Congress party ದೀನ ದಲಿತರನ್ನು ಗುಲಾಮರಂತೆ ಕಾಣುತ್ತಿದೆ : ಕಾರಜೋಳ

Kannadaprabha News   | Asianet News
Published : Nov 21, 2021, 08:09 AM IST
Congress party ದೀನ ದಲಿತರನ್ನು ಗುಲಾಮರಂತೆ ಕಾಣುತ್ತಿದೆ : ಕಾರಜೋಳ

ಸಾರಾಂಶ

ದೇಶದಲ್ಲಿ ಮುಳುಗುತ್ತಿರುವ ಹಡಗು ಆಗಿರುವ ಕಾಂಗ್ರೆಸ್‌ ಪಕ್ಷ ದೇಶದಲ್ಲಿರುವ ಅಲ್ಪಸಂಖ್ಯಾತರು ಮತ್ತು ದೀನದಲಿತರನ್ನು ಒತ್ತೆಯಾಳುಗಳ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದನ್ನು ಸಮುದಾಯ ಗಮನಿಸುತ್ತಿದೆ 

 ಬಾಗಲಕೋಟೆ (ನ.21):  ದೇಶದಲ್ಲಿ ಮುಳುಗುತ್ತಿರುವ ಹಡಗು ಆಗಿರುವ ಕಾಂಗ್ರೆಸ್‌ (Congress) ಪಕ್ಷ ಈ ದೇಶದಲ್ಲಿರುವ ಅಲ್ಪಸಂಖ್ಯಾತರು (Minority) ಮತ್ತು ದೀನ ದಲಿತರನ್ನು ಒತ್ತೆಯಾಳುಗಳ ರೀತಿಯಲ್ಲಿ, ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದನ್ನು ಆ ಸಮುದಾಯಗಳ ವಿದ್ಯಾವಂತರು (Educated) ಗಮನಿಸುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Minister Govind Karjol) ಹೇಳಿದ್ದಾರೆ. ನಗರದಲ್ಲಿ ಶನಿವಾರ ಜನ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ದಲಿತರು ಹಾಗೂ ಮುಸ್ಲಿಮರು ಕಾಂಗ್ರೆಸ್‌ನ ಗುಲಾಮರಲ್ಲ ಎಂಬುದನ್ನು ಅರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಮಾತನಾಡಲಿ. ನಾವಂತೂ ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷವನ್ನು ವಿರೋಧಿ​ಸಿಕೊಂಡು ಬಂದವರು. ಆದರೆ ಸಿದ್ದರಾಮಯ್ಯನಂತವರು ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂಬುದನ್ನು ಈಗಲಾದರೂ ತಿಳಿದುಕೊಳ್ಳಲಿ ಎಂದು ಹೇಳಿದರು.

ದೇಶದಲ್ಲಿ ಹಿಂದಿನ ಪರಿಸ್ಥಿತಿ ಈಗಿಲ್ಲ. ಕಾಂಗ್ರೆಸ್‌ ಮಾಡಿರುವ ದ್ರೋಹವನ್ನು ಜನರಿಗೆ ತಿಳಿಸುವ ಕೆಲಸ ಆರಂಭಗೊಂಡಿದೆ. ಅವಸಾನದ ಅಂಚಿನಲ್ಲಿರುವ ಕಾಂಗ್ರೆಸ್‌ ಪಕ್ಷ ಆಧಾರ ರಹಿತ ಆರೋಪಗಳನ್ನು (alligation) ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಆಗ್ರಹಿಸಿದರು.

