ವಿದ್ಯುತ್‌ ಉತ್ಪಾದನೆ ಖಾಸಗಿಗೆ ಹೋದರೆ ರೈತ ಬೀದಿಪಾಲು

Kannadaprabha News   | Asianet News
Published : Oct 12, 2021, 09:10 AM IST
ವಿದ್ಯುತ್‌ ಉತ್ಪಾದನೆ ಖಾಸಗಿಗೆ ಹೋದರೆ ರೈತ ಬೀದಿಪಾಲು

ಸಾರಾಂಶ

ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬುದು ಮೊದಲು ಗೊತ್ತಾಗಬೇಕು. ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿಸಬಾರದು

 ಬೆಂಗಳೂರು (ಅ.12):  ಕಲ್ಲಿದ್ದಲು (Coal) ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬುದು ಮೊದಲು ಗೊತ್ತಾಗಬೇಕು. ವಿದ್ಯುತ್‌ ಉತ್ಪಾದನಾ (Power production) ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿಸಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ವಿದ್ಯುತ್‌ ಅಭಾವ ಇರಲಿಲ್ಲ. ಯಾವಾಗಲೂ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ವಿದ್ಯುತ್‌ (electricity) ಉತ್ಪಾದನೆ ಆಗುತ್ತಿತ್ತು. ನಮ್ಮಲ್ಲಿ ಹಲವು ಉಷ್ಣ ವಿದ್ಯುತ್‌ ಸ್ಥಾವರಗಳು (Thermal power plant) ಸ್ಥಗಿತವಾಗಿರುವುದರಿಂದ ನಮ್ಮ ರಾಜ್ಯಕ್ಕೆ ಹೆಚ್ಚಿನ ಕಲ್ಲಿದ್ದಲು ಅಗತ್ಯವಿಲ್ಲ. ಹೀಗಿದ್ದರೂ ಕಲ್ಲಿದ್ದಲು ಕೊರತೆ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ನಾಳೆಯೊಳಗೆ ರಾಜ್ಯಕ್ಕೆ 2 ರೇಕ್‌ ಕಲ್ಲಿದ್ದಲು : ಸಮಸ್ಯೆ ನಿರ್ಮಾಣವಾಗುವುದಿಲ್ಲ

ಈ ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಗೊತ್ತಾಗಬೇಕು. ಸರ್ಕಾರ (Govt) ವಿದ್ಯುತ್‌ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿಮಾಡಬಾರದು. ಹಾಗೇನಾದರೂ ಸರ್ಕಾರ ಮಾಡಿದರೆ ನಾನು ಅದನ್ನು ಖಂಡಿಸುತ್ತೇನೆ ಎಂದರು.

ಇನ್ನು ವಿದ್ಯುತ್‌ ಘಟಕಗಳನ್ನು ಖಾಸಗೀಕರಣ ಮಾಡುವ ಯಾವುದೇ ಯೋಚನೆ ಮಾಡಬಾರದು. ವಿದ್ಯುತ್‌ ಉತ್ಪಾದನೆ ಖಾಸಗೀಕರಣಗೊಂಡರೆ ರೈತರಿಗೆ ತೀವ್ರ ಅನ್ಯಾಯವಾಗಲಿದೆ. ಒಂದು ಸಲ ಖಾಸಗೀಕರಣಗೊಂಡರೆ ರೈತರಿಗೆ ಪೂರೈಕೆಯಾಗುತ್ತಿರುವ ಉಚಿತ ವಿದ್ಯುತ್‌ (Free Electricity) ನಿಲ್ಲಿಸುತ್ತಾರೆ. ಇದರಿಂದ ರೈತರು ಕೃಷಿ ಪಂಪ್‌ಸೆಟ್‌ಗಳಿಗೆ (Pumpset) ವಿದ್ಯುತ್‌ ಪಾವತಿಸಲಾಗದೆ ಬೀದಿಗೆ ಬರಬೇಕಾಗುತ್ತದೆ. ಹೀಗಾಗಿ ಸರ್ಕಾರ ಖಾಸಗೀಕರಣದ (Privatisation) ಯಾವುದೇ ಚಿಂತನೆ ಮಾಡಬಾರದು ಎಂದು ಒತ್ತಾಯ ಮಾಡಿದರು.

ಉಸ್ತುವಾರಿ ಜಟಾಪಟಿ- ಸಿದ್ದು ಲೇವಡಿ:

ಬೆಂಗಳೂರು ನಗರ  ಉಸ್ತುವಾರಿ ಸಚಿವ ಸ್ಥಾನಕ್ಕೆ ಸಚಿವರು, ಶಾಸಕರ ನಡುವೆ ಉಂಟಾಗಿರುವ ತಿಕ್ಕಾಟವನ್ನು ಸಿದ್ದರಾಮಯ್ಯ ಲೇವಡಿ ಮಾಡಿದ್ದು, ದೇಶಭಕ್ತರಲ್ಲವೇ. ಹೀಗಾಗಿ ಲಾಭದಾಯಕ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ ಎಂದರು. ಇದು ಲಾಭದಾಯಕ ಸ್ಥಾನವಾಗಿರುವುದರಿಂದ ಇಷ್ಟೆಲ್ಲಾ ಗಲಾಟೆಗಳಾಗುತ್ತಿವೆ ಎಂದು ಟೀಕಿಸಿದರು.

ಡಿಕೆ ಶಿವಕುಮಾರ್ - ಸಿದ್ದರಾಮಯ್ಯ ನಡುವೆ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ!

ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಬೇಕು: ಸಿದ್ದು

ಎಐಸಿಸಿಯನ್ನು (AICC) ರಾಹುಲ್‌ ಗಾಂಧಿಯವರೇ (Rahul Gandhi) ಮುನ್ನಡೆಸಬೇಕು ಎಂಬುದನ್ನು ನಾನು ಬಹುಕಾಲದಿಂದ ಹೇಳುತ್ತಿದ್ದೇನೆ. ಬಹುತೇಕರ ಅಭಿಪ್ರಾಯ ಇದೇ ಆಗಿದೆ ಎನ್ನುವ ಮೂಲಕ ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಆದಷ್ಟುಬೇಗ ಅವರೇ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!