ಪಿಎಸೈ ಹಗರಣದ ಆರೋಪಿ ಆರ್‌.ಡಿ. ಪಾಟೀಲ್‌ ಕಾಂಗ್ರೆಸ್‌ ಕಾರ್ಯಕರ್ತ: ಆರಗ ಜ್ಞಾನೇಂದ್ರ

By Suvarna News  |  First Published Jan 26, 2023, 11:01 AM IST

ಪೊಲೀಸ್‌ ನೇಮಕಾತಿ ಹಗರಣದ ಆರೋಪಿ ಆರ್‌.ಡಿ. ಪಾಟೀಲ್‌ಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ. ಈ ಕುರಿತು ನಮ್ಮಲ್ಲಿ ದಾಖಲೆಯಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.


ಶಿವಮೊಗ್ಗ (ಜ.26): ಪೊಲೀಸ್‌ ನೇಮಕಾತಿ ಹಗರಣದ ಆರೋಪಿ ಆರ್‌.ಡಿ. ಪಾಟೀಲ್‌ಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ. ಈ ಕುರಿತು ನಮ್ಮಲ್ಲಿ ದಾಖಲೆಯಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ ಓರ್ವ ಬುದ್ಧಿವಂತ ಕ್ರಿಮಿನಲ್‌. ಕ್ರಿಮಿನಲ್‌ ಬ್ಯಾಗ್ರೌಂಡ್‌ ಇರುವಂತಹ ವ್ಯಕ್ತಿ. ಆರ್‌.ಡಿ. ಪಾಟೀಲ್‌ ನಮ್ಮ ಪಕ್ಷದವನಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ, ಆತ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ದಾಖಲೆ ದೊರಕಿದೆ ಎಂದರು.

ಆರೋಪಿಯನ್ನು ಹಿಡಿಯಲು ನಮ್ಮ ಪೊಲೀಸರು ಕಷ್ಟಪಟ್ಟಿದ್ದಾರೆ. ಮತ್ತೆ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದ. ಇದು ಯಾಕೆ ಎಂದು ಗೊತ್ತಾಗಬೇಕಿದೆ. ಈ ಬಗ್ಗೆ ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವನಿಗೆ ಬೇಲ್‌ ಸಿಕ್ಕಿತ್ತು, ಆದರೆ ಇದೀಗ ಕ್ಯಾನ್ಸಲ್‌ ಆಗಿದೆ. ಈಗ ಮತ್ತೆ ಆತ ಜೈಲಿಗೆ ಹೋಗಿದ್ದಾನೆ. ಆತ ಎಷ್ಟೇ ಬುದ್ಧಿವಂತನಾಗಿದ್ದರೂ ಇಲಾಖೆ ಆತನನ್ನು ಬಿಡುವುದಿಲ್ಲ. ತಪ್ಪಿಸಿಕೊಂಡರೂ ಆತನನ್ನು ಬಂಧಿಸುವ ಕೆಲಸ ನಡೆದಿದೆ ಎಂದು ಹೇಳಿದರು.

Tap to resize

Latest Videos

ಶಿವಮೊಗ್ಗ ಪಾಲಿಕೆಯಲ್ಲಿ ಟಿಪ್ಪು ಭಾವಚಿತ್ರ ಹಾಕಿದ್ದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈ ಕುರಿತು ಸಮರ್ಪಕ ಮಾಹಿತಿ ತಮ್ಮ ಬಳಿ ಲಭ್ಯವಿಲ್ಲ. ಪೊಲೀಸರ ಬಳಿ ತಿಳಿದುಕೊಂಡು ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

 

ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್‌ ಪಾಟೀಲ್‌ನಿಂದ ಮತ್ತೊಂದು ವಿಡಿಯೋ, ಭಾರೀ ವೈರಲ್‌..!

ಎಸ್‌ಐ ಕೇಸಿಂದ ಖುಲಾಸೆಗೆ ಲಂಚ: ತನಿಖೆಗೆ ಕಾಂಗ್ರೆಸ್‌ ಆಗ್ರಹ 7
ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲು ತನಿಖಾಧಿಕಾರಿಯೇ 3 ಕೋಟಿ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಹೈಕೋರ್ಚ್‌ ಮುಖ್ಯ ನ್ಯಾಯಮೂರ್ತಿಗಳಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್‌ ಲಂಚದ ಬೇಡಿಕೆ ಬಗ್ಗೆ ಲೋಕಾಯುಕ್ತರಿಗೆ ಬರೆದಿರುವ ಪತ್ರ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖಾಧಿಕಾರಿ ಡಿವೈಎಸ್ಪಿ ಶಂಕರಗೌಡ ಪಾಟೀಲ್‌ 3 ಕೋಟಿ ರು. ನೀಡಿದರೆ ಕೇಸ್‌ನಿಂದ ಬಿಡುಗಡೆ ಸಿಗುವಂತೆ ಮಾಡುತ್ತೇನೆ. ಇಲ್ಲದಿದ್ದರೆ ಬಹಳ ಕಷ್ಟಎದುರಿಸಬೇಕಾಗುತ್ತದೆ ಎಂದು ಆರ್‌.ಡಿ.ಪಾಟೀಲ್‌ಗೆ ಹೆದರಿಸಿದ್ದಾರೆ. ಹೆದರಿದ ಆರ್‌.ಡಿ.ಪಾಟೀಲ್‌ ಡೀಲ್‌ಗೆ ಒಪ್ಪಿಕೊಂಡು ಅಳಿಯ ಶ್ರೀಕಾಂತ್‌ ಮೂಲಕ 76 ಲಕ್ಷ ಪಾವತಿಸಿದ್ದಾನೆ ಎಂದಿದ್ದಾರೆ.

ಪಿಎಸ್ಐ ನೇಮಕಾತಿ ಹಗರಣ: ಕಿಂಗ್ ಪಿನ್ ಆರ್‌‌.ಡಿ ಪಾಟೀಲ್‌ಗೆ ಅರೆಸ್ಟ್‌ ವಾರೆಂಟ್

ಜಾಮೀನು ಸಿಕ್ಕ ಬಳಿಕ ಉಳಿದ 2.24 ಕೋಟಿಗೆ ಡಿವೈಎಸ್ಪಿ ಒತ್ತಾಯಿಸಿದ್ದಾರೆ. ಹಣ ಹೊಂದಿಸಲಾಗದೆ ಆರ್‌.ಡಿ.ಪಾಟೀಲ್‌ ಇದನ್ನು ಲೋಕಾಯುಕ್ತರಿಗೆ ಪತ್ರ ಬರೆದು ವಿವರಿಸಿದ್ದಾನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದರಿಂದ ಹೈಕೋರ್ಚ್‌ ಮುಖ್ಯ ನ್ಯಾಯಮೂರ್ತಿಗಳಿಂದಲೇ ಇದರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

click me!