ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐದು ಕಡೆ NIA ದಾಳಿ ನಡೆದಿದೆ. ಮಾತ್ರವಲ್ಲ ಶಿವಮೊಗ್ಗ ಹುಬ್ಬಳ್ಳಿಯಲ್ಲಿ ಕೂಡ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು (ಮಾ.27): ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐದು ಕಡೆ NIA ದಾಳಿ ನಡೆದಿದೆ. ಮಾತ್ರವಲ್ಲ ಶಿವಮೊಗ್ಗ ಹುಬ್ಬಳ್ಳಿಯಲ್ಲಿ ಕೂಡ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನುಮಾನಾಸ್ಪದರ ಮನೆ ಮೇಲೆ ಮುಂಜಾನೆ ದಾಳಿ ನಡೆದಿದ್ದು, ಪ್ರಮುಖವಾಗಿ ಶಂಕಿತ ಉಗ್ರ ಮಹೆಬೂಬ್ ಪಾಷಾ ಮನೆ ಮೇಲೆ ಎನ್ ಐಎ ದಾಳಿ ನಡೆಸಿದೆ. ಬೆಂಗಳೂರಿನ ಗುರಪ್ಪನಪಾಳ್ಯದ ಮೆಹಬೂಬ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹಲವು ಕಡೆ ಶೋಧ ನಡೆಸಲಾಗಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ-ಮಾರ್ಕೆಟ್ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ಅಧಿಕಾರಿಗಳು ದಾಳೀ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
undefined
ತಮಿಳುನಾಡಿನಲ್ಲಿ ಕೂಡ ಎನ್‌ಐಎ ದಾಳಿ ನಡೆದಿದೆ. ಇಬ್ಬರು ಶಂಕಿತರು ಚೆನ್ನೈನಲ್ಲಿ ತಂಗಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದಲ್ಲಿ ತಮಿಳುನಾಡಿನಲ್ಲಿ ದಾಳಿ ನಡೆದಿದೆ. ಈಗಾಗಲೇ ಪ್ರಮುಖ ಶಂಕಿತನನ್ನು ಗುರುತಿಸಿರುವ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ಇನ್ನೂ ಆತನನ್ನು ಪತ್ತೆ ಹಚ್ಚಿ ಬಂಧಿಸಿಲ್ಲ. ಟೋಪಿ ಮತ್ತು ಮುಖವಾಡ ಧರಿಸಿದ ಉಗ್ರ ಮಾರ್ಚ್ 1ರಂದು ಕೆಫೆಗೆ ಬಂದು ಸ್ಫೋಟ ನಡೆಸಿದ್ದ.
ಕಳೆದ ಜನವರಿಯಲ್ಲಿ ತಮಿಳುನಾಡಿನ ಚೆನ್ನೈ ನಗರದ ಟೋಪಿ ಮಾರಾಟ ಮಳಿಗೆಯಲ್ಲಿ ತನ್ನ ಸ್ನೇಹಿತನ ಜತೆ ತೆರಳಿ ಉಗ್ರ ಬೇಸ್ ಬಾಲ್‌ನ ಟೋಪಿ (ಕ್ಯಾಪ್) ಖರೀದಿ ಮಾಡಿದ್ದ. ಇದಕ್ಕೆ ಪೂರಕವಾಗಿ ಆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತನ ದೃಶ್ಯ ಮತ್ತು ಕ್ಯಾಪ್ ಖರೀದಿಯ ರಸೀದಿ ಸಹ ಪತ್ತೆಯಾಗಿದೆ ಎಂದು ಮೂಲಗಳು ಹೇಳಿತ್ತು.
ಮಾ.1ರಂದು ಕೆಫೆಗೆ ಬಾಂಬ್ ಇಡಲು ಬಂದಾಗ ಕ್ಯಾಪ್ ಧರಿಸಿದ್ದ ಶಂಕಿತ ವ್ಯಕ್ತಿ, ಈ ಕೃತ್ಯ ಎಸಗಿದ ಬಳಿಕ ಹೂಡಿ ಸಮೀಪದ ಮಸೀದಿಯಲ್ಲಿ ತಾನು ಧರಿಸಿದ್ದ ಶರ್ಟ್ ಹಾಗೂ ಕ್ಯಾಪ್ ಅನ್ನು ಬಿಸಾಕಿ ಪರಾರಿಯಾಗಿದ್ದ. ಆ ಮಸೀದಿಯಲ್ಲಿ ಸಿಕ್ಕಿದ ಟೋಪಿ ಹಿಡಿದು ಶಂಕಿತನ ಬೆನ್ನತ್ತಿದ್ದ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಬಹುಮುಖ್ಯ ಸುಳಿವು ಲಭ್ಯವಾಗಿದೆ. ಅಲ್ಲದೆ ಚೆನ್ನೈನಲ್ಲಿ ಶಂಕಿತ ಉಗ್ರ ಕ್ಯಾಪ್ ಖರೀದಿಸಿದ್ದ ಅಂಗಡಿಯನ್ನು ಪತ್ತೆ ಹಚ್ಚಿದ ಎನ್‌ಐಎ, ಆ ಅಂಗಡಿಯಲ್ಲಿ ಆತ ಕ್ಯಾಪ್ ಖರೀದಿಸಲು ಬಂದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಸಂಗ್ರಹಿಸಿದೆ ಎನ್ನಲಾಗಿದೆ.
ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ತೆರಳಿದ ಶಂಕಿತ ವ್ಯಕ್ತಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಆತ ಕ್ಯಾಪ್ ಧರಿಸಿದ್ದು, ಆ ಕ್ಯಾಪ್ ಮೇಲೆ 10 ಸಂಖ್ಯೆ ಇರುವುದು ಪತ್ತೆಯಾಗಿತ್ತು. ಈ ಕ್ಯಾಪ್ ಮೇಲಿನ 10ನೇ ಸಂಖ್ಯೆ ಕುರಿತು ಪರಿಶೀಲಿಸಿದಾಗ ಅದು ಬೇಸ್ ಬಾಲ್ ಆಟಗಾರರು ಧರಿಸುವ ಕ್ಯಾಪ್ ಎಂಬುದು ಗೊತ್ತಾಯಿತು. ಆ ಕ್ಯಾಪ್ ಅನ್ನು ಪ್ರಮುಖ ಕಂಪನಿ ತಯಾರಿಸಿತ್ತು.
Rameshwaram Cafe Blast Case ಬೆಂಗಳೂರಿನ ಇಬ್ಬರು ಎನ್‌ಐಎ ವಶಕ್ಕೆ
ಆ ಕ್ಯಾಪ್ ಬೆಲೆ 350 ರಿಂದ 400 ರು. ಇದ್ದು, ಇಡೀ ದೇಶದಲ್ಲಿ ಆ ಕಂಪನಿಯ ಕ್ಯಾಪ್‌ಗಳು 300 ರಿಂದ 400 ಮಾತ್ರವಷ್ಟೇ ಮಾರಾಟವಾಗಿದ್ದವು. ಕೆಫೆ ಬಾಂಬ್ ಸ್ಫೋಟದಲ್ಲಿ ತನ್ನ ಗುರುತು ಮರೆಮಾಚುವ ಸಲುವಾಗಿ ಕ್ಯಾಪ್ ಹಾಕಲು ಯೋಜಿಸಿದ್ದ ದುಷ್ಕರ್ಮಿ, ಜನವರಿಯಲ್ಲಿ ಚೆನ್ನೈನ ಅಂಗಡಿಗೆ ಗೆಳೆಯನ ಜತೆ ತೆರಳಿ ಆ ಕ್ಯಾಪ್ ಖರೀದಿಸಿದ್ದ ಎಂದು ತಿಳಿದು ಬಂದಿದೆ.
ಅದೇ ಕ್ಯಾಪ್ ಹಾಕುವ ಉದ್ದೇಶ ಬಹುಶಃ ಆತನಿಗೆ ಇರಲಿಲ್ಲ ಅನಿಸುತ್ತದೆ. ಕ್ಯಾಪ್ ಖರೀದಿಗೆ ತೆರಳಿದ್ದಾಗ ಬಹುಶಃ ಆಚಾನಕ್ಕಾಗಿ ಬೇಸ್‌ಬಾಲ್ ಕ್ಯಾಪ್ ನೋಡಿ ಇಷ್ಟಪಟ್ಟು ಆತ ಖರೀದಿಸಿರಬಹುದು. ಇನ್ನು ಆನ್‌ಲೈನ್‌ನಲ್ಲಿ ಸಹ ಆ ಕ್ಯಾಪ್‌ಗಳು ಮಾರಾಟಕ್ಕೆ ಲಭ್ಯ ಇವೆ. ಆದರೆ ಆನ್‌ಲೈನ್‌ನಲ್ಲಿ ಖರೀದಿಸಿದರೆ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅಂಗಡಿಗೆ ಹೋಗಿಯೇ ಆರೋಪಿ ಕ್ಯಾಪ್ ಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.