ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರನ್ನು ಕೋರ್ಟ್ ವಶಕ್ಕೆ ಪಡೆದು ಜಾಮೀನು ನೀಡಿ ಬಿಡುಗಡೆ ಮಾಡಿದ ಘಟನೆ ನಡೆದಿದೆ. ಅಶೋಕ್ ಖೇಣಿಗೆ ನಿಂದಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಬಳಿಕ ಶಾಸಕ ರವಿ ಗಣಿಗ ಅವರನ್ನು ಕೋರ್ಟ್ ವಶಕ್ಕೆ ಪಡೆದು ಬಿಡುಗಡೆ ಮಾಡಿದೆ.
ಬೆಂಗಳೂರು (ಮಾ.27): ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಅವರನ್ನು ನ್ಯಾಯಾಲಯದ ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಘಟನೆ ಇಂದು ನಡೆದಿದೆ. ಅಶೋಕ್ ಖೇಣಿಗೆ ನಿಂದಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಬಳಿಕ ಈ ಬೆಳವಣಿಗೆ ನಡೆದಿದೆ. ಹಲವು ಬಾರಿ ವಿಚಾರಣೆಗೆ ಗೈರಾಗಿ ಇಂದು ಕೋರ್ಟ್ಗೆ ಹಾಜರಾಗಿದ್ದರು. ಈ ವೇಳೆ ಜನಪ್ರತಿನಿಧಿಗಳ ಕೋರ್ಟ್ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದೆ. ಹಲವು ದಿನಗಳಿಂದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡರ ಬೆಂಬಲಿಗನಾಗಿದ್ದಾಗ ಅಶೋಕ್ ಖೇಣಿಗೆ ನಿಂದಿಸಿದ ಪ್ರಕರಣ ಇದಾಗಿದೆ.
ನೈಸ್ ಪ್ರಕರಣ ಒಂದರಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಇಂದು ರಿಕಾಲ್ ಮಾಡಿಕೊಳ್ಳಲು ಗಣಿಗ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ವಶಕ್ಕೆ ಪಡೆಯಲು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು ಸೂಚಿಸಿದ ಹಿನ್ನೆಲೆ ಬಳಿಕ ಕಳುಹಿಸಿ ಕೊಡಲಾಗಿದೆ.
ಕೋರ್ಟ್ ನಿಂದ ಹೊರಬಂದ ಬಳಿಕ ಮಾತನಾಡಿದ ಶಾಸಕ ರವಿ ಗಣಿಗ, ಫೈಲ್ ನೋಡಿ 5 ನಿಮಿಷ ಕುಳಿತುಕೊಳ್ಳಿ ಎಂದು ನ್ಯಾಯಾಧೀಶರು ಹೇಳಿದರು ಹೀಗಾಗಿ ಹೊರಗಡೆ ಕುಳಿತಿದ್ದೆ. ಇದರಿಂದ ಬಂಧನ ಸುದ್ದಿ ಹರಡಿದೆ. ಮುಂದಿನ ತಿಂಗಳು 15ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.