ಸೇವಾ ನ್ಯೂನ್ಯತೆ ಎಸಗಿದ ಗದಗಿನ ಬನಶ್ರೀ ಚಿಟ್ಸ್‌ಗೆ ರೂ.10 ಲಕ್ಷಗಳ ದಂಡ ವಿಧಿಸಿ, ಪರಿಹಾರ ನೀಡುವಂತೆ ಧಾರವಾಡ ಗ್ರಾಹಕ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿಆದೇಶಿಸಿದರು
ಧಾರವಾಡ (ಅ.7): ಹುಬ್ಬಳ್ಳಿಯ ಬಾದಾಮಿ ನಗರ ವಾಸಿ ನಂದನ ತಾಂಬೆ ಎಂಬುವವರು ಎದುರುದಾರ ಗದಗಿನ ಬನಶ್ರೀ ಚಿಟ್ಸ ಪ್ರೈವೇಟ್ ಲಿಮಿಟೆಡ್ ಇವರಲ್ಲಿ ಎರಡು ಚಿಟ್ಸ್ ಫಂಡ್‍ಗಳಲ್ಲಿ ಪ್ರತಿ ತಿಂಗಳು ರೂ.25,000 ಗಳಂತೆ ಒಟ್ಟು 15 ಕಂತುಗಳಲ್ಲಿ ರೂ.7,50,000 ತೊಡೆಗಿಸಿದ್ದರು ದೂರುದಾರ ನಂದನ ಹಣ ಸಂದಾಯ ಮಾಡಿರುವ ಕುರಿತು ಎದುರುದಾರರು 26 ರಶೀದಿಗಳನ್ನು ನೀಡಿದ್ದರು. ಸದರಿ ಚಿಟ್ಸ್ ಫಂಡ್ ಅವಧಿ ಎಪ್ರೀಲ್ 2022 ಕ್ಕೆ ಮುಕ್ತಾಯವಾಗಿತ್ತು. ಆದರೂ ಎದುರುದಾರ ಬನಶ್ರೀ ಚಿಟ್ಸ್ ಫಂಡಿನ ವ್ಯವಸ್ಥಾಪಕ ಚಂದ್ರಶೇಖರಗೌಡ ಪಾಟೀಲ ಎಂಬುವವರು ತಾವು ಎರಡೂ ಚಿಟ್ಸ್ ಫಂಡ್‍ಗಳಲ್ಲಿ ತೊಡಗಿಸಿದ ರೂ.7,50,000 ಹಾಗೂ ಶೇ.18% ಬಡ್ಡಿಯನ್ನು ಕೊಡದೇ ಇಂದು ನಾಳೆ ಅಂತಾ ಕಾಲಹರಣ ಮಾಡಿ ಹಣ ಹಿಂದಿರುಗಿಸುವಲ್ಲಿ ವಿಫಲರಾಗಿರುತ್ತಾರೆ.
ಎದುರುದಾರ ಬನಶ್ರೀ ಚಿಟ್ಸ್ ಫಂಡ್‍ರವರ ಈ ನಡಾವಳಿಕೆ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆಯಾಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:21.02.2024 ರಂದು ಈ ದೂರನ್ನು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದಾಖಲಿಸಿದ್ದರು.
undefined
ಮ್ಯಾಕ್ಸ್ ವರ್ತ ರಿಯಾಲಿಟಿ ಇಂಡಿಯಾ ಲಿ.; ಸೈಟ್ ಕೊಡಲು ತಪ್ಪಿದ್ದಲ್ಲಿ ಹಣ ಮರಳಿಸಲು ಗ್ರಾಹಕರ ಆಯೋಗ ಆದೇಶ
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ಚಿಟ್ಸ್ ಫಂಡಿನಲ್ಲಿ ತೊಡಗಿಸಿದ ರೂ.7,50,000 ಮತ್ತು ಅದರ ಮೇಲಿನ ಬಡ್ಡಿಯನ್ನು ಅವಧಿ ಮುಕ್ತಾಯವಾದ ನಂತರವೂ ಹಿಂದಿರುಗಿಸದೇ ಇರುವುದು ಗ್ರಾಹಕ ಸಂರಕ್ಷಣ ಕಾಯಿದೆಯಡಿ ಸೇವಾ ನ್ಯೂನ್ಯತೆಯಾಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.ಎದುರುದಾರ ಬನಶ್ರೀ ಚಿಟ್ಸ್ ಫಂಡ್ಸರವರು ರೂ.7,50,000 ಅದರ ಮೇಲೆ ವಾರ್ಷಿಕ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ.ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.50,000 ಪರಿಹಾರ ಹಾಗೂ ರೂ.10,000 ಈ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಎದುರುದಾರರಾದ ಗದಗ ಬನಶ್ರೀ ಚಿಟ್ಸ್ ಫಂಡ್‍ರವರಿಗೆ ಆಯೋಗ ನಿರ್ದೇಶಿಸಿದೆ.