ಮೈಸೂರಿನಲ್ಲಿ 120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ: ಸಚಿವ ಎಚ್.ಕೆ. ಪಾಟೀಲ್‌

By Kannadaprabha News  |  First Published Jan 3, 2025, 12:33 PM IST

ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುತ್ತಾರೆ. ನಿತ್ಯ 5 ಸಾವಿರಕ್ಕೂ ಹೆಚ್ಚು ಬಸ್ಸು ಸಂಚರಿಸುತ್ತಿವೆ. ಈಗಿರುವ ಬಸ್ಸು ನಿಲ್ದಾಣದ ಸಾಮರ್ಥ ಸಾಕಾಗುತ್ತಿಲ್ಲ. ಹೀಗಾಗಿ ಅತ್ಯಾಧುನಿಕ ಬಸ್ಸು ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ: ಸಚಿವ ಎಚ್.ಕೆ. ಪಾಟೀಲ್‌ 


ಬೆಂಗಳೂರು(ಜ.03): ಸಾರಿಗೆ ಇಲಾಖೆಯಿಂದ ಮೈಸೂರಿನ ಬನ್ನಿ ಮಂಟಪದಲ್ಲಿ ₹120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ಸು ನಿಲ್ದಾಣ ನಿರ್ಮಾಣ ಮಾಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುತ್ತಾರೆ. ನಿತ್ಯ 5 ಸಾವಿರಕ್ಕೂ ಹೆಚ್ಚು ಬಸ್ಸು ಸಂಚರಿಸುತ್ತಿವೆ. ಈಗಿರುವ ಬಸ್ಸು ನಿಲ್ದಾಣದ ಸಾಮರ್ಥ ಸಾಕಾಗುತ್ತಿಲ್ಲ. ಹೀಗಾಗಿ ಅತ್ಯಾಧುನಿಕ ಬಸ್ಸು ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದ್ದಾರೆ. 

ಸಂಪುಟದ ಇತರೆ ತೀರ್ಮಾನಗಳು 

Tap to resize

Latest Videos

• ಕೆಐಎಡಿಬಿ ಭೂಸ್ವಾಧೀನ ವೆಚ್ಚಗಳಿಗೆ ಅನುವಾಗುವಂತೆ ಸಾಲ ಪಡೆಯುವ ಮಿತಿಯನ್ನು 500 ಕೋಟಿ ರು.ಗಳಿಂದ 5,000 ಕೋಟಿ ರು.ಗೆ ಹೆಚ್ಚಳ. 
• ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶೇ.90 ರಷ್ಟು ರಿಯಾಯಿತಿ ದರದಲ್ಲಿ 591.63 ಚ.ಮೀ. ನಿವೇಶನ ಮಂಜೂರು. 
• ಚಿಂತಾಮಣಿಯ ತಾಲೂಕಿನ ವಡಗನಹಳ್ಳಿಯಲ್ಲಿ 149.75 ಕೋಟಿ ರು. ವೆಚ್ಚದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ. 
• ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಭಾಘದ ಸರ್ಕಾರಿ ವಸತಿ ನಿಲಯಗಳಿಗೆ 56.92 ಕೋಟಿ ರು. ವೆಚ್ಚದಲ್ಲಿ ಬೆಡ್‌ಶೀಟ್, ಸೊಳ್ಳೆ ಪರದೆ ಸೇರಿ ಇತರೆ ಅಗತ್ಯ ವಸ್ತುಗಳ ಖರೀದಿ. 
• ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ಬಿಳಿ ಜೋಳ ಖರೀದಿಗೆ 10.88 ಕೋಟಿ ರು. ವೆಚ್ಚದಲ್ಲಿ 15 ಲಕ್ಷ ಸೆಣಬಿನ ಗೋಣಿ ಚೀಲ ಖರೀದಿ.

ಬಸ್ ದರ ಶೇ.15 ಹೆಚ್ಚಳ; ಹೊಸ ವರ್ಷದಲ್ಲೂ ಗ್ಯಾರಂಟಿ ಭಾರ ಜನರ ಮೇಲೆ ಹಾಕಿದ ಸರ್ಕಾರ!

ಸರ್ಕಾರದ ಅನುಮತಿ ಬಳಿಕ 747 ಹುದ್ದೆ ಭರ್ತಿ

ಬೆಂಗಳೂರು: ವಿವಿಧ ಇಲಾಖೆ, ನಿಗಮಗಳ ಒಟ್ಟು 747 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ನೇಮ ಕಾತಿ ಪ್ರಕ್ರಿಯೆ ನಡೆಸಿಕೊಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿದ್ದು, ಸರ್ಕಾರದ ಒಪ್ಪಿಗೆ ಸಿಕ್ಕ ನಂತರ ಲಿಖಿತ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. 

ಕೃಷಿ ಮಾರಾಟ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಅಭಿವೃದ್ದಿ ಪ್ರಾಧಿ ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಗೆ ಮನವಿ ಬಂದಿದೆ. ಈ ಸಂಬಂಧ ಸಂಕ್ಷಿಪ್ತ ಅಧಿಸೂಚನೆ ಕೂಡ ಹೊರಡಿಸಲಾಗಿತ್ತು. ಆದರೆ, ಈ ಸಂಸ್ಥೆಗಳು ವಿವಿಧ ಕಾರಣಗಳನ್ನು ನೀಡಿ ವಿವರ ವಾದ ಅಧಿಸೂಚನೆಗೆ ಸಮಯ ಕೋರಿರು ವುದರಿಂದ ತಕ್ಷಣಕ್ಕೆ ಅರ್ಜಿ ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಒಳಮೀಸಲಾತಿ ಸಂಬಂಧ ತೀರ್ಮಾನ ಆಗುವವರೆಗೂ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಸರ್ಕಾರ ಅನುಮತಿ ಕೊಟ್ಟ ನಂತರ ಆದಷ್ಟು ಬೇಗ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

click me!