Republic Day: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಾಂಗ್ರೆಸ್‌ ಮುಖಂಡ: ಬದಲಿ ಧ್ವಜ ಹಾರಿಸಿ ಪುಂಡಾಟ

By Sathish Kumar KH  |  First Published Jan 26, 2023, 5:14 PM IST

ಗಣರಾಜ್ಯೋತ್ಸವ ದಿನ ಕಾಂಗ್ರೆಸ್ ಮುಖಂಡ ಪ್ರಕಾಶ್‌ ಪಾಟೀಲ್‌ ಬಾರಿ ಯಡವಟ್ಟು ಮಾಡಿಕೊಂಡಿದ್ದಾರೆ. ರಾಷ್ಟ್ರಧ್ವಜದ ಬದಲಿಗೆ ಬೇರೊಂದು ಧ್ವಜವನ್ನು ಹಾರಿಸಿ, ನಂತರ ರಾಷ್ಟ್ರಗೀತೆಯನ್ನು ಹಾಡಿ ದೇಶಕ್ಕೆ ಅವಮಾನ ಮಾಡಿದ್ದಾರೆ .


ವಿಜಯಪುರ (ಜ.26): ಗಣರಾಜ್ಯೋತ್ಸವ ದಿನ ಕಾಂಗ್ರೆಸ್ ಮುಖಂಡ ಪ್ರಕಾಶ್‌ ಪಾಟೀಲ್‌ ಬಾರಿ ಯಡವಟ್ಟು ಮಾಡಿಕೊಂಡಿದ್ದಾರೆ. ರಾಷ್ಟ್ರಧ್ವಜದ ಬದಲಿಗೆ ಬೇರೊಂದು ಧ್ವಜವನ್ನು ಹಾರಿಸಿ, ನಂತರ ರಾಷ್ಟ್ರಗೀತೆಯನ್ನು ಹಾಡಿ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಸಾರ್ವಜನಿಕರಿಂದ ತೀವ್ರ ಆಕ್ರೋಶ ಎದುರಾಗಿದೆ.

ದೇಶಾದ್ಯಂತ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇಶಭಕ್ತಿ ಮೊಳಗುತ್ತಿದೆ. ದೇಶದ ಹೆಮ್ಮೆಯ ಪ್ರತೀಕವಾಗಿರುವ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ದೇಶಕ್ಕೆ ನೈಜವಾಗಿ ಸ್ವಾತಂತ್ರ್ಯ ಲಭ್ಯವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ವಿಜಯಪುರದ ಡಿಜಿಟಲ್‌ ವಿಭಾಗದ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ರಾಷ್ಟ್ರಧ್ವಜದ ಬದಲಿಗೆ ಬೇರೊಂದು ಧ್ವಜವನ್ನು ಆರೋಹಣ ಮಾಡಿದ್ದಾರೆ. ಅಷ್ಟಕ್ಕೆ ಸಾಲದೆಂಬಂತೆ ಧ್ವಜಾರೋಹಣದ ನಂತರ ರಾಷ್ಟ್ರಗೀತೆಯನ್ನು ಹಾಡುವ ಮೂಲ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Tap to resize

Latest Videos

ಇದನ್ನೂ ಓದಿ: Raichur: ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಸಾವು: ಹೃದಯಾಘಾತಕ್ಕೆ ಬಲಿ

