಾವಣಗೆರೆ), ಎಂ.ವೆಂಕಟೇಶ್‌ (ಬೆಂಗಳೂರು), ಜಯಕುಮಾರ್‌ ಕಾಂಗೆ (ಬೀದರ್‌), ಶ್ರೀದೇವಿ ರಾಜನ್‌ (ಬೆಂ.ಕೇಂದ್ರ). ಪ್ರಧಾನ ಕಾರ್ಯದರ್ಶಿಗಳು- ದಿನಕರ ಬಾಬು (ಉಡುಪಿ), ಜಗದೀಶ್‌ (ಬೆಂ.ಉತ್ತರ). ಕಾರ್ಯದರ್ಶಿಗಳು- ಮಹೇಂದ್ರ ಕೌತಾಳ್‌ (ಹುಬ್ಬಳ್ಳಿ), ವೆಂಕಟೇಶ್‌ ದೊಡ್ಡೇರಿ (ಬೆಂ.ಗ್ರಾಮಾಂತರ), ರಾವ್‌ ಬಹಾದ್ದೂರ ಕದಮ್‌ (ಬೆಳಗಾವಿ), ಡಾ.ಹನುಮಂತಪ್ಪ (ಕೋಲಾರ), ನಾಮದೇವ ರಾಥೋಡ್‌ (ಕಲಬುರ್ಗಿ), ಪರಮಾನಂದ (ಮಂಡ್ಯ). ಕೋಶಾಧ್ಯಕ್ಷ- ನಾಗೇಶ್‌ (ಬೆಂ.ಗ್ರಾಮಾಂತರ). ಕಾರ್ಯಾಲಯ ಕಾರ್ಯದರ್ಶಿ- ಅರುಣ್‌ಕುಮಾರ್‌ (ಬೆಂ.ಕೇಂದ್ರ).

click me!