ಸ್ವಯಂ ಘೋಷಿತ ಅಧ್ಯಕ್ಷರು:  ಪ್ರಧಾನಿ ಮೋದಿ (Prime Minister Narendra modi, ಯಡಿಯೂರಪ್ಪ (BS Yediyurappa) ಸೇರಿದಂತೆ ಎಲ್ಲರ ಕುರಿತು ಹೀನಾಯವಾಗಿ ಮಾತನಾಡುವ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತ ಅಧ್ಯಕ್ಷರಿಲ್ಲ. ಸ್ವಯಂ ಘೋಷಿತ ಅಧ್ಯಕ್ಷರಾಗಿ ಸೋನಿಯಾ ಗಾಂಧಿ (Sonia Gandhi) ​ಕುರ್ಚಿಗೆ ಅಂಟಿಕೊಂಡು ಕುಳಿತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಕಾರಜೋಳ, ರಾಜ್ಯದಲ್ಲಿಯೂ ಮೂರು ಗುಂಪಾಗಿ ಮೂರಾ ಬಟ್ಟೆಯಾಗಿರುವ ಪಕ್ಷ ಆರ್‌ಎಸ್‌ಎಸ್‌ (RSS) ಬಗ್ಗೆ ಮಾತನಾಡುವ ನೈತಿಕತೆಯನ್ನು ಹೇಗೆ ಹೊಂದಲು ಸಾಧ್ಯ ಎಂದು ಪ್ರಶ್ನಿಸಿದರು.

ಸಾರಿಗೆ ಸಚಿವ ಶ್ರೀರಾಮುಲು (Shriramulu) ಮಾತನಾಡಿ, ಗೊತ್ತು ಗುರಿಯಿಲ್ಲದ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಭವಿಷ್ಯವಿಲ್ಲವೆಂದು (Future) ತಿಳಿದು ವಿನಾಕರಣ ಗೊಂದಲ ಮೂಡಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ (North karnataka) ಬಿಜೆಪಿಗೆ ಉತ್ತಮ ಭವಿಷ್ಯವಿದ್ದು ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ಬಿಜೆಪಿಯವರೇ ದಲಿತರ ಪರವಾಗಿಲ್ಲ : 

ಸಚಿವ ಗೋವಿಂದ ಕಾರಜೋಳ(Govind Karjol) ಅವರು ದಲಿತರ ಪರ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದರಿಂದಲೇ ಬಿಜೆಪಿ ದಲಿತರ ಪರವಾಗಿಲ್ಲ ಎಂಬುದು ತಿಳಿಯುತ್ತದೆ. ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯನವರ(Siddaramaiah) ವಿರುದ್ಧ ದಲಿತ ವಿರೋಧ ಪಟ್ಟಕಟ್ಟಿ ಬಿಜೆಪಿ ಪ್ರತಿಭಟನೆ ನಡೆಸಿದ್ದನ್ನು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಎಸ್ಸಿ -ಎಸ್ಟಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ ತೀವ್ರ ಖಂಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನೇಕ ಪ್ರದೇಶದಲ್ಲಿ ದಲಿತ(Dalit) ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ(Harrashment) ನಡೆದರೂ ಸಚಿವ ಕಾರಜೋಳ ಎಳ್ಳಷ್ಟು ಚಿಂತನೆ ಮಾಡಿಲ್ಲ ಎಂದು ಅರೋಪಿಸಿದರು.

ಮಾಜಿ ಸಿಎಂ ದಿ.ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯನವರೊಬ್ಬರೇ ದಲಿತರ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಅವರ ಸರ್ಕಾರವಿದ್ದ ವೇಳೆ ದಲಿತರ ಅಭಿವೃದ್ಧಿಗೆ ತಮ್ಮ ಬಜೆಟ್‌ದಲ್ಲಿ 24 ಸಾವಿರ ಕೋಟಿ ಅನುದಾನ(Grants) ಬಿಡುಗಡೆ ಮಾಡಿದ್ದರೆ, ಬಿಜೆಪಿ ಸರ್ಕಾರ(BJP Government) ಕೇವಲ 3390 ಕೋಟಿ ನೀಡಿದೆ. ಈ ಹಿನ್ನಲೆಯಲ್ಲಿ ಯಾರು ದಲಿತರ ಪರವಾಗಿದ್ದಾರೆಂಬುದು ತಿಳಿಯುತ್ತದೆ ಎಂದಿದ್ದಾರೆ.

ದಲಿತ ಸಿಎಂ ಆದ್ರೆ ನನಗೆ ಖುಷಿ ಎಂಬ ಸಿದ್ದರಾಮಯ್ಯ, ಬಿಜೆಪಿ ಟಾಂಗ್..!

ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಮಾಡಿದ ಆರೋಪ ಅಕ್ಷರಶಃ ಸುಳ್ಳಾಗಿದೆ. ಬಿಜೆಪಿ ಖಾಸಗೀಕರಣಗೊಳಿಸಲು(Privatization) ಹೊರಟಿದ್ದು, ಇದರಿಂದ ಲಕ್ಷಾಂತರ ಯುವಕರು(Youths) ಉದ್ಯೋಗವಿಲ್ಲದೆ(Jobs) ಖಾಲಿ ಕುಳಿತ್ತಿದ್ದಾರೆ. ರಾಜ್ಯದಲ್ಲಿ(Karnataka) ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ಎಸ್ಸಿ-ಎಸ್ಟಿ(SC-ST) ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳಾಗುತ್ತಿದ್ದರೂ ಬಿಜೆಪಿಯ ಯಾವೊಬ್ಬ ದಲಿತ ರಾಜಕಾರಣಿ(politician) ಧ್ವನಿ ಎತ್ತುತ್ತಿಲ್ಲ. ರಾಜ್ಯದಲ್ಲಿ ಬಿಟ್‌ಕಾಯಿನ್‌(Bitcoin) ಪ್ರಕರಣದಲ್ಲಿ ಕೆಲವು ರಾಜಕಾರಣಿಗಳು ಪಾಲ್ಗೊಂಡಿದ್ದನ್ನು ಹೆಚ್ಚಿನ ತನಿಖೆ(Investigation) ನಡೆಸಲು ರಾಜ್ಯ ಸರ್ಕಾರ(Government of Karnataka) ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ದಲಿತ ಸಂಘಟನೆಯ(Dalit organization) ಬೆಳಗಾವಿ(Belagavi) ವಿಭಾಗೀಯ ಸಂಚಾಲಕ ಶಾಮರಾವ ಘಾಟಗೆ ಮಾತನಾಡಿ, ಸಿದ್ದರಾಮಯ್ಯನವರು ಅಹಿಂದ(Ahinda) ವರ್ಗದ ಪರವಾಗಿದ್ದು, ಅವರೂ ಎಲ್ಲೂ ದಲಿತರ ವಿರುದ್ಧ ಮಾತನಾಡಿಲ್ಲ. ಬಿಜೆಪಿಯವರೇ ಇದನ್ನು ಸೃಷ್ಟಿಸಿ, ಸುಳ್ಳು ಸುದ್ದಿಯನ್ನಾಗಿ ಹುಟ್ಟಿಸಿದ್ದು, ಖಂಡನೀಯ. ಸಿದ್ದರಾಮಯ್ಯ ಕಳಂಕರಹಿತ ಕಾಂಗ್ರೆಸ್‌ ನಾಯಕರಾಗಿದ್ದಾರೆ ಎಂದರು.

ರಾಜ್ಯದಲ್ಲಿ ದಲಿತ ಮಹಿಳೆಯರಿಗೆ(Woman) ರಕ್ಷಣೆ ಇಲ್ಲದಂತಾಗಿದೆ. ಅಂಬೇಡ್ಕರ(BR Ambedkar) ಅವರ ತತ್ವ-ಸಿದ್ಧಾಂತ -ಆದರ್ಶಗಳನ್ನು ಒಪ್ಪಿಕೊಳ್ಳುವವರೆಲ್ಲ ದಲಿತರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿಯು ದಲಿತರನ್ನು ಎಂದೂ ಹಿಂದೂತ್ವ(Hindutva) ಅಜೆಂಡಾದಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದಾನೇಶ ಘಾಟಗೆ, ಉದಯ ಕಡಕೋಳ, ಗಂಗರಾಜ ಪುಟ್ಟು ಪಾಣಿ, ಮುತ್ತಣ್ಣ ಮೇತ್ರಿ, ಪರಶುರಾಮ ವಾಳೆನ್ನವರ, ವಿಠ್ಠಲ ಹೊಸಮನಿ, ಶಶಿಧರ ಮೀಸಿ, ಮಹೇಶ ಪೂಜಾರಿ, ರಾಜು ಲೋಖಂಡೆ, ಬಸವರಾಜ ಘಾಟಗೆ, ಬಾಲರಾಜ ಚವ್ಹಾಣ ಅನೇಕರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