ಸಾರ್ವಜನಿಕರಿಂದ ತೀವ್ರ ಆಕ್ರೋಶ: ಇನ್ನು ರಾಷ್ಟ್ರಧ್ವಜದ ಬದಲಿಗೆ ಬೇರೊಂದು ಧ್ವಜ ಹಾರಿಸಿದ ಘಟನೆ ವಿಜಯಪುರ ಜಿಲ್ಲೆಯ‌ ಝಳಕಿ ಸಮೀಪದ ಸಿಗಣಾಪುರ ಗ್ರಾಮದಲ್ಲಿ ನಡೆದಿದೆ. ಬದಲಿ ಧ್ವಜಾರೋಹಣ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಗ್ರಾಮಸ್ಥರು ಮತ್ತು ರಾಜ್ಯದ ಸಾರ್ವಜನಿಕರಿಂದ ಕಾಂಗ್ರೆಸ್‌ ಮುಖಂಡನ ಯಡವಟ್ಟಿನ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದು ಪಕ್ಚದಲ್ಲಿ ಜಿಲ್ಲೆಯ ಪ್ರಮುಖ ಸ್ಥಾನವನ್ನು ಹೊಂದಿದ ವ್ಯಕ್ತಿ ಆಗಿದ್ದರೂ, ಇಂತಹ ದೇಶಕ್ಕೆ ಅವಮಾನ ಮಾಡುವ ಕಾರ್ಯವನ್ನು ಮಾಡಿದ್ದಾನೆ. ಇವರಿಗೆ ಕಾನೂನು ನಿಯಮಾವಳಿ ಅನ್ಚಯ ತಕ್ಕ ಶಾಸ್ತಿ ಆಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಸಂಗೊಳ್ಳಿ ರಾಯಣ್ಣನ ಹಳದಿ ಧ್ವಜ ಹಾರಾಟ: ಇನ್ನು ದೇಶದ ಮುಂದೆ ಎಲ್ಲರೂ ಸಮಾನರು. ವೀರ ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶದಿಂದ ಗೌರವ ಸಲ್ಲಿಸಲಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಲಕ್ಷಾಂತರ ಜನ ಸ್ವಾತಂತ್ರ್ಯ ಹೋರಾಟಗಾರರು ಬಲಿದಾನ ಮಾಡಿದ್ದಾರೆ. ಆದರೆ, ಇಲ್ಲಿ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗುವಂತೆ ಹಾಗೂ ಒಂದು ಪ್ರಾಂತಕ್ಕೆ ಸೀಮಿತ ಆಗುವಂತೆ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಇರುವ ಹಳದಿ ಬಣ್ಣದ ಧ್ವಜವನ್ನು ಹಾರಿಸಲಾಗಿದೆ. ಇದರಿಂದ ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗಿದೆ. ಜೊತೆಗೆ, ರಾಯಣ್ಣನ ಧ್ವಜ ಹಾರಿಸಿದ ನಂತರ ರಾಷ್ಟ್ರಗೀತೆ ಯಾಕೆ ಹಾಡಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅವರ ಮೇಲೆ ಕ್ರಮವಹಿಸುವಂತೆ ಪೊಲೀಸರಿಗೆ ದೂರು ನೀಡುವುದಾಗಿ ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ.

ಇದನ್ನೂ ಓದಿ: Vijayapura: ದ್ರಾಕ್ಷಿ ಬೆಳೆ ರಕ್ಷಣೆಗೆ ಹೊಸ ಅಸ್ತ್ರ ಹುಡುಕಿಕೊಂಡ ರೈತರು: ಹಕ್ಕಿಗಳ ಕಾಟಕ್ಕೆ ಸಿಕ್ತು ಮುಕ್ತಿ

ರಾಜಕೀಯದ ಹೆಸರಲ್ಲಿ ದೇಶಕ್ಕೆ ಅವಮಾನ: ಇನ್ನು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಇಂತಹ ಕುಕೃತ್ಯವನ್ನು ಎಸಗಿದ್ದಾರೆ. ಕುರುಬ ಸಮುದಾಯ ಮತ್ತು ಒಂದು ಪ್ರಾಂತ್ಯದ ಜನರನ್ನು ಸೆಳೆಯುವ ದೃಷ್ಟಿಯಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ರಾಜಕೀಯಕ್ಕಾಗಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದು ಸೂಕ್ತವಲ್ಲ. ಇವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ ನಾಯಕರೇ ನೈತಿಕ ಹೊಣೆಗಾರಿಕೆ ಹೊತ್ತು ಕಠಿಣ ಕ್ರಮ ಜರುಗಿಸಬೇಕು. ಜೊತೆಗೆ, ಪೊಲೀಸ್‌ ಇಲಾಖೆಯಿಂದಲೂ ಕಾನೂನು ಕ್ರಮ ಜರುಗಿಸಬೇಕು ಎಂದು ವಿಜಯಪುರ ಜಿಲ್ಲಾ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. 

click me